

ನಗರ ಪ್ರದೇಶಗಳಲ್ಲಿ ಆಹಾರ ಸಿಗದೆ ಪರದಾಡುವ ಬೀದಿನಾಯಿಗಳು, ಬಿಡಾಡಿ ಹಸುಗಳೆಂದರೆ ತಿರಸ್ಕಾರ ಅಸಹನೆ ವ್ಯಕ್ತಪಡಿಸುವವರ ಮಡುವೆ ಮೂಕಪ್ರಾಣಿಗಳಿಗಾಗಿ ಮಿಡಿಯುವವರು ವಿರಳ. ಬೆಳಗಾವಿಯ ಗಲ್ಲಿ-ಗಲ್ಲಿಗಳಲ್ಲಿ ಅಸಹಾಯಕತೆಯಿಂದ ಅಡ್ಡಾಡುವಂತಹ ಇಂಥ ಬೀದಿ ನಾಯಿಗಳು, ಬಿಡಾಡಿ ದನಗಳ ಪಾಲಿಗೆ ಮಾತೆಯಂತೆ ಮಮತೆ ತೋರಿಸುತ್ತಿರವವರು ಟಿಳಕವಾಡಿಯ ಲಕ್ಷ್ಮೀ ಕುಂಚೂರ. ಅವರ ಸೇವಾ ಮನೋಭಾವಕ್ಕೆ ಕ್ಯಾಡ್ಬರಿ ಡೈರಿ ಮಿಲ್ಕ್ ಧನ್ಯವಾದ ಅರ್ಪಿಸುತ್ತದೆ.
ಬಾಲ್ಯದಿಂದಲೂ ಪ್ರಾಣಿ-ಪ್ರೀತಿ ಬೆಳೆಸಿಕೊಂಡು ಮೂಕಪ್ರಾಣಿಗಳ ಸೇವೆಯಲ್ಲೇ ಬದುಕಿನ ಸಾರ್ಥಕತೆ ಕಾಣುತ್ತಿರುವವರು ಲಕ್ಷ್ಮೀ. ಬೀದಿಬೀದಿಗಳಲ್ಲಿರುವ ನಾಯಿ, ದನಕರುಗಳಿಗೆ ಆಹಾರ ನೀಡುವ ಕಾರ್ಯವನ್ನು ಅವರು ಒಂದು ತಪಸ್ಸಿನಿಂತೆ ನಡೆಸಿಕೊಂಡು ಬರುತ್ತಿದ್ದಾರೆ. ಬೆಳಗಾವಿಯ ಗೋವಾವೇಸ್, ಆರ್ಪಿಡಿ ಕಾಲೇಜು, ಮಚ್ಛೆ ಪೀರನವಾಡಿ, ವಾಘವಾಡೆ ರಸ್ತೆಯಲ್ಲಿನ 300ಕ್ಕೂ ಅಧಿಕ ಬೀದಿನಾಯಿಗಳು, ಬೀಡಾಡಿ ದನಗಳಿಗೆ ಅವರು ನಿತ್ಯವೂ ಆಹಾರ, ಬಿಸ್ಕತ್ತು ನೀಡಿ ಮಾನವೀಯತೆ ಮೆರೆಯುತ್ತಾ ಬಂದಿದ್ದಾರೆ. ಮಳೆ ಬರಲಿ, ಬೇಸಿಗೆ-ಚಳಿ ಇರಲಿ ಲಕ್ಷ್ಮೀ ನಿತ್ಯದ ದಿನಚರಿ ಮಾತ್ರ ಬದಲಾಗುವುದಿಲ್ಲ ಎಂದು ನಗರವಾಸಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಮಹಾನಗರದಲ್ಲಿ ಬೀದಿನಾಯಿಗಳು ಅಪಘಾತಕ್ಕೀಡಾಗಿ ಗಾಯಗೊಂಡರೆ ತಕ್ಷಣವೇ ಅವುಗಳನ್ನು ಪಶು ವೈದ್ಯಕೀಯ ಆಸ್ಪತ್ರಗೆ ಕರೆದೊಯ್ದು ತಮ್ಮ ಸ್ವಂತ ಹಣದಲ್ಲೇ ಲಕ್ಷ್ಮೀ ಕುಂಚೂರ ಚಿಕಿತ್ಸೆ ಕೊಡಿಸುತ್ತಾರೆ. ಅಲ್ಲದೆ, ಈ ನಾಯಿಗಳು ಗುಣಮುಖವಾಗುವವರೆಗೆ ಅವುಗಳ ಲಾಲನೆ-ಪಾಲನೆಯನ್ನೂ ಮಾಡುತ್ತಾರೆ.
ನನಗೆ ಬಾ
ಲಕ್ಷ್ಮೀ ಅವರ ಪತಿ ಸರ್ಕಾರಿ ನೌಕರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅವರಿಗೆ ಬರುವ ಮಾಸಿಕ ಪಿಂಚಣಿ ಮೊತ್ತ ಮತ್ತು ಸೀರೆ ಮಾರಾಟದಲ್ಲಿ ಬರುವ ಆದಾಯದಲ್ಲಿ ಈ ಸೇವೆ ಮಾಡುತ್ತಿದ್ದಾರೆ. ಸ್ವತಃ ಪ್ರಾಣಿಗಳ ಸೇವೆ ಮಾಡುವ ಜೊತೆಗೆ ಸುತ್ತಮುತ್ತಲಿನವರಿಗೆ ಅರಿವು ಮೂಡಿಸುವ ಕೆಲಸವನ್ನೂ ಲಕ್ಷ್ಮೀ ಮಾಡುತ್ತಾರೆ. ಅನೇಕ ಮಕ್ಕಳು, ಯುವಕರು
ನಗರ ಜೀವನದ ಜಂಜಡಗಳಲ್ಲಿ ಮುಳುಗಿಹೋಗಿರುವ ಜನರು ಪ್ರಕೃತಿಯೊಂದಿಗಿನ ನಂಟನ್ನೆ ಕಡಿದುಕೊಂಡುಬಿಟ್ಟಿರುತ್ತಾರೆ. ಹೀಗಾಗಿ ಮೂಕಪ್ರಾಣಿಗಳೂ ಮನುಷ್ಯರಂತೆಯೇ ಅವುಗಳಿಗೂ ಹಸಿವು ನೀರಡಿಕೆ ಇರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳದೆ ಪ್ರಾಣಿಗಳ ವಿಚಾರದಲ್ಲಿ ಕಠೋರವಾಗಿ ವರ್ತಿಸುತ್ತಾರೆ. ಪ್ರಾಣಿಪಕ್ಷಿಗಳು ಕೂಡ ನಾವು ಬದುಕುವ ಪ್ರಕೃತಿಯ ಒಂದು ಭಾಗ ಎಂದು ಅರ್ಥ ಮಾಡಿಕೊಂಡು ಬೀದಿ ನಾಯಿಗಳಿಗೆ, ಬಿಡಾಡಿ ಹಸುಗಳಿಗೆ, ಪಕ್ಷಿಗಳಿಗೆ ಆಹಾರ, ನೀರು ಒದಗಿಸುವ ಮೂಲಕ ಸಮಾಜದಿಂದ ಪಡೆದುಕೊಂಡಿದ್ದನ್ನು ಸಮಾಜಕ್ಕೆ ಮರಳಿಸುವುದು ನಮ್ಮ ಕರ್ತವ್ಯ ಎಂದು ಲಕ್ಷ್ಮೀ ಹೇಳುತ್ತಾರೆ. ಲಕ್ಷ್ಮೀ ಅವರ ಪ್ರಾಣಿ ಪ್ರೀತಿ ಮತ್ತು ಸೇವಾಮನೋಭಾವಕ್ಕೆ ಕ್ಯಾಡ್ಬರಿ ಡೈರಿ ಮಿಲ್ಕ್ ಧನ್ಯವಾದ ಅರ್ಪಿಸುತ್ತದೆ.