ಈ ಫೋಟೋದಲ್ಲಿರುವ ನಟಿ ಯಾರು ಎಂದು ಊಹಿಸಬಲ್ಲಿರಾ? ಈಕೆ ಟಾಪ್ ಹೀರೋಯಿನ್...rakul preet singh

rakulpreetsingh
Published on

rakul preet singh:  ಒಬ್ಬ ನಾಯಕಿಯ ಬಾಲ್ಯದ ಫೋಟೋ ಸೋಶಿಯಲ್​​ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಆ ಫೋಟೋದಲ್ಲಿರುವ ಪುಟ್ಟ ಹುಡುಗಿ ಯಾರು ಎಂದು ನಿಮಗೆ ಗೊತ್ತಾ? ಈ ಪ್ರಶ್ನೆಗೆ ನಿಮಗೆ ಉತ್ತರ ತಿಳಿಯದೇ ಇದ್ದರೆ ನಾವು ಇಂದು ಈ ಕುರಿತಾಗಿ ನಿಮಗೆ ತಿಳಿಸಿ ಕೊಡಲಿದ್ದೇವೆ.

ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿ ಎಲ್ಲರನ್ನೂ ಮೆಚ್ಚಿಸಿದ ಚೆಲುವೆ ರಾಕುಲ್ ಪ್ರೀತ್ ಸಿಂಗ್ 10 October 1990 (age 35 years) ಇಂದು 35 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸಂದರ್ಭದಲ್ಲಿ ಇವರು ಬಾಲ್ಯದ ಫೋಟೋಗಳು ವೈರಲ್​​ ಆಗುತ್ತಿವೆ.

ನಟಿ ರಕುಲ್ ಪ್ರೀತ್ ಸಿಂಗ್ 2009ರಲ್ಲಿ ಬಿಡುಗಡೆಯಾದ ರಾಘವ್ ಲೋಕಿ ನಿರ್ದೇಶನದ ಕನ್ನಡದ ರೋಮ್ಯಾಂಟಿಕ್ ‘ಗಿಲ್ಲಿ’ ಸಿನಿಮಾದಲ್ಲಿ ಜಗ್ಗೇಶ್ ಪುತ್ರ ಗುರುರಾಜ್‌ಗೆ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಮೂಲಕ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಸಾಲು ಸಾಲು ಸಿನಿಮಾಗಳ ಸೋಲುಗಳಿಂದ ಕಂಗಲಾಗಿರುವ ನಟಿ ರಕುಲ್ ಇದೀಗ ಯಶಸ್ಸಿಗಾಗಿ ಎದುರು ನೋಡುತ್ತಿದ್ದಾರೆ.

ಒಂದು ಕಾಲದಲ್ಲಿ ತೆಲುಗಿನಲ್ಲಿ ಸಾಲು ಸಾಲು ಬ್ಲಾಕ್ ಬಸ್ಟರ್ ಹಿಟ್ ಗಳನ್ನು ಪಡೆದಿದ್ದ ರಕುಲ್ ಈಗ ಚಿತ್ರಗಳಿಂದ ದೂರ ಉಳಿದಿದ್ದಾರೆ. ರಕುಲ್ ನಿರ್ಮಾಪಕ ಜಾಕಿ ಭಗ್ನಾನಿ ಅವರನ್ನು ಪ್ರೀತಿಸುತ್ತಿದ್ದರು. ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಇಬ್ಬರೂ ಫೆಬ್ರವರಿ 21, 204 ರಂದು ವಿವಾಹವಾದರು.

ರಕುಲ್ ಪ್ರೀತ್ ಹೆಚ್ಚಾಗಿ ಹಿಂದಿಯಲ್ಲಿ ನಟಿಸುತ್ತಾರೆ. ಅವರು ಇತ್ತೀಚೆಗೆ ದೇ ದೇ ಪ್ಯಾರ್ ದೇ 2 ಚಿತ್ರದಲ್ಲಿ ನಟಿಸಿದ್ದಾರೆ. ಅವರು ಆಯೇಷಾ ಖುರಾನಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಅಜಯ್ ದೇವಗನ್, ಆರ್. ಮಾಧವನ್ ಮತ್ತು ಟಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ನವೆಂಬರ್ 14 ರಂದು ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net