ಪ್ರತಿಯೊಬ್ಬರಿಗೂ ಓದುವ ಹಕ್ಕಿದೆ..ಕ್ಲಾಸ್‌ಗೆ ಎಂಟ್ರಿ ಕೊಟ್ಟ ಎಮ್ಮೆ! Buffalo ವಿಡಿಯೋ ನೋಡಿ

buffalo video viral
Published on

ನವದೆಹಲಿ: ಪ್ರತಿ ದಿನವೂ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಭಿನ್ನ ವೀಡಿಯೋಗಳು ಜನರ ಗಮನವನ್ನು ಸೆಳೆಯುತ್ತವೆ. ಈಗ ಎಲ್ಲಾ ರೀತಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.  ಆದರೆ ನಾವು ಇಂದು ನಿಮಗೆ ಎಮ್ಮೆಯೊಂದು ( Buffalo ) ಶಾಲೆಗೆ ಎಂಟ್ರಿ ಕೊಟ್ಟ ವಿಡಿಯೋವನ್ನು ತೋರಿಸಲಿದ್ದೇವೆ....

ವೈರಲ್ ಆಗುತ್ತಿರುವ ವಿಡಿಯೋ ನೋಡಿದ ಜನರು ಖುಷಿ ಪಟ್ಟಿದ್ದಾರೆ. ನಿಜವಾಗಿ ಏನಾಯಿತು ಎಂದರೆ ಎಮ್ಮೆಯೊಂದು ತರಗತಿಯನ್ನು ಪ್ರವೇಶಿಸಿತು. ಆ ತರಗತಿಯಲ್ಲಿ ಒಂದಷ್ಟು  ವಿದ್ಯಾರ್ಥಿಗಳು ಸೇರಿದ್ದರು. ಎಮ್ಮೆಯನ್ನು ನೋಡಿದ  ಆಶ್ಚರ್ಯಚಕಿತರಾದರು. ಒಬ್ಬ ವ್ಯಕ್ತಿ ತುಂಬಾ ಪ್ರೀತಿಯಿಂದ ಆ ಎಮ್ಮೆಯನ್ನು ತರಗತಿಯಿಂದ ಹೊರಗೆ ಕರೆದೊಯ್ದ. ಈ ಸಂಪೂರ್ಣ ಘಟನೆಯನ್ನು ಯಾರೋ ಒಬ್ಬರು ತಮ್ಮ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವೀಡಿಯೊವನ್ನು doaba_x08 ಹೆಸರಿನ ಖಾತೆಯಿಂದ Instagram ನಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೋ ಯಾವಾಗ ಮತ್ತು ಎಲ್ಲಿಂದ ಬಂದಿದೆ ಎಂಬ ಬಗ್ಗೆ ಮಾಹಿತಿ ನೀಡಲಾಗಿಲ್ಲ, ಆದರೆ ವೀಡಿಯೊ ವೈರಲ್ ಆಗುತ್ತಿದೆ.

ಸುದ್ದಿ ಬರೆಯುವವರೆಗೂ ವಿಡಿಯೋವನ್ನು 3 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ವಿಡಿಯೋ ನೋಡಿದ ಜನರು ತಮಾಷೆಯ ಕಾಮೆಂಟ್‌ಗಳನ್ನೂ ಮಾಡಿದ್ದಾರೆ. ಈ ಎಮ್ಮೆ  ಬಡ ಹುಡುಗಿ, ಅವಳು ಜನರಲ್, ಸೀಟು ಸಿಗಲಿಲ್ಲ  ಹೀಗಾಗಿ  ಎಮ್ಮೆ ಎಂಟ್ರಿ ಕೊಟ್ಟಿದೆ. ಎಮ್ಮೆ ಓದಲು ಬಂದಿದೆ ಎಂದು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net