More

    ಅಧಿಕಾರ ಉಳಿಸಿಕೊಳ್ಳಲು ಪಕ್ಷ ಒಡೆಯುವುದೊಂದೇ ದಾರಿ ನೇಪಾಳ ಪ್ರಧಾನಿ ಓಲಿಗೆ…!

    ಕಾಠ್ಮಂಡು: ನೇಪಾಳದ ಪ್ರಧಾನಮಂತ್ರಿ ಕೆ.ಪಿ. ಶರ್ಮ ಓಲಿ ಅಧಿಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಆಡಳಿತಾರೂಢ ಕಮ್ಯುನಿಸ್ಟ್​ ಪಕ್ಷ ಭಾರಿ ಸಂಕಷ್ಟದಲ್ಲಿದೆ ಎಂದು ಹೇಳಿಕೆ ನೀಡಿದ್ದಾರೆ. ಆ ಮೂಲಕ ಪಕ್ಷ ವಿಭಜನೆಯಾಗುವ ಸಾಧ್ಯತೆಗಳನ್ನು ಪುಷ್ಠಿಕರಿಸಿದ್ದಾರೆ.

    ಪ್ರಧಾನಿ ಅಧಿಕೃತ ನಿವಾಸದಲ್ಲಿ ಸಂಪುಟ ಸಭೆ ನಡೆಸಿದ ಓಲಿ, ಪಕ್ಷದ ಕೆಲವರು ರಾಷ್ಟ್ರಪತಿ ವಿದ್ಯಾದೇವಿ ಭಂಡಾರಿ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಂಪುಟ ಸಚಿವರಿಗೆ ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ನನ್ನನ್ನು ಪ್ರಧಾನಿ ಹುದ್ದೆ ಹಾಗೂ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಹುನ್ನಾರ ನಡೆದಿದೆ. ಆದರದು ಸಾಧ್ಯವಿಲ್ಲ. ಆದರೆ, ಪಕ್ಷ ಸಂಕಷ್ಟದ ಸ್ಥಿತಿಯಲ್ಲಿದೆ ಎಂದು ಓಲಿ ಹೇಳಿದ್ದಾರೆ.

    ಇದನ್ನೂ ಓದಿ: ಚೀನಾದ ನಿದ್ದೆಗೆಡಿಸಿದೆ ನೇಪಾಳದ ಬೆಳವಣಿಗೆ; ಕೋವಿಡ್ ನೆರವಿನ ಹೆಸರಲ್ಲಿ ಬೇಹುಗಾರರ ನಿಯೋಜನೆ​

    ರಾಷ್ಟ್ರಪತಿಯನ್ನು ಕೆಳಗಿಳಿಸುವ ಹುನ್ನಾರ ನಡೆದಿದೆ ಎಂದು ಓಲಿ ಹೇಳುತ್ತಿದ್ದಂತೆ, ನೇಪಾಳ ಕಮ್ಯುನಿಸ್ಟ್​ ಪಕ್ಷದ ಮೂವರು ಮಾಜಿ ಪ್ರಧಾನಿಗಳು ರಾಷ್ಟ್ರಪತಿಯನ್ನು ಭೇಟಿ ಮಾಡಿದ್ದಾರೆ. ಓಲಿ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ಮಾಹಿತಿ ನೀಡಿದ್ದಾರೆ. ಶನಿವಾರ ನಡೆಯಬೇಕಿದ್ದ ಪ್ರಧಾನಿ ಓಲಿ ಹಣೆಬರಹ ನಿರ್ಧರಿಸುವ ನೇಪಾಳ ಕಮ್ಯುನಿಸ್ಟ್​ ಪಕ್ಷದ 45 ಸದಸ್ಯ ಬಲದ ಸ್ಥಾಯಿ ಸಮಿತಿ ಸಭೆಯನ್ನು ಮುಂದೂಡಲಾಗಿದೆ. ಪ್ರಧಾನಿ ಆಡಳಿತ ವೈಖರಿ ಹಾಗೂ ಭಾರತ ವಿರೋಧಿ ನೀತಿಯನ್ನು ಕೈಬಿಡಲು ಕಾಲಾವಕಾಶ ನೀಡಲಾಗಿದೆ ಎಂದೇ ವಿಶ್ಲೇಷಿಸಲಾಗಿದೆ.

    ಸಂಪುಟ ಸಭೆಯಲ್ಲಿ ಮಾತನಾಡಿದ ಓಲಿ, ಸ್ಥಾಯಿ ಸಮಿತಿ ನಿರ್ಧಾರವನ್ನು ಒಪ್ಪಿಕೊಳ್ಳುವಂತೆ ಯಾರೂ ನನ್ನನ್ನು ಒತ್ತಾಯಿಸುವಂತಿಲ್ಲ. ಹೀಗಾಗಿ ನನ್ನನ್ನು ಬೆಂಬಲಿಸುತ್ತಿರೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸುವಂತೆ ಸಚಿವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಪಕ್ಷ ವಿಭಜನೆಯ ಹಾದಿಯಲ್ಲಿದೆ ಎಂದು ಹೇಳಲಾಗುತ್ತಿದೆ. 45 ಸದಸ್ಯರಲ್ಲಿ 24 ಜನರನ್ನು ತನ್ನತ್ತ ಸೆಳೆದುಕೊಂಡು ಪ್ರತ್ಯೇಕ ಅಸ್ತಿತ್ವದೊಂದಿಗೆ ಹೆಸರಿನಲ್ಲಿ ಅಧಿಕಾರದಲ್ಲಿ ಮುಂದುವರಿಯಲು ಓಲಿ ಯತ್ನ ನಡೆಸಿದ್ದಾರೆ.

    ಇದನ್ನೂ ಓದಿ: ಎದುರು ಬಂದವರ ಧರ್ಮ ಕೇಳಿ ಕೊಂದರು; ಶವಗಳನ್ನು ಚರಂಡಿಗೆಸೆದರು; ಪ್ರತ್ಯಕ್ಷದರ್ಶಿಗಳಿಂದ ಪೈಶಾಚಿಕತೆ ಅನಾವರಣ

    ಇಷ್ಟಕ್ಕೂ 2018ರಲ್ಲಿ ಓಲಿ ಅಧಿಕಾರಕ್ಕೆ ಬಂದಾಗ ಎರಡೂವರೆ ವರ್ಷಗಳ ಬಳಿಕ ಅಧಿಕಾರ ತ್ಯಜಿಸಬೇಕೆಂಬ ಒಪ್ಪಂದವಾಗಿತ್ತು. ಈಗ ಅಧಿಕಾರ ತ್ಯಜಿಸಲು ಓಲಿ ಮೊಂಡಾಟ ನಡೆಸಿದ್ದಾರೆ ಎಂಬುದು ಹುದ್ದೆ ಆಕಾಂಕ್ಷಿ ಪ್ರಚಂಡ ವಾದವಾಗಿದೆ. ಆದರೆ, 2019ರಲ್ಲಿ ಮತತ್ಒಂದು ಒಪ್ಪಂದವಾಗಿದ್ದು, ಅದರ ಪ್ರಕಾರ ತಾನು ಪೂರ್ಣ ಐದು ವರ್ಷ ಅಧಿಕಾರ ನಡೆಸಬೇಕಿದೆ ಎಂಬುದು ಓಲಿ ವಾದ.

    ಕರೊನಾ ಸೋಂಕು ಖಚಿತವಾದರೆ… ಮುಂದೇನು? ಈ ವಿಷಯಗಳನ್ನು ಅಗತ್ಯವಾಗಿ ತಿಳಿದಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts