222 ಮಾರ್ಗಗಳಲ್ಲಿ ಬಸ್ ಸಂಚಾರ ರದ್ದು

BMTC
Published on

ಬೆಂಗಳೂರು: ಪ್ರಯಾಣಿಕರ ಕೊರತೆಯಿಂದಾಗಿ ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಿದ್ದ ಬಸ್​ಗಳ ಕಾರ್ಯಾಚರಣೆಯನ್ನು ಬಿಎಂಟಿಸಿ ರದ್ದು ಮಾಡಿದೆ.

ಲಾಕ್​ಡೌನ್ ಸಡಿಲಿಕೆ ನಂತರ ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿದ್ದರೂ ಕರೊನಾ ಭೀತಿಯಿಂದಾಗಿ ಜನರು ಬಸ್​ಗಳಲ್ಲಿ ಓಡಾಡಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಹಲವು ಮಾರ್ಗಗಳಲ್ಲಿ ಬಸ್​ಗಳು ಖಾಲಿ ಸಂಚರಿಸುವಂತಾಗಿದೆ. ಪಶ್ಚಿಮ, ಈಶಾನ್ಯ, ದಕ್ಷಿಣ ಮತ್ತು ಉತ್ತರ ವಿಭಾಗ ವ್ಯಾಪ್ತಿಯ ವಿವಿಧ ಮಾರ್ಗಗಳಲ್ಲಿನ 222 ಅನುಸೂಚಿಯನ್ನು ಸ್ಥಗಿತಗೊಳಿಸಿ ಬಿಎಂಟಿಸಿ ಆದೇಶಿಸಿದೆ.

ಈವರೆಗೆ ಆ ಮಾರ್ಗಗಳಲ್ಲಿ ಎರಡು ಅಥವಾ ಮೂರು ಬಾರಿ ಸಂಚರಿಸುತ್ತಿದ್ದ ಬಸ್​ಗಳು, ಒಮ್ಮೆ ಮಾತ್ರ ಸಂಚರಿಸಲಿವೆ. ಪ್ರಯಾಣಿಕರಿಲ್ಲದ ಕಾರಣ 70 ಮಾರ್ಗಗಳನ್ನು ಮೊಟಕುಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net