ನಿಯಂತ್ರಣ ತಪ್ಪಿ ಗೋಡೆಗೆ ಗುದ್ದಿದ ಕಾರು; ಸ್ಥಳದಲ್ಲೇ ಇಬ್ಬರು ಸಾವು, ಓರ್ವನಿಗೆ ಗಂಭೀರ ಗಾಯ| Accident

WhatsApp Image 2025-08-23 at 11.04.48 AM
Published on

Accident: ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಪಕ್ಕದ ಗೋಡೆಗೆ ಗುದ್ದಿದ್ದು, ಸ್ಥಳದಲ್ಲೇ ಇಬ್ಬರು ಮೃತಪಟ್ಟು, ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ ಎಂದು ಶನಿವಾರ(ಆಗಸ್ಟ್ 23) ವರದಿಯಾಗಿದೆ.

ಕೊಲ್ಲಂನ ಓಯೂರಿನ ಪಯ್ಯಕ್ಕೋಡ್​ನಲ್ಲಿ ಅಪಘಾತ ನಡೆದಿದೆ. ಮೃತರನ್ನು ರೋಡುವಿಲ ಮೂಲದ ಮೊಹಮ್ಮದ್ ಅಲಿ(23), ಕರಿಂಗಣ್ಣೂರಿನ ಅಂಬಾಡಿ ಸುರೇಶ್ ಎಂದು ಗುರುತಿಸಲಾಗಿದೆ.

ಮೃತರ ಜೊತೆಗಿದ್ದ ಸ್ನೇಹಿತ ಅಹ್ಸಲ್ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ತಕ್ಷಣ  ಕೊಲ್ಲಂನ ಆಸ್ಪತ್ರೆಗೆ ದಾಖಲಿಸಿದ್ದು, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net