ರಾಜಧಾನಿಯಲ್ಲಿ ರೇಪ್ ಆರೋಪ: ಪ್ರಯಾಣಿಕಳ ಮೇಲೆರಗಿದನೇ ಕ್ಯಾಬ್​ ಚಾಲಕ?!

pic rape
Published on

ಬೆಂಗಳೂರು: ಮೈಸೂರಿನಲ್ಲಾದ ಗ್ಯಾಂಗ್​ರೇಪ್​ ಪ್ರಕರಣದ ಬಗ್ಗೆ ಇಂದು ಸದನದಲ್ಲಿ ಶಾಸಕರು ಚರ್ಚೆ ನಡೆಸುತ್ತಿರುವ ಸಂದರ್ಭದಲ್ಲಿ, ರಾಜಧಾನಿ ಬೆಂಗಳೂರಿನಲ್ಲೇ ಯುವತಿಯೊಬ್ಬಳ ಮೇಲೆ ಅತ್ಯಾಚಾರ ನಡೆದಿರುವ ವರದಿ ಬಂದಿದೆ. ನಗರದ ಮುರುಗೇಶ್​ ಪಾಳ್ಯದ ಬಳಿ ನಡೆದಿರುವ ಕೃತ್ಯದ ಸಂತ್ರಸ್ತೆಯು ಉತ್ತರ ಭಾರತ ಮೂಲದವಳು ಎನ್ನಲಾಗಿದೆ.

ನಿನ್ನೆ ರಾತ್ರಿ 2 ಗಂಟೆಯ ಸುಮಾರಿಗೆ ಯುವತಿಯೊಬ್ಬಳು, ಹೆಚ್.ಎಸ್.ಆರ್​​.ಲೇಔಟ್​​ನಿಂದ ಮುರುಗೇಶಪಾಳ್ಯಕ್ಕೆ ಕ್ಯಾಬ್ ಬುಕ್ ಮಾಡಿದ್ದಳು. ಕ್ಯಾಬ್​ ಹತ್ತಿ ಹೋದ ಯುವತಿಯ ಮೇಲೆ ಕ್ಯಾಬ್​ ಚಾಲಕ ಡ್ರಾಪ್ ಲೊಕೇಷನ್ನಿನಲ್ಲಿ ಲೈಂಗಿಕ ಅತ್ಯಾಚಾರ ಎಸಗಿದ ಎನ್ನಲಾಗಿದೆ. ಈ ಕೃತ್ಯವು ಜೀವನ್ ಬೀಮಾನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net