More

    ಶ್ರಾವಣ ಮಾಸದಲ್ಲೂ ಚೇತರಿಕೆ ಕಾಣದ ವ್ಯಾಪಾರ

    ಬೆಂಗಳೂರು: ಈ ಬಾರಿ ಶ್ರಾವಣ ಮಾಸದಲ್ಲಿ ವ್ಯಾಪಾರ ವಹಿವಾಟು ಉತ್ತಮಗೊಳ್ಳಬಹುದು ಎಂಬ ವರ್ತಕರ ನಿರೀಕ್ಷೆ ಹುಸಿಯಾಗಿದೆ. ಲಾಕ್​ಡೌನ್ ಸಡಿಲಿಕೆಯಿಂದ ನಗರದ ಚಿಕ್ಕಪೇಟೆ, ಕಾಟನ್​ಪೇಟೆ, ಬಿ.ವಿ.ಕೆ. ಅಯ್ಯಂಗಾರ್ ರಸ್ತೆ, ಅವೆನ್ಯೂ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಾರ ಭಾರೀ ಕುಸಿತ ಕಂಡಿದೆ.

    ಜು.26ರಿಂದ ಚಿಕ್ಕಪೇಟೆ ಅಸುಪಾಸಿನ ಮಳಿಗೆಗಳಿಗೆ ವ್ಯಾಪಾರ ನಡೆಸಲು ಬಿಬಿಎಂಪಿ ಅನುಮತಿ ನೀಡಿತ್ತು. ರಾಜಾ ಮಾರುಕಟ್ಟೆ, ಸ್ಟೀಲ್ ಬಜಾರ್ ಹಾಗೂ ಅವೆನ್ಯೂ ರಸ್ತೆಗಳಲ್ಲಿನ ಅಂಗಡಿ ಮುಂಗಟ್ಟುಗಳಿಗೆ ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುತ್ತಿಲ್ಲ.  ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಜೂ.23ರಿಂದ ಚಿಕ್ಕಪೇಟೆ ಸುತ್ತಲಿನ ಪ್ರದೇಶವನ್ನು ಸೀಲ್​ಡೌನ್ ಮಾಡಲಾಗಿತ್ತು. ಷರತ್ತುಬದ್ಧ ಆದೇಶದ ಮೇರೆಗೆ ಅದನ್ನು ಇತ್ತೀಚೆಗೆ ತೆರವುಗೊಳಿಸಲಾಗಿತ್ತು.

    ಇದನ್ನೂ ಓದಿ: ಆಯುಷ್ ವೈದ್ಯರಾಗುವುದು ಹೀಗೆ…

    ಈ ಬಾರಿ ಕರೊನಾ ಸೋಂಕಿನಿಂದ ವ್ಯಾಪಾರ ವಹಿವಾಟಿನಲ್ಲಿ ಹಿನ್ನಡೆಯಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎಂಬ ಭರವಸೆಯಲ್ಲಿದ್ದೇವೆ. | ವಿದ್ಯಾಸಾಗರ್                                                    ಬೆಂಗಳೂರು ಜ್ಯುವೆಲರಿ  ಅಸೋಸಿಯೇಷನ್​ನ ಅಧ್ಯಕ್ಷ

    ಗ್ರಾಹಕರೇ ಇಲ್ಲ: ಸದಾ ಜನಸಂದಣಿಯಿಂದ ತುಂಬಿ ತುಳುಕುತ್ತಿದ್ದ ಮಾರುಕಟ್ಟೆಗಳು ಈಗ ಗ್ರಾಹಕರಿಲ್ಲದೆ ಭಣಗುಟ್ಟುತ್ತಿವೆ. ಚಿಕ್ಕಪೇಟೆ ಮಾರುಕಟ್ಟೆ ರೇಷ್ಮೆ, ಕಲರ್ ಪ್ರಿಂಟೆಡ್ ಸ್ಯಾರಿ, ಮಕ್ಕಳು- ಮಹಿಳೆಯರ ಉಡುಪುಗಳು ಹಾಗೂ ಆಭರಣಗಳ ಮಳಿಗೆಗಳ ಮುಂಭಾಗ ಶೇ.50 ರಿಯಾಯಿತಿ ಫಲಕಗಳಿದ್ದರೂ ಖರೀದಿಗೆ ಗ್ರಾಹಕರೇ ಇಲ್ಲದಂತಾಗಿದೆ ಎಂದು ಬಟ್ಟೆ ಅಂಗಡಿ ಮಾಲೀಕರೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ: ‘ಸೋಕಾಲ್ಡ್ ಅಯೋಧ್ಯೆ’ಯಲ್ಲಿ ಅಯೋಧ್ಯಾಧಾಮ ನಿರ್ಮಿಸ್ತಾರಂತೆ ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ

    ಶೇ.60 ವ್ಯಾಪಾರ ಕುಸಿತ: ಒಂದೇ ಸೂರಿನಡಿ ಎಲ್ಲ ರೀತಿಯ ಬಟ್ಟೆ, ಒಡವೆ ಸೇರಿ ವೈವಿಧ್ಯಮಯ ಅಲಂಕಾರಿಕ ವಸ್ತುಗಳು ಸಿಗುವ ತಾಣ ಚಿಕ್ಕಪೇಟೆ. ಇದಕ್ಕೆ ಹೊಂದಿಕೊಂಡಂತೆ ಅವೆನ್ಯೂ ರಸ್ತೆಯಲ್ಲಿ ಆಫೀಸ್ ಸ್ಟೇಷನರಿ, ಸಗಟು ಕಿರಾಣಿ ಪದಾರ್ಥಗಳು ಸೇರಿ ಬಹುತೇಕ ವ್ಯಾಪಾರಗಳು ನಷ್ಟಕ್ಕೀಡಾಗಿವೆ. ಶಾಲಾ- ಕಾಲೇಜುಗಳಿಲ್ಲದೆ ನೋಟ್ ಪುಸ್ತಕಗಳ ವ್ಯಾಪಾರ ಸಂಪೂರ್ಣ ನೆಲಕಚ್ಚಿದೆ. ಮಳಿಗೆ ಮಾಲೀಕರಿಗೆ ಶೇ.60 ವ್ಯಾಪಾರ ಕುಸಿದಿದೆ ಎಂದು ಕರ್ನಾಟಕ ಪುಸ್ತಕ ಮಾರಾಟಗಾರ ಹಾಗೂ ಪ್ರಕಾಶಕರ ಸಂಘದ ಅಧ್ಯಕ್ಷ ಎ. ರಮೇಶ್ ತಿಳಿಸಿದ್ದಾರೆ.

    ಪರ್ಯಾಯ ವ್ಯವಸ್ಥೆ: ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಮಾರುಕಟ್ಟೆ ವರ್ತಕರು ಒಂದು ದಿನ ಎಡಬದಿಯ ಮಳಿಗೆಗಳನ್ನೂ , ಮತ್ತೊಂದು ದಿನ ಬಲಬದಿಯ ಮಳಿಗೆಗಳನ್ನು ತೆರೆದು ಸಾಮಾಜಿಕ ಅಂತರ ನಿಯಮ ಪಾಲಿಸಿ ವಹಿವಾಟು ನಡೆಸುತ್ತಿದ್ದರೂ ವ್ಯಾಪಾರವಿಲ್ಲ ಎಂಬುದು ವರ್ತಕರ ಆಳಲು.

    LIVE: ಚೆನ್ನೈ-ಅಂಡಮಾನ್​ ಸಬ್​ಮರೈನ್ ಆಪ್ಟಿಕಲ್ ಫೈಬರ್ ಕನೆಕ್ಟಿವಿಟಿಗೆ ಚಾಲನೆ ನೀಡಿದ ಪ್ರಧಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts