ಕುಂದಾಪುರ: ಇಂದು ನಮ್ಮ ಭಾರತ 3 ವಿಷಯಗಳಲ್ಲಿ ಒಂದನೇ ಸ್ಥಾನ ಪಡೆದಿದೆ, ಒಂದು ಅಪಘಾತದಲ್ಲಿ ಸಾವನ್ನಪ್ಪುವವರ ಸಂಖ್ಯೆಯಲ್ಲಿ, ಮಧುಮೇಹ, ಮತ್ತೊಂದು ಕ್ಯಾನ್ಸರ್. ಈ ವಿಷಯಗಳಿಗೆ ಭಾರತ ರಾಜಾಧಾನಿಗಳಾಗಿದೆ. ಇದೆಲ್ಲ ನಮ್ಮ ಉಪೇಕ್ಷೆಯ ಫಲ, ನಾವು ತಪಾಸಣೆಗೆ ಹಿಂಜರಿಯುತ್ತೇವೆ ಎಂದು ಕುಂದಾಪುರದ ಚಿನ್ಮಯಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಉಮೇಶ್ ಪುತ್ರನ್ ಹೇಳಿದರು.
ತಲ್ಲೂರು ಇಗರ್ಜಿಯ ಸಭಾಂಗಣದಲ್ಲಿ ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ವತಿಯಿಂದ ಇನ್ನರ್‌ವೀಲ್ ಕುಂದಾಪುರ ದಕ್ಷಿಣ, ರೋಟರಿ ಸಮುದಾಯ ದಳ ತಲ್ಲೂರು, ಪ್ರಾಥಮಿಕ ಅರೋಗ್ಯ ಕೇಂದ್ರ ಗಂಗೊಳ್ಳಿ, ಕೆಥೋಲಿಕ್ ಸಭಾ ತಲ್ಲೂರು ಘಟಕ ಹಾಗೂ ಆರೋಗ್ಯ ಆಯೋಗ ತಲ್ಲೂರು ಚರ್ಚ್ ಅಶ್ರಯದಲ್ಲಿ ಮಂಗಳೂರಿನ ಜುಲೇಖಾ ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ ಆಸ್ಪತ್ರೆಯ ನುರಿತ ಅನುಭವಿ ವೈದ್ಯರಿಂದ ಕ್ಯಾನ್ಸರ್ ತಪಾಸಣಾ ಶಿಬಿರದಲ್ಲಿ ಶನಿವಾರ ಮಾತನಾಡಿದರು.
ಡಾ.ಉತ್ತಮ್ ಕುಮಾರ್ ಶೆಟ್ಟಿ, ತಲ್ಲೂರು ಗ್ರಾಪಂ ಅಧ್ಯಕ್ಷ ಗಿರೀಶ್ ಎಸ್.ನಾಯ್ಕ, ಜುಲೇಖಾ ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಎಸ್.ನೇಹ ಕಾರಂತ್ ಮಾತನಾಡಿದರು. ಡಾ.ರಾಜೇಂದ್ರ ಶೆಟ್ಟಿ, ತಲ್ಲೂರು ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಕೆಲ್ವಿನ್ ಮೆಂಡೊನ್ಸಾ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಅಧ್ಯಕ್ಷೆ ಜೂಡಿತ್ ಮೆಂಡೊನ್ಸಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸುರೇಖಾ ಪುರಾಣಿಕ್ ಕಾರ್ಯಕ್ರಮ ನಿರೂಪಿಸಿದರು.