ಬ್ಯಾಡ್ಮಿಂಟನ್ ತಾರೆ ಕ್ಯಾರೊಲಿನಾ ಮರಿನ್ ತಂದೆ ಅಪಘಾತಕ್ಕೆ ಬಲಿ

marin father
Published on

ಮ್ಯಾಡ್ಮಿಡ್: ಒಲಿಂಪಿಕ್ಸ್ ಚಾಂಪಿಯನ್ ಸ್ಪೇನ್‌ನ ಬ್ಯಾಡ್ಮಿಂಟನ್ ಆಟಗಾರ್ತಿ ಕ್ಯಾರೊಲಿನಾ ಮರಿನ್ ಅವರ ತಂದೆ ಗೊಂಜಾಲೊ ಮರಿನ್ ಪೆರೆಜ್ ಅಪಘಾತದಲ್ಲಿ ನಿಧನ ಹೊಂದಿದ್ದಾರೆ. ಕಳೆದ ಫೆಬ್ರವರಿಯಲ್ಲೇ ಅಪಘಾತ ನಡೆದಿತ್ತು. ಅನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚೇತರಿಕೆ ಕಾಣದ ಭಾನುವಾರ ಕೊನೆಯುಸಿರೆಳೆದಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಆಡಿದ ಬೆನ್ನಲ್ಲೇ ಮರಿನ್, ತಂದೆಯ ಅಪಘಾತದ ಸುದ್ದಿ ಕೇಳಿ ತವರಿಗೆ ಅವಸರದಲ್ಲಿ ಮರಳಿದ್ದರು. ಅಲ್ಲಿಂದ ಕಳೆದ 5 ತಿಂಗಳ ಕಾಲ ಗೊಂಜಾಲೊ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಹಲವು ಬಾರಿ ಶಸಚಿಕಿತ್ಸೆಗಳಿಗೆ ಒಳಗಾಗಿದ್ದರು.

ಟೋಕಿಯೊ ಒಲಿಂಪಿಕ್ಸ್ ಸಿದ್ಧತೆಯ ಭಾಗವಾಗಿ 27 ವರ್ಷದ ಮರಿನ್ ಕಳೆದ ತಿಂಗಳು ಮ್ಯಾಡ್ರಿಡ್‌ನಲ್ಲಿ ಅಭ್ಯಾಸ ಆರಂಭಿಸಿದ್ದರು. ಅವರ ಬ್ಯಾಡ್ಮಿಂಟನ್ ವೃತ್ತಿಜೀವನದ ಬೆಳವಣಿಗೆಯಲ್ಲಿ ತಂದೆ ಮಹತ್ವದ ಪಾತ್ರ ನಿರ್ವಹಿಸಿದ್ದರು ಎನ್ನಲಾಗಿದೆ. 2016ರ ರಿಯೋ ಒಲಿಂಪಿಕ್ಸ್‌ನ ಫೈನಲ್‌ನಲ್ಲಿ ಮರಿನ್, ಭಾರತದ ಪಿವಿ ಸಿಂಧು ಅವರನ್ನು ಸೋಲಿಸಿ ಸ್ವರ್ಣ ಪದಕ ಜಯಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net