blank

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಲು ಸಾಧ್ಯವಿಲ್ಲವೇ? ಈ ವಸ್ತು ಖರೀದಿಸಿದ್ರೆ ಸಾಕು ಸಂಪತ್ತು ಹೆಚ್ಚಾಗುತ್ತೆ! Akshaya Tritiya 2025

Akshaya Tritiya 2025

Akshaya Tritiya 2025 : ಅಕ್ಷಯ ತೃತೀಯವನ್ನು ಹಿಂದುಗಳಿಗೆ ಪವಿತ್ರ ದಿನವೆಂದು ಪರಿಗಣಿಸಲಾಗುತ್ತದೆ. ಇದನ್ನು ಚೈತ್ರ ಮಾಸದ ಅಮಾವಾಸ್ಯೆಯ ನಂತರದ ಮೂರನೇ ದಿನದಂದು ಆಚರಿಸಲಾಗುತ್ತದೆ. ಹೀಗಾಗಿ ಇಂದು ಅಕ್ಷಯ ತೃತೀಯ ದಿನವನ್ನು ಆಚರಿಸಲಾಗುತ್ತದೆ.

blank

ಅಕ್ಷಯ ತೃತೀಯದ ನಿಜವಾದ ಅರ್ಥ ಬೆಳವಣಿಗೆ ಅಥವಾ ಅಭಿವೃದ್ಧಿ ಹೊಂದುವುದು. ಅದಕ್ಕಾಗಿಯೇ ಅಕ್ಷಯ ತೃತೀಯ ದಿನದಂದು ಯಾವುದೇ ಕೆಲಸವನ್ನು ಪ್ರಾರಂಭಿಸಿದರೂ ಅದು ಇನ್ನೂ ಹೆಚ್ಚು ಬೆಳವಣಿಗೆ ತಂದುಕೊಡುತ್ತದೆ ಎಂದು ನಂಬಲಾಗಿದೆ. ಅಕ್ಷಯ ತೃತೀಯದಂದು ನಾವು ಖರೀದಿಸುವ ವಸ್ತುಗಳು ವರ್ಷವಿಡೀ ಅದೃಷ್ಟವನ್ನು ತರುತ್ತವೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.

ಸಾಮಾನ್ಯವಾಗಿ ಅನೇಕ ಜನರು ಅಕ್ಷಯ ತೃತೀಯದಂದು ಚಿನ್ನ ಖರೀದಿಸಲು ಆಸಕ್ತಿ ಹೊಂದಿರುತ್ತಾರೆ. ಕನಿಷ್ಠ ಒಂದು ಚಿನ್ನದ ಆಭರಣವಾದರೂ ಖರೀದಿಸುತ್ತಾರೆ. ಆದರೆ, ಇಂದು ಚಿನ್ನದ ಬೆಲೆ ಗಗನಮುಖಿಯಾಗಿದೆ. ಸಾಮಾನ್ಯ ಜನರ ಕೈಗಂತೂ ಚಿನ್ನ ಎಟಕುವುದೇ ಇಲ್ಲ. ಹಾಗಾದರೆ, ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಲು ಸಾಧ್ಯವಾಗದವರು, ಬೇರೇನು ಮಾಡಬಹುದು ಅನ್ನೋದನ್ನ ನಾವೀಗ ತಿಳಿದುಕೊಳ್ಳೋಣ.

ಅಕ್ಷಯ ತೃತೀಯದಂದು ಚಿನ್ನ ಖರೀದಿಸುವುದರಿಂದ ಹಲವು ಪ್ರಯೋಜನಗಳಿದ್ದರೂ, ಹೆಚ್ಚಿನ ಜನರು ಅದರ ಬೆಲೆಯಿಂದಾಗಿ ಅದನ್ನು ಪಡೆಯಲು ಸಾಧ್ಯವಿಲ್ಲ. ಚಿನ್ನ ಖರೀದಿಸಲು ಸಾಧ್ಯವಾಗದವರಿಗೆ, ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಉಪ್ಪನ್ನು ಖರೀದಿಸುವುದರಿಂದ ಚಿನ್ನದಂತೆಯೇ ಸಂಪತ್ತು ಕೂಡ ಬರುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಐಪಿಎಲ್​ನಲ್ಲಿ ವೇಗದ ಶತಕ ಬಾರಿಸಿದ ಬೆನ್ನಲ್ಲೇ ವೈಭವ್​ಗೆ ಜಾಕ್​ಪಾಟ್​: ಒಲಿದು ಬಂತು ಸುವರ್ಣಾವಕಾಶ! Vaibhav Suryavanshi

ಅಕ್ಷಯ ತೃತೀಯ ದಿನದಂದು ಕೆಲವರು ಬೆಳ್ಳಿ, ತಾಯತಗಳು ಅಥವಾ ವಾಹನವನ್ನು ಖರೀದಿಸಲು ಬಯಸಬಹುದು. ಆದರೆ ಇವುಗಳನ್ನು ಖರೀದಿಸುವುದರಿಂದಾಗುವ ಶುಭ ಪ್ರಯೋಜನಗಳನ್ನು ಕೇವಲ ಉಪ್ಪನ್ನು ಖರೀದಿಸುವ ಮೂಲಕ ಸಂಪೂರ್ಣವಾಗಿ ಪಡೆಯಬಹುದು.

ಹಿಂದೂ ಧರ್ಮಗ್ರಂಥಗಳ ಪ್ರಕಾರ, ಉಪ್ಪಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಉಪ್ಪನ್ನು ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುವ ಲಕ್ಷ್ಮಿ ದೇವಿಯ ಪುನರ್ಜನ್ಮ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಅಕ್ಷಯ ತೃತೀಯದಂದು ಉಪ್ಪನ್ನು ಸೇವಿಸುವುದರಿಂದ ಲಕ್ಷ್ಮೀಯ ಪೂರ್ಣ ಆಶೀರ್ವಾದ ಸಿಗುತ್ತದೆ. ಇದರಿಂದ ಮನೆಗೆ ಸಮತೋಲನ, ಆಶೀರ್ವಾದ ಮತ್ತು ದೀರ್ಘಕಾಲೀನ ಸ್ಥಿರತೆಯನ್ನು ತರುತ್ತದೆ ಎಂದು ನಂಬಲಾಗಿದೆ.

ಅಂದಹಾಗೆ, ಉಪ್ಪು ಎಲ್ಲರಿಗೂ ಸುಲಭವಾಗಿ ಲಭ್ಯವಿರುವ ಶುಭ ವಸ್ತುವಾಗಿರುವುದರಿಂದ, ಅಕ್ಷಯ ತೃತೀಯದಂದು ಉಪ್ಪು ಖರೀದಿಸುವುದರಿಂದ ಚಿನ್ನವನ್ನು ಖರೀದಿಸುವಷ್ಟು ಸಂಪತ್ತು ಮತ್ತು ಸಮೃದ್ಧಿ ಬರುತ್ತದೆ. ಅಕ್ಷಯ ತೃತೀಯದಂದು ಉಪ್ಪು ಖರೀದಿಸುವುದರಿಂದ ಜೀವನದಲ್ಲಿ ಶಾಶ್ವತ ಸಂತೋಷ ಮತ್ತು ಆರ್ಥಿಕ ಬೆಳವಣಿಗೆ ಸಿಗುತ್ತದೆ ಎಂದು ಹೇಳಲಾಗುತ್ತದೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ಈ 3 ರಾಶಿಯ ಮಹಿಳೆಯರು ಹುಟ್ಟಿನಿಂದಲೇ ರಾಣಿಯಂತೆ ಐಷಾರಾಮಿ ಜೀವನವನ್ನು ನಡೆಸುತ್ತಾರಂತೆ! Zodiac Signs

ಮಧ್ಯರಾತ್ರಿ ಕಳೆದರೂ ನಿದ್ದೆ ಬರ್ತಿಲ್ವಾ? ಹಾಗಾದರೆ ಈ ಸಮಸ್ಯೆಗಳನ್ನು ಎದುರಿಸಲು ನೀವು ರೆಡಿಯಾಗಿ! Sleep

Share This Article
blank

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

ದಿನವಿಡೀ ಮೊಬೈಲ್​ ನೋಡ್ತಾನೇ ಇರ್ತೀರಾ? ಈ ಚಟದಿಂದ ಹೊರ ಬರಲು ಇದೇ ಸರಳ ಮಾರ್ಗ…mobile

mobile: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ…

blank