ಸಿಪಿವೈ ಸಚಿವರಾಗೋದು ಗ್ಯಾರೆಂಟಿ- ಸುಳಿವು ನೀಡಿದ್ರು ಬಿಎಸ್​ವೈ

CP Yogishwar
CP Yogishwar
Published on

ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನಾರಚನೆ, ವಿಸ್ತರಣೆ ಕುರಿತ ಕುತೂಹಲ, ನಿರೀಕ್ಷೆಗಳು ಮುಂದುವರಿದಿರುವಂತೆಯೇ ಅದಕ್ಕೂ ಮೊದಲು ನಿಗಮ, ಮಂಡಳಿಗಳ ಸ್ಥಾನ ತುಂಬುವ ಕೆಲಸ ಮಾಡಿದ್ರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಆದಾಗ್ಯೂ, ಸಚಿವಸಂಪುಟ ವಿಸ್ತರಣೆ, ಪುನಾರಚನೆ ಕುತೂಹಲ ಉಳಿಸಿಕೊಂಡಿರುವ ಬಿಎಸ್​ವೈ ಒಂದೊಂದೇ ಸುಳಿವು ನೀಡಲಾರಂಭಿಸಿದ್ದಾರೆ.

ಸಿ.ಪಿ.ಯೋಗೀಶ್ವರ್ ಅವರಿಗೆ ಸಚಿವ ಸ್ಥಾನ ನೀಡುವುದರ ಬಗ್ಗೆ ಬಿಎಸ್​ವೈ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಶಾಸಕ ರೇಣುಕಾಚಾರ್ಯ ವಿರೋಧ ವ್ಯಕ್ತಪಡಿಸಿದ್ದರು. ಸುದ್ದಿಗಾರರು ಈ ಬಗ್ಗೆ ಸಿಎಂ ಅವರನ್ನು ಪ್ರಶ್ನಿಸಿದಾಗ, ಸಿ.ಪಿ.ಯೋಗೀಶ್ವರ್ ಸಚಿವರಾಗೋದು ಖಚಿತ ಎಂದು ಬಿಎಸ್​ವೈ ಸ್ಪಷ್ಟಪಡಿಸಿದರು.

ಅವರು ಮಂಗಳವಾರ ಬೆಳಗ್ಗೆ ರಾಜ್ಯದ ಎರಡನೇ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಪುಣ್ಯತಿಥಿ ನಿಮಿತ್ತ ಅವರ ಪ್ರತಿಮೆ ಗೌರವ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವೇಳೆ ಸಚಿವ ಸಂಪುಟಕ್ಕೆ ಸಿಪಿವೈ ಸೇರ್ಪಡೆ ವಿಷಯ ದೃಢೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net