ಅವನತಿಯಂಚಿನ ಸಂಸ್ಕೃತಿ ಪರಿಚಯಿಸುವ ಕಾರ್ಯ

huvinakolu
ನವರಾತ್ರಿಯ ಸಂದರ್ಭದ ಹೂವಿನಕೋಲು ಅಭಿಯಾನ ಕಾರ್ಯಕ್ರಮದಲ್ಲಿ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಚಾಲನೆ ನೀಡಿ ಮಾತನಾಡಿದರು.
Published on

ಕೋಟ: ನವರಾತ್ರಿಯಲ್ಲಿ ಮನೆಯಂಗಳಕ್ಕೆ ಹೂವಿನಕೋಲು ಹಿಡಿದು ಬರುವ ಮಕ್ಕಳನ್ನು ಗೌರವಿಸುವುದು ಸಂಸ್ಕೃತಿ. ಸಂಸ್ಕೃತಿ, ಸಂಪ್ರದಾಯ ನಾಶವಾಗುತ್ತಿರುವ ಹೊತ್ತಿನಲ್ಲಿ ಮನೆ ಮನೆಗಳಿಗೆ ತೆರಳಿ ಹೂವಿನಕೋಲು ಪರಿಚಯಿಸುವ ಕಾರ್ಯ ಮಾಡುತ್ತಿರುವ ಸಂಸ್ಥೆಯನ್ನು ಸಮಾಜ ಗೌರವಿಸಬೇಕು ಎಂದು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಹೇಳಿದರು.

ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ನೇತೃತ್ವದಲ್ಲಿ ಶುಕ್ರವಾರ ನವರಾತ್ರಿಯ ಸಂದರ್ಭದ ಹೂವಿನಕೋಲು ಅಭಿಯಾನ ಕಾರ್ಯಕ್ರಮವನ್ನು ಶ್ವೇತಯಾನ-64 ಕಾಯಕ್ರಮದಡಿ ಚಾಲನೆ ನೀಡಿ ಮಾತನಾಡಿದರು.

ಉದ್ಯಮಿ ಪ್ರಶಾಂತ್ ಕುಂದರ್, ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಹಂಗಾರಕಟ್ಟೆ ಕೇಂದ್ರದ ಗುರುಗಳು, ಕಲಾವಿದರು ಹಾಗೂ ಯಶಸ್ವೀ ಕಲಾವೃಂದದ ಕಲಾವಿದರು ಉಪಸ್ಥಿತರಿದ್ದರು. ಬಳಿಕ ಗೋಪಾಡಿ, ಕುಂಭಾಶಿ, ಕೋಟ, ಹಂದಟ್ಟು ಹೀಗೆ ನಾಲ್ಕು ತಂಡಗಳು ಬೇರೆ ಬೇರೆ ಮನೆಗಳಲ್ಲಿ ಹೂವಿನಕೋಲು ಕಾರ್ಯಕ್ರಮ ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net