ಚಾಲಕನ ನಿಯಂತ್ರಣ ತಪ್ಪಿದ ಕಾರು ಚರಂಡಿಗೆ

IMG-20240707-WA0006
Published on

ವಿಟ್ಲ: ಪೇಟೆಯ ಕಡೆಗೆ ಆಗಮಿಸುತ್ತಿದ್ದ ಕಾರು ನಾಯಕ್ಸ್ ಪೆಟ್ರೋಲ್ ಪಂಪ್ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಚರಂಡಿ ಬಿದ್ದಿದೆ.

ಬುಳ್ಳೇರಿಕಟ್ಟೆ ಕಡೆಯಿಂದ ಕಾಸರಗೋಡು ರಸ್ತೆಯ ಮೂಲಕ ವಿಟ್ಲ ಪೇಟೆಗೆ ಬರುತ್ತಿರುವ ಸಂದರ್ಭ ಪೇಟೆಯಿಂದ ಪುತ್ತೂರು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಸಮೀಪ ಇರುವ ಚರಂಡಿಗೆ ನುಗ್ಗಿದೆ. ಇದರಿಂದ ಕಾರಿನ ಮುಂಭಾಗ ಜಖಂಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net