ಬೆಳಗ್ಗೆ 6 ಗಂಟೆಯಿಂದ ಬೆಂಗಳೂರಿನಿಂದ ಹೊರ ಸ್ಥಳಗಳಿಗೂ ಬಸ್​ ಸಂಚಾರ; ಸರ್ಕಾರ ಸ್ಪಷ್ಟನೆ

ksrtc bus
Published on

ಬೆಂಗಳೂರು: ಕಳೆದ 14ರಿಂದ ವಿಧಿಸಲಾಗಿದ್ದ ಲಾಕ್​ಡೌನ್​ ತೆರವು ಹಿನ್ನೆಲೆಯಲ್ಲಿ ಬಸ್​ ಸಂಚಾರ ಎಂದಿನಂತೆ ಇರಲಿದೆ ಎಂದು ಸಾರಿಗೆ ಸಂಸ್ಥೆ ಸ್ಪಷ್ಟಪಡಿಸಿದೆ.

ಸರ್ಕಾರದ ಆದೇಶದಂತೆ ಬೆಂಗಳೂರಿನಲ್ಲಿ ಬುಧವಾರದಿಂದ ಲಾಕ್ ಡೌನ್ ತೆರವು‌ ಹಿನ್ನಲೆಯಲ್ಲಿ, ಬೆಳಗ್ಗೆ 6 ಗಂಟೆಯಿಂದ ರಾಜಧಾನಿಯಿಂದ ಇತರೆ ಸ್ಥಳಗಳಿಗೆ ಬಸ್ ಸಂಚಾರ ಆರಂಭವಾಗಲಿದೆ ಎಂದು ತಿಳಿಸಲಾಗಿದೆ.

ಇದಲ್ಲದೇ, ಬಿಎಂಟಿಸಿ ಬಸ್​ಗಳು ಕೂಡ ಸಂಚರಿಸಲಿವೆ. ಇತರ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳು ಕೂಡ ಎಂದಿನಂತೆ ಕಾರ್ಯಾಚರಿಸಲಿವೆ. ಕಳೆದ ಒಂದು ವಾರದಿಂದ ಬಸ್​ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net