ಕ್ಯಾನ್ಸರ್ ಮಾಹಿತಿ ಹಾಗೂ ತಪಾಸಣಾ ಶಿಬಿರ

mng-16dec-camp
Published on


ಮಂಗಳೂರು : ಬೋಳೂರು ಸಾವಿತ್ರಿ ವಾಸುದೇವ ಚಾರಿಟೇಬಲ್ ಟ್ರಸ್ಟ್ ಅಶೋಕನಗರ ಇದರ ವತಿಯಿಂದ ಜಿಲ್ಲಾ ಮತ್ತು ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದ ಸಹಯೋಗದಲ್ಲಿ ನಗರದ ಉರ್ವಸ್ಟೋರ್‌ನ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದ ಸಭಾಂಗಣದಲ್ಲಿ ಕ್ಯಾನ್ಸರ್ ಮಾಹಿತಿ, ಜಾಗೃತಿ ಹಾಗೂ ತಪಾಸಣಾ ಶಿಬಿರ ನಡೆಯಿತು.
ಎಂಐಒ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆಯ ಡಾ. ವೆಂಕಟ್ರಮಣ ಕಿಣಿ ಅವರು ಕ್ಯಾನ್ಸರ್‌ನ ಆರಂಭಿಕ ರೋಗಲಕ್ಷಣಗಳು, ಕಾರಣಗಳು - ವಯಸ್ಸು, ಅನುವಂಶೀಯ ಲಕ್ಷಣಗಳ ಪಾತ್ರ, ತಡೆಗಟ್ಟುವಿಕೆಯ ಬಗ್ಗೆ ಅರಿವು ಮೂಡಿಸಿದರು.
ಬೋಳೂರು ಸಾವಿತ್ರಿ ವಾಸುದೇವ ಚಾರಿಟೇಬಲ್ ಟ್ರಸ್ಟ್‌ನ ಹಿರಿಯ ಟ್ರಸ್ಟಿ ಬಾಲಕೃಷ್ಣ ಎಚ್, ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷೆ ಚಂಚಲ ತೇಜೋಮಯ , ಉಷಾ ನಾಯಕ್ ಉಪಸ್ಥಿತರಿದ್ದರು. ಟ್ರಸ್ಟ್‌ನ ಸ್ಥಾಪಕಾಧ್ಯಕ್ಷೆ ಸಾವಿತ್ರಿ ವಾಸುದೇವ ರಾವ್ ಸ್ವಾಗತಿಸಿ, ಮಹಿಳಾ ಮಂಡಳಿಯ ಕಾರ್ಯದರ್ಶಿ ರೇಖಾ ಶೆಟ್ಟಿ ವಂದಿಸಿದರು. ಜೇಷ್ಠಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net