

ಬೈಂದೂರು: ಐಡಿಯಲ್ಪ್ಲೇ ಅಬಾಕಸ್ ಚಿತ್ರದುರ್ಗದಲ್ಲಿ ಇತ್ತೀಚೆಗೆ ನಡೆಸಿದ 19ನೇ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಬೈಂದೂರು ಸೆಂಟರ್ನ ವಿಧ್ಯಾರ್ಥಿಗಳಾದ ಧನರಾಜ್, ವಿಖ್ಯಾತ, ಸುದೀಶ್, ರಿತ್ವೀಕಾ, ಸ್ವಸ್ತಿ, ಆರ್ಯನ್ ರಾವ್ ಪ್ರಥಮ ಸ್ಥಾನ, ಅಧೀಶ್, ಯಕ್ಷ ಯು.ಹೆಗ್ಡೆ, ವಿಜೇಶ್ ಖಾರ್ವಿ, ಬಿಂದುಶ್ರೀ, ಆಯುಷ್ ಆರ್.ಪೂಜಾರಿ, ಸ್ಫೂರ್ತಿ, ಹರ್ಷಿತ್ ಪಿ. ದ್ವಿತೀಯ ಸ್ಥಾನ, ಸಾತ್ವಿ, ಸಾನ್ವಿ, ರಿಶ್ವಿತ್, ಲಿಖೀತ್ ತೃತೀಯ ಸ್ಥಾನ, ಮನ್ವೀತ್, ವಿಧೀತ್, ಸಿಂಚನಾ ನಾಲ್ಕನೇ ಸ್ಥಾನ, ಯಜ್ಞಾ ಯು.ಹೆಗ್ಡೆ, ವೇದವ್ಯಾಸ, ರೋಶನಿ, ನಮನ್ ಬಿಲ್ಲವ, ಪ್ರಖ್ಯಾತ ಐದನೇ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬೈಂದೂರು ಸೆಂಟರ್ನ ಶಿಕ್ಷಕಿಗೂ ಉತ್ತಮ ಶಿಕ್ಷಕ ಪ್ರಶಸ್ತಿ ದೊರಕಿದೆ. ಅಬಾಕಸ್ ಗ್ರಾೃಂಡ್ ಮಾಸ್ಟರ್ ಪ್ರಥ್ವಿ, ವರಪ್ರಸಾದ, ಯಜ್ಞಾ ಯು.ಹೆಗ್ಡೆ ಅವರನ್ನು ಸಂಸ್ಥೆ ವತಿಯಿಂದ ಗೌರವಿಸಲಾಯಿತು.