More

    ‘ಸೋಕಾಲ್ಡ್ ಅಯೋಧ್ಯೆ’ಯಲ್ಲಿ ಅಯೋಧ್ಯಾಧಾಮ ನಿರ್ಮಿಸ್ತಾರಂತೆ ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ

    ಕಾಠ್ಮಂಡು: ಅಯೋಧ್ಯೆ ವಿಚಾರದಲ್ಲಿ ಭಿನ್ನಮತ ಎತ್ತಿರುವ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಇದೀಗ ಭಿನ್ನ ಹೆಜ್ಜೆಯನ್ನೂ ಇರಿಸಿದ್ದಾರೆ. ನಿಜವಾದ ಅಯೋಧ್ಯೆ ಇರುವುದು ನೇಪಾಳದಲ್ಲಿ ಎಂದಿದ್ದ ಒಲಿ, ಶ್ರೀರಾಮಜನ್ಮಭೂಮಿ ಎಂದು ಅವರು ಘೋಷಿಸಿದ “ಅಯೋಧ್ಯಾಪುರಿ”ಯಲ್ಲಿ ಅಯೋಧ್ಯಾ ಧಾಮ ನಿರ್ಮಿಸುವ ಯೋಜನೆ ರೂಪಿಸುತ್ತಿದ್ದು, ಈ ಸಲದ ನವರಾತ್ರಿಯ ನವಮಿ ದಿನವೇ ಭೂಮಿ ಪೂಜೆ ನಡೆಸಲು ಮುಂದಾಗಿದ್ದಾರೆ.

    ತಥಾಕಥಿತ ಅಯೋಧ್ಯೆಯಲ್ಲಿ ನಿರ್ಮಿಸುವ ಅಯೋಧ್ಯಾಧಾಮದಲ್ಲಿ ಶ್ರೀರಾಮ, ಲಕ್ಷ್ಮಣ, ಸೀತಾದೇವಿ ಮತ್ತು ಹನುಮಾನ್ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ಅವರು ತೀರ್ಮಾನಿಸಿದ್ದಾರೆ. ಈ ಸಂಬಂಧ ಚಿತ್ವಾನ್​ನ ಮಡಿ ಮುನ್ಸಿಪಾಲಿಟಿಯ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದು, ಶನಿವಾರ ಪ್ರಧಾನಿ ನಿವಾಸದಲ್ಲಿ ಈ ಕುರಿತ ಸಭೆ ನಡೆದಿತ್ತು. ಅಯೋಧ್ಯಾಪುರಿ ಸಮೀಪ ಮಡಿ ಮುನ್ಸಿಪಾಲಿಟಿ ಇರುವ ತೋರಿ ಎಂಬ ಸ್ಥಳದ ಹೆಸರನ್ನು ಅಯೋಧ್ಯಾಪುರಿ ಎಂದು ಬದಲಾಯಿಸಲೂ ಸೂಚನೆ ಕೊಟ್ಟಿದ್ದಾರೆ ಎಂದು ನೇಪಾಳದ ಅಧಿಕೃತ ನ್ಯೂಸ್ ಏಜೆನ್ಸಿ ನ್ಯಾಷನಲ್ ನ್ಯೂಸ್ ಕಮಿಟಿ ವರದಿ ಮಾಡಿದೆ.

    ಇದನ್ನೂ ಓದಿ: ಅಯೋಧ್ಯೆ ಬೀಗ ತೆರೆಯುವುದಕ್ಕೆ ಮುನ್ನ ರಾಜೀವ್ ಗಾಂಧಿ ಮಾಡಿದ ಡೀಲ್ ಏನಾಗಿತ್ತು!!!

    ಕಳೆದ ತಿಂಗಳು ಕೆಪಿ ಶರ್ಮಾ ಒಲಿ ಭಾರತ ವಿರುದ್ಧ ಹರಿಹಾಯ್ದು, ನಿಜವಾದ ಅಯೋಧ್ಯೆ ಇರುವುದು ನೇಪಾಳದಲ್ಲಿ. ಭಾರತದಲ್ಲಿರುವುದು ನಕಲಿ. ಶ್ರೀರಾಮ ಹುಟ್ಟಿದ್ದು ನೇಪಾಳದ ಅಯೋಧ್ಯಾಪುರಿಯಲ್ಲಿ ಎಂದು ಹೇಳಿದ್ದರಲ್ಲದೆ. ಭಾರತ ಸಾಂಸ್ಕೃತಿಕ ಅತಿಕ್ರಮಣ ಮಾಡುತ್ತಿದೆ ಎಂದು ಆರೋಪಿಸಿ ವಿವಾದ ಸೃಷ್ಟಿಸಿದ್ದರು. ಐತಿಹಾಸಿಕ ಪುರಾಣ ದಾಖಲೆಗಳ ಪ್ರಕಾರ ಶ್ರೀರಾಮಚಂದ್ರನದ ಜನ್ಮಭೂಮಿ ಉತ್ತರಪ್ರದೇಶದ ಅಯೋಧ್ಯೆ. ನೇಪಾಳದ ಜನಕಪುರ ಸೀತಾದೇವಿಯ ಹುಟ್ಟೂರು. ಅನೇಕ ನೇಪಾಳಿಗಳು ತೋರಿಯನ್ನು ಶ್ರೀರಾಮ ಜನ್ಮಭೂಮಿ ಎಂದೂ ಜನಕಪುರಿಯನ್ನು ಸೀತಾದೇವಿಯ ಜನ್ಮಸ್ಥಳವೆಂದೂ ನಂಬಿದ್ದಾರೆ.

    ಇದನ್ನೂ ಓದಿ: ಕೆಲವರು ಈಗ ರಾಮನಾಮ ಪಠಿಸುತ್ತಿದ್ದಾರೆ…: ಪ್ರಿಯಾಂಕಾ ಗಾಂಧಿಗೆ ಯೋಗಿ ತಿರುಗೇಟು

    ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2018ರಲ್ಲಿ ನೇಪಾಳದ ಧನುಸಾ ಜಿಲ್ಲೆಯ ಜನಕಪುರಕ್ಕೆ ಭೇಟಿ ನೀಡಿದ್ದಲ್ಲದೆ, ಅಯೋಧ್ಯೆಯಿಂದ ಜನಕಪುರಕ್ಕೆ ಬಸ್​ ಸಂಚಾರಕ್ಕೂ ಚಾಲನೆ ನೀಡಿದ್ದರು. ಇದು ಭಾರತದ ರಾಮಾಯಣ ಸರ್ಕೀಟ್​ನ ಭಾಗವಾಗಿ ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಂತದ್ದಾಗಿತ್ತು. ಇದೇ ವೇಳೆ ಅವರು 20ನೇ ಶತಮಾನದ ಜಾನಕಿ ದೇವಸ್ಥಾನಕ್ಕೂ ಭೇಟಿ ನೀಡಿ, ಜನಕಪುರದ ಅಭಿವೃದ್ಧಿಗೆ 100 ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದ್ದರು. (ಏಜೆನ್ಸೀಸ್)

    ಅಯೋಧ್ಯೆ ಶ್ರೀರಾಮಮಂದಿರ ಭೂಮಿ ಪೂಜೆ ನೇರ ಪ್ರಸಾರ ವೀಕ್ಷಿಸಿದವರ ಸಂಖ್ಯೆ ಎಷ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts