ಕಾರು ಡಿಕ್ಕಿ, ಬೈಕ್ ಸಹ ಸವಾರೆಗೆ ಗಾಯ

accident-15
Published on

ಪಡುಬಿದ್ರಿ: ಕಾರು ಡಿಕ್ಕಿಯಾಗಿ ಬೈಕ್ ಸಹ ಸವಾರೆ ಉಡುಪಿ ಒಳಕಾಡಿನ ಉಷಾ ಎಂಬುವರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಪಾಂಗಳ ಸೇತುವೆ ಬಳಿ ಬುಧವಾರ ನಡೆದಿದೆ. ಪತಿಯೊಂದಿಗೆ ಬೈಕ್‌ನಲ್ಲಿ ಉಡುಪಿಯತ್ತ ತೆರಳುತ್ತಿದ್ದ ವೇಳೆ ಹಿಂದಿನಿಂದ ಕಾರು ಡಿಕ್ಕಿಯಾಗಿ ಬೈಕ್ ಸಹಿತ ಅವರಿಬ್ಬರೂ ರಸ್ತೆ ಬಿದ್ದಿದ್ದು, ಉಷಾ ಅವರ ಕಾಲಿನ ಮೂಳೆ ಮುರಿದಿದ್ದು, ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net