ಭಾರತೀಯ ತೆರಿಗೆ ನೀತಿ ಪ್ರಪಂಚದಲ್ಲೇ ಶ್ರೇಷ್ಠವಾದದ್ದು : ಸಿಎ ಎಸ್.ಎಸ್. ನಾಯಕ್ ಅಭಿಮತ

mng-14aug-s s nayak
Published on


ಮಂಗಳೂರು : ಭಾರತೀಯ ತೆರಿಗೆ ನೀತಿ ಪ್ರಪಂಚದಲ್ಲೇ ಶ್ರೇಷ್ಠವಾದದ್ದು. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಇದರ ಪ್ರಾಥಮಿಕ ಅರಿವು ಪ್ರತಿಯೊಬ್ಬರಿಗೂ ಅತ್ಯಗತ್ಯ ಎಂದು ಸಿಎ ಎಸ್.ಎಸ್. ನಾಯಕ್ ಹೇಳಿದರು.
ನಿಟ್ಟ್ಟೆೆಯ ಅಟಲ್ ಇನ್ಕುೃಬೇಶನ್ ಸೆಂಟರ್ ಮತ್ತು ವಿಶ್ವಕರ್ಮ ಕಲಾ ಪರಿಷತ್ ಸಹಯೋಗದಲ್ಲಿ ನಗರದ ಬಿಜೈಯ ಕೆ - ಟೆಕ್ ಇನ್ನೊವೇಶನ್ ಹಬ್ನಲ್ಲಿ ನಡೆದ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿದ ಅವರು ಅಸಂಘಟಿತ ವಲಯದಲ್ಲಿರುವಂತಹ ಕುಶಲಕರ್ಮಿಗಳು ಆದಾಯ ತೆರಿಗೆ ಘೋಷಣೆ ಮಾಡಿಕೊಳ್ಳುವುದರಿಂದ ಆಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.
ಅಟಲ್ ಇನ್ಕುೃಬೇಶನ್ ಸೆಂಟರ್‌ನ ಸಿಇಒ ಡಾ.ಎ.ಪಿ.ಆಚಾರ್ ಅವರು ಜಿಎಸ್‌ಟಿ ನೋಂದಣಿ, ಆಧುನಿಕ ತಂತ್ರಜ್ಞಾನದ ಬಳಕೆ ಕುರಿತು
ಮಾಹಿತಿ ನೀಡಿದರು. ವಿಶ್ವಕರ್ಮ ಕಲಾ ಪರಿಷತ್‌ನ ಅಧ್ಯಕ್ಷ ಡಾ.ಎಸ್.ಪಿ.ಗುರುದಾಸ್ ಅಧ್ಯಕ್ಷತೆ ವಹಿಸಿದ್ದರು.
ಪರಿಷತ್ತಿನ ಗೌರವಾಧ್ಯಕ್ಷ ಪಿ.ಎನ್.ಆಚಾರ್ಯ, ಉಪಾಧ್ಯಕ್ಷೆ ರತ್ನಾವತಿ .ಜೆ. ಬೈಕಾಡಿ, ಗೌರವ ಸಲಹೆಗಾರ ಪ್ರೊ.ಜಿ. ಯಶವಂತ ಆಚಾರ್ಯ, ಸುಂದರ ಆಚಾರ್ಯ ಬೆಳುವಾಯಿ, ಪರಿಷತ್ತಿನ ಖಜಾಂಚಿ ಎ. ಜಿ. ಸದಾಶಿವ, ಉಪ ಖಜಾಂಚಿ ನಾಗರಾಜ್ ಕೆ. ಎಸ್., ಸಂಘಟನಾ
ಕಾರ್ಯದರ್ಶಿ ಅರ್ಚನಾ ಆಕಾಶಭವನ, ಜತೆ ಕಾರ್ಯದರ್ಶಿ ಸುಧಾಮ ಆಚಾರ್ಯ , ಸಿಎ ಸುಮನ್ ಶೆಟ್ಟಿ , ಶ್ರೇಯಸ್ ಕಾಮತ್ ಉಪಸ್ಥಿತರಿದ್ದರು. ಅಕ್ಷತಾ ಸ್ವಾಗತಿಸಿ, ದೀಕ್ಷಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net