More

    ಷೇರುಪೇಟೆಯಲ್ಲಿ ಮತ್ತೆ ಗೂಳಿಯ ಗುಟುರು: ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದ ನಿಫ್ಟಿ ಸೂಚ್ಯಂಕ

    ಮುಂಬೈ: ಜಾಗತಿಕ ಷೇರುಗಳಲ್ಲಿನ ಸಕಾರಾತ್ಮಕ ಪ್ರವೃತ್ತಿಯ ನಡುವೆ ಮುಖ್ಯವಾಗಿ ಇಂಧನ, ಬಂಡವಾಳ ಸರಕುಗಳು ಮತ್ತು ಕೈಗಾರಿಕಾ ಷೇರುಗಳ ಖರೀದಿಯಿಂದಾಗಿ ನಿಫ್ಟಿ ತನ್ನ ಹೊಸ ದಾಖಲೆಯ ಮುಕ್ತಾಯದ ಮಟ್ಟವನ್ನು ಮುಟ್ಟುವುದರೊಂದಿಗೆ ಬೆಂಚ್‌ಮಾರ್ಕ್ ಇಕ್ವಿಟಿ ಸೂಚ್ಯಂಕಗಳು ಬುಧವಾರ ಉನ್ನತ ಮಟ್ಟದಲ್ಲಿ ಕೊನೆಗೊಂಡವು.

    ಇದಲ್ಲದೆ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ನಂತಹ ಆಯ್ದ ಪ್ರಮುಖ ಷೇರುಗಳ ಖರೀದಿ ಜೋರಾಗಿರುವುದು ಹೂಡಿಕೆದಾರರ ಭಾವನೆಯನ್ನು ಹೆಚ್ಚಿಸಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

    ಹೆಚ್ಚು ಏರಿಳಿತ ಕಂಡ ವಹಿವಾಟಿನಲ್ಲಿ, 30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 149.98 ಅಂಕಗಳು ಅಥವಾ ಶೇಕಡಾ 0.20 ರಷ್ಟು ಏರಿಕೆಯಾಗಿ 76,606.57 ಕ್ಕೆ ಸ್ಥಿರವಾಯಿತು. ದಿನದ ವಹಿವಾಟಿನ ನಡುವೆ ಇದು 593.94 ಅಂಕಗಳು ಅಥವಾ 0.77 ರಷ್ಟು ಜಿಗಿದು 77,050.53 ಕ್ಕೆ ತಲುಪಿತ್ತು.

    ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕವು 177.1 ಅಂಕಗಳು ಅಥವಾ ಶೇಕಡಾ 0.76 ರಷ್ಟು ಏರಿಕೆಯಾಗಿ ತನ್ನ ಹೊಸ ಸಾರ್ವಕಾಲಿಕ ಇಂಟ್ರಾ-ಡೇ ಗರಿಷ್ಠ ಮಟ್ಟವಾದ 23,441.95 ಅನ್ನು ತಲುಪಿತ್ತು. ಅಂತಿಮವಾಗಿ ಇದು 58.10 ಅಂಕಗಳು ಅಥವಾ ಶೇಕಡಾ 0.25 ರಷ್ಟು ಏರಿಕೆಯಾಗಿ 23,322.95 ರ ಹೊಸ ಮುಕ್ತಾಯದ ಉತ್ತುಂಗದಲ್ಲಿ ಕೊನೆಗೊಂಡಿತು.

    ಪವರ್ ಗ್ರಿಡ್ ಷೇರು ಬೆಲೆ ಶೇ 2.54 ಏರಿಕೆಯಾಯಿತು, ಟೆಕ್ ಮಹೀಂದ್ರಾ, ಬಜಾಜ್ ಫೈನಾನ್ಸ್, ಎನ್‌ಟಿಪಿಸಿ, ಅಲ್ಟ್ರಾಟೆಕ್ ಸಿಮೆಂಟ್, ಲಾರ್ಸೆನ್ ಆ್ಯಂಡ್​ ಟೂಬ್ರೋ, ಟಾಟಾ ಸ್ಟೀಲ್, ಭಾರ್ತಿ ಏರ್‌ಟೆಲ್, ಬಜಾಜ್ ಫಿನ್‌ಸರ್ವ್ ಮತ್ತು ಎಚ್‌ಸಿಎಲ್ ಟೆಕ್ನಾಲಜೀಸ್ ಷೇರುಗಳ ದರ ಕೂಡ ಏರಿಕೆ ಕಂಡವು. ಇದಕ್ಕೆ ವ್ಯತಿರಿಕ್ತವಾಗಿ, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಹಿಂದೂಸ್ತಾನ್ ಯೂನಿಲಿವರ್, ಇನ್ಫೋಸಿಸ್ ಮತ್ತು ಟೈಟಾನ್ ಷೇರುಗಳ ಬೆಲೆ ಕುಸಿದವು.

    See also  ಪಿತ್ರಾರ್ಜಿತ ಆಸ್ತಿಗಾಗಿ ಹೊಡೆದಾಟ; ಸಿನಿಮೀಯ ರೀತಿಯಲ್ಲಿ ಅಟ್ಟಾಡಿಸಿ ಬಂದು ಮಚ್ಚಿನಿಂದ ಹಲ್ಲೆ

    ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ ಶೇ. 1.07 ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇ. 1.06 ರಷ್ಟು ಏರಿಕೆಯಾಯಿತು. ವಲಯವಾರು ಸೂಚ್ಯಂಕಗಳ ಪೈಕಿ, ಕೈಗಾರಿಕೆಗಳು, ಶಕ್ತಿ, ಬಂಡವಾಳ ಸರಕುಗಳು, ಶಕ್ತಿ, ಸರಕುಗಳು, ಆರೋಗ್ಯ ಮತ್ತು ಲೋಹಗಳು ಅತಿ ಹೆಚ್ಚು ಲಾಭ ಗಳಿಸಿದವು. ರಿಯಾಲ್ಟಿ ಮತ್ತು ಎಫ್‌ಎಂಸಿಜಿ ವಲಯದ ಷೇರುಗಳು ಹಿನ್ನಡೆ ಅನುಭವಿಸಿದವು.

    ಏಷ್ಯಾದ ಮಾರುಕಟ್ಟೆಗಳ ಪೈಕಿ, ಸಿಯೋಲ್ ಮತ್ತು ಶಾಂಘೈ ಲಾಭ ಕಂಡವು. ಟೋಕಿಯೊ ಮತ್ತು ಹಾಂಗ್​ಕಾಂಗ್ ಕುಸಿತ ದಾಖಲಿಸಿದವು. ಐರೋಪ್ಯ ಮಾರುಕಟ್ಟೆಗಳು ಲಾಭದಲ್ಲಿ ವಹಿವಾಟು ನಡೆಸಿದವು. ಮಂಗಳವಾರದಂದು ಅಮೆರಿಕ ಮಾರುಕಟ್ಟೆಗಳು ಏರಿಕೆ ಕಂಡವು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮಂಗಳವಾರ 111.04 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.

    ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕ ಮಂಗಳವಾರ 33.49 ಅಂಕಗಳು ಅಥವಾ ಶೇ. 0.04 ರಷ್ಟು ಕುಸಿದು 76,456.59 ಕ್ಕೆ ಸ್ಥಿರವಾಗಿತ್ತು. ನಿಫ್ಟಿ ಸೂಚ್ಯಂಕ 5.65 ಅಂಕಗಳು ಅಥವಾ 0.02 ರಷ್ಟು ಏರಿಕೆಯಾಗಿ 23,264.85 ಕ್ಕೆ ಮುಟ್ಟಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts