

ಉಡುಪಿ: ಭೈರಪ್ಪ ಎಂಬ ಸಾಹಿತ್ಯ ಮಹಾಸಾಗರದೊಳಗೆ ರಾಜಕೀಯ ಬೆರೆತು, ಕೊನೆಗೂ ಅವರಿಗೆ ಜ್ಞಾನಪೀಠ ಲಭಿಸಲೇ ಇಲ್ಲ. ಇದು ಅವರಿಗಾದ ನಷ್ಟವಲ್ಲ, ಕನ್ನಡ ಸಾಹಿತ್ಯ ಲೋಕಕ್ಕೆ, ಜ್ಞಾನಪೀಠಕ್ಕಾದ ನಷ್ಟ ಎಂದು ಸಾಹಿತಿ ಎಎಸ್ಎನ್ ಹೆಬ್ಬಾರ್ ಹೇಳಿದರು.
ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಅಮೋ ಸಾಹಿತ್ಯ ಸಂಟನೆ ಆಶ್ರಯದಲ್ಲಿ ನಡೆದ ಸಾಹಿತ್ಯ ರತ್ನ ಸರಸ್ವತಿ ಸಮ್ಮಾನ್ ಪುರಸತ ದಿ. ಎಸ್.ಎಲ್. ಬೈರಪ್ಪನವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭೈರಪ್ಪ ಅಧ್ಯಯನಶೀಲ ಮತ್ತು ನಿರ್ಭೀತ ಬರಹಗಾರರಾಗಿದ್ದರು. ಇದೇ ಕಾರಣಕ್ಕೆ ಆವರಣ ಕಾದಂಬರಿ ಬರೆಯಲು ಸಾಧ್ಯವಾಯಿತು. ವಿರೋಧವನ್ನು ಸತ್ಯದ ಮೂಲಕ ಎದುರಿಸುವ ಛಾತಿ ಹೊಂದಿದ್ದರು ಎಂದರು.
ಹಿರಿಯ ಸಾಹಿತಿ ಶ್ರೀನಿವಾಸ ದೇಶಪಾಂಡೆ ಮಾತನಾಡಿ, ಬೈರಪ್ಪ ಆ ಕಾಲಕ್ಕೆ ಕಡುಬಡತನವನ್ನು ಮೀರಿ ಸಾಹಿತ್ಯವನ್ನು ಕಟ್ಟಿ ದಂತಕತೆಯಾಗಿ ಮೆರೆದವರು. ಬೈರಪ್ಪ ಅವರನ್ನು ದೂರ ಮಾಡಿ ಕನ್ನಡ ಸಾಹಿತ್ಯ ಇಲ್ಲವೇ ಇಲ್ಲ ಎಂಬ ಸ್ಥಿತಿ ಇದೆ. ಆ ಮಟ್ಟದಲ್ಲಿ ಅವರು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಸ್ವಾಧ್ಯಾಯ ಮತ್ತು ಕಾದಂಬರಿ ಬರೆಯುವುದನ್ನು ಹೊರತುಪಡಿಸಿ ಉಳಿದ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಲೇಖಕಿಯರ ಸಂದ ಅಧ್ಯಕ್ಷೆ ಡಾ.ನಿಕೇತನ ನುಡಿನಮನ ಸಲ್ಲಿಸಿದರು. ಅಮೋ ಸಂಚಾಲಕ ಕುಯಿಲಾಡಿ ಸುರೇಶ್ ನಾಯಕ್, ಪ್ರಧಾನ ಕಾರ್ಯದರ್ಶಿ ಅನಿಲ್ ಶೆಟ್ಟಿ ಮಾಬೆಟ್ಟು ಉಪಸ್ಥಿತರಿದ್ದರು. ಅಮೋ ಸಂಟನೆಯ ಪೂರ್ಣಿಮಾ ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂದೀಪ್ ಸ್ವಾಗತಿಸಿದರು. ಪ್ರಭಾಕರ ಬಂಡಿ ಕಾರ್ಯಕ್ರಮ ನಿರೂಪಿಸಿದರು.