More

    ಕ್ರೀಡಾ ನಿರೂಪಕಿಯನ್ನು ವಿವಾಹವಾದ ಕ್ರಿಕೆಟಿಗರಲ್ಲಿ ಬುಮ್ರಾ ಮೊದಲಿಗರಲ್ಲ!

    ಬೆಂಗಳೂರು: ಟೀಮ್ ಇಂಡಿಯಾ ವೇಗಿ ಜಸ್‌ಪ್ರೀತ್ ಬುಮ್ರಾ ಅವರು ಸೋಮವಾರ ಜನಪ್ರಿಯ ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 29 ವರ್ಷದ ಸಂಜನಾ ಗಣೇಶನ್, ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲೂ ಭಾಗವಹಿಸಿ ‘ಫೆಮಿನಾ ಅಫಿಶಿಯಲ್ ಗಾರ್ಜಸ್’ ಪ್ರಶಸ್ತಿಗೆ ಭಾಜನರಾಗಿದ್ದರು. ‘ಫೆಮಿನಾ ಮಿಸ್ ಇಂಡಿಯಾ ಪುಣೆ’ಯಲ್ಲಿ ಫೈನಲಿಸ್ಟ್ ಆಗಿದ್ದರು ಮತ್ತು ರೂಪದರ್ಶಿಯಾಗಿಯೂ ಮಿಂಚಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ 2019ರ ವಿಶ್ವಕಪ್ ವೇಳೆ ‘ಮ್ಯಾಚ್ ಪಾಯಿಂಟ್’ ಮತ್ತು ‘ಚೀಕಿ ಸಿಂಗಲ್ಸ್’ ಎಂಬ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. 2014ರಲ್ಲಿ ಸನ್ನಿ ಲಿಯೋನ್ ನಡೆಸಿಕೊಡುವ ‘ಎಂಟಿವಿ ಸ್ಪಿಟ್‌ವಿಲ್ಲಾ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನಲ್ಲೂ (ಪಿಬಿಎಲ್) ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. 2020ರ ಐಪಿಎಲ್ ವೇಳೆ ಕೋಲ್ಕತ ನೈಟ್‌ರೈಡರ್ಸ್‌ ತಂಡದ ‘ದಿ ನೈಟ್ ಕ್ಲಬ್’ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ಆದರೆ, ಬುಮ್ರಾ ಟಿವಿ ನಿರೂಪಕಿಯನ್ನು ವರಿಸಿದ ಮೊದಲ ಕ್ರಿಕೆಟಿಗರಲ್ಲ!

    ಕ್ರೀಡಾ ನಿರೂಪಕಿಯನ್ನು ವಿವಾಹವಾದ ಕ್ರಿಕೆಟಿಗರಲ್ಲಿ ಬುಮ್ರಾ ಮೊದಲಿಗರಲ್ಲ!

    ಕರ್ನಾಟಕದ ಸ್ಟುವರ್ಟ್ ಬಿನ್ನಿ ಜನಪ್ರಿಯ ಕ್ರೀಡಾ ನಿರೂಪಕಿ ಮಯಾಂತಿ ಲ್ಯಾಂಗರ್‌ರನ್ನು ವಿವಾಹವಾಗಿದ್ದರೆ, ಆಸ್ಟ್ರೇಲಿಯಾದ ಶೇನ್ ವ್ಯಾಟ್ಸನ್, ಶಾನ್ ಮಾರ್ಷ್, ಬೆನ್ ಕಟ್ಟಿಂಗ್, ನ್ಯೂಜಿಲೆಂಡ್‌ನ ಮಾರ್ಟಿನ್ ಗುಪ್ಟಿಲ್, ದಕ್ಷಿಣ ಆಫ್ರಿಕಾದ ಮಾರ್ನ್ ಮಾರ್ಕೆಲ್ ಕೂಡ ಕ್ರೀಡಾ ನಿರೂಪಕಿಯರನ್ನೇ ಮದುವೆಯಾಗಿದ್ದಾರೆ. ಅವರ ಸಂಕ್ಷಿಪ್ತ ವಿವರಗಳು ಇಲ್ಲಿವೆ…

    ಇದನ್ನೂ ಓದಿ: PHOTO| ಕ್ರಿಕೆಟ್ ನಿರೂಪಕಿ ಸಂಜನಾಗೆ ಬೋಲ್ಡಾದ ಬುಮ್ರಾ, ಗೋವಾದಲ್ಲಿ ಮದುವೆ

    *ಸ್ಟುವರ್ಟ್ ಬಿನ್ನಿ

    ಕ್ರೀಡಾ ನಿರೂಪಕಿಯನ್ನು ವಿವಾಹವಾದ ಕ್ರಿಕೆಟಿಗರಲ್ಲಿ ಬುಮ್ರಾ ಮೊದಲಿಗರಲ್ಲ!
    ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಸ್ಟುವರ್ಟ್ ಬಿನ್ನಿ ಅವರ ಪತ್ನಿ ಜನಪ್ರಿಯ ಕ್ರೀಡಾ ನಿರೂಪಕಿ ಮಯಾಂತಿ ಲ್ಯಾಂಗರ್. ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಮೂಲಕ ಪತಿಗಿಂತಲೂ ಹೆಚ್ಚು ಜನಪ್ರಿಯತೆ, ಅಭಿಮಾನಿಗಳನ್ನು ಗಳಿಸಿರುವ ಮಯಾಂತಿ, ಸ್ಟುವರ್ಟ್ ಬಿನ್ನಿ ಈ ಹಿಂದೆ ಐಸಿಎಲ್‌ನಲ್ಲಿ ಆಡುತ್ತಿದ್ದಾಗ ಪ್ರೀತಿಯಲ್ಲಿ ಬಿದ್ದಿದ್ದರು. 2012ರ ಸೆಪ್ಟೆಂಬರ್‌ನಲ್ಲಿ ಅವರ ವಿವಾಹವಾಗಿತ್ತು. ಕಳೆದ ವರ್ಷದ ಮುದ್ದಾದ ಗಂಡು ಮಗು ಜನಿಸಿತ್ತು.

    *ಶೇನ್ ವ್ಯಾಟ್ಸನ್

    ಕ್ರೀಡಾ ನಿರೂಪಕಿಯನ್ನು ವಿವಾಹವಾದ ಕ್ರಿಕೆಟಿಗರಲ್ಲಿ ಬುಮ್ರಾ ಮೊದಲಿಗರಲ್ಲ!
    ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಹಾಗೂ ಐಪಿಎಲ್‌ನಲ್ಲಿ ವಿವಿಧ ತಂಡಗಳ ಪರ ಮಿಂಚಿರುವ ಶೇನ್ ವ್ಯಾಟ್ಸನ್ ಅವರ ಪತ್ನಿ ಲೀ ರ್ಲಾಂಗ್ ಕೂಡ ಕ್ರೀಡಾ ನಿರೂಪಕಿ. ರ್ಲಾಂಗ್ ಆಸೀಸ್‌ನ ಜನಪ್ರಿಯ ಕ್ರಿಕೆಟ್ ವಾಹಿನಿ ಾಕ್ಸ್ ಸ್ಪೋರ್ಟ್ಸ್ ಚಾನಲ್‌ನಲ್ಲಿ ನಿರೂಪಕಿಯಾಗಿದ್ದರು. 2010ರ ಮಾರ್ಚ್‌ನಲ್ಲಿ ವಿವಾಹವಾಗಿದ್ದ ದಂಪತಿಗೆ ಈಗ ಇಬ್ಬರು ಮಕ್ಕಳಿದ್ದಾರೆ.

    *ಮಾರ್ಟಿನ್ ಗುಪ್ಟಿಲ್

    ಕ್ರೀಡಾ ನಿರೂಪಕಿಯನ್ನು ವಿವಾಹವಾದ ಕ್ರಿಕೆಟಿಗರಲ್ಲಿ ಬುಮ್ರಾ ಮೊದಲಿಗರಲ್ಲ!
    ನ್ಯೂಜಿಲೆಂಡ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಮಾರ್ಟಿನ್ ಗುಪ್ಟಿಲ್ ಅವರ ಮಡದಿ ಲೌರಾ ಮೆಕ್‌ಗೋಲ್ಡ್‌ರಿಕ್ ಸ್ಕೈ ಸ್ಪೋರ್ಟ್ಸ್ ವಾಹಿನಿಯ ನಿರೂಪಕಿ. 2019ರಲ್ಲಿ ಬಾಂಗ್ಲಾ ವಿರುದ್ಧದ ಪಂದ್ಯವೊಂದರಲ್ಲಿ ಶತಕ ಸಿಡಿಸಿ ಪಂದ್ಯಶ್ರೇಷ್ಠರಾಗಿದ್ದ ಗುಪ್ಟಿಲ್‌ರನ್ನು ಪತ್ನಿಯೇ ಸಂದರ್ಶನ ಮಾಡಿದ್ದರು. 2014ರ ಸೆಪ್ಟೆಂಬರ್‌ನಲ್ಲಿ ವಿವಾಹವಾಗಿದ್ದ ದಂಪತಿಗೆ ಓರ್ವ ಪುತ್ರ ಮತ್ತು ಪುತ್ರಿ ಇದ್ದಾರೆ.

    *ಶಾನ್ ಮಾರ್ಷ್

    ಕ್ರೀಡಾ ನಿರೂಪಕಿಯನ್ನು ವಿವಾಹವಾದ ಕ್ರಿಕೆಟಿಗರಲ್ಲಿ ಬುಮ್ರಾ ಮೊದಲಿಗರಲ್ಲ!
    ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಶಾನ್ ಮಾರ್ಷ್ ಅವರ ಪತ್ನಿ ರೆಬೆಕಾ ಒಡೊನೊವನ್, ಚಾನಲ್ 7ನಲ್ಲಿ ನಿರೂಪಕಿಯಾಗಿದ್ದರು. 2014ರ ಏಪ್ರಿಲ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಮಾರ್ಷ್-ರೆಬೆಕಾಗೆ ಈಗ ಮೂವರು ಮಕ್ಕಳಿದ್ದಾರೆ.

    *ಮಾರ್ನ್ ಮಾರ್ಕೆಲ್

    ಕ್ರೀಡಾ ನಿರೂಪಕಿಯನ್ನು ವಿವಾಹವಾದ ಕ್ರಿಕೆಟಿಗರಲ್ಲಿ ಬುಮ್ರಾ ಮೊದಲಿಗರಲ್ಲ!
    ದಕ್ಷಿಣ ಆಫ್ರಿಕಾದ ವೇಗಿ ಮಾರ್ನ್ ಮಾರ್ಕೆಲ್ ವಿವಾಹವಾಗಿರುವುದು ಆಸ್ಟ್ರೇಲಿಯಾದ ಚಾನಲ್ 9ರಲ್ಲಿ ಜನಪ್ರಿಯ ನಿರೂಪಕಿಯಾಗಿದ್ದ ರೋಸ್ ಕೆಲ್ಲಿ ಅವರನ್ನು. 2014ರ ಡಿಸೆಂಬರ್‌ನಲ್ಲಿ ವಿವಾಹವಾಗಿದ್ದ ಮಾರ್ಕೆಲ್-ರೋಸ್ ದಂಪತಿಗೆ ಈಗ ಇಬ್ಬರು ಪುತ್ರರಿದ್ದಾರೆ. ಪತ್ನಿ ಈಗಲೂ ಕೆಲಸದಲ್ಲಿ ಮುಂದುವರಿದಿರುವುದರಿಂದ ಮಾರ್ಕೆಲ್ ಈಗ ಆಸೀಸ್‌ನಲ್ಲೇ ನೆಲೆಸಿದ್ದಾರೆ.

    *ಬೆನ್ ಕಟ್ಟಿಂಗ್

    ಕ್ರೀಡಾ ನಿರೂಪಕಿಯನ್ನು ವಿವಾಹವಾದ ಕ್ರಿಕೆಟಿಗರಲ್ಲಿ ಬುಮ್ರಾ ಮೊದಲಿಗರಲ್ಲ!

    ಆಸ್ಟ್ರೇಲಿಯಾದ ಆಲ್ರೌಂಡರ್ ಬೆನ್ ಕಟ್ಟಿಂಗ್ ವಿವಾಹವಾಗಿರುವುದು ಕೂಡ ಆಸ್ಟ್ರೇಲಿಯಾದ ಜನಪ್ರಿಯ ಕ್ರೀಡಾ ನಿರೂಪಕಿ ಎರಿನ್ ಹೋಲ್ಯಾಂಡ್ ಅವರನ್ನು. ಎರಿನ್ ಮಾಜಿ ಮಿಸ್ ವರ್ಲ್ಡ್ ಆಸ್ಟ್ರೇಲಿಯಾ ಕೂಡ ಆಗಿದ್ದು, ಹಲವು ಬಾರಿ ಬೆನ್ ಕಟ್ಟಿಂಗ್ ಸಂದರ್ಶನ ಮಾಡಿದ್ದಾರೆ. ಈ ವರ್ಷ ಪ್ರೇಮಿಗಳ ದಿನದಂದು ಇವರ ವಿವಾಹ ನಡೆದಿತ್ತು.

    VIDEO | ಐಪಿಎಲ್‌ಗೆ ಮುನ್ನ ಸನ್ಯಾಸಿ ಅವತಾರದಲ್ಲಿ ಎಂಎಸ್ ಧೋನಿ ಪ್ರತ್ಯಕ್ಷ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts