ಸಮಸ್ಯೆಗಳಿಗೆ ಬುದ್ಧಧರ್ಮ ತತ್ವ ಪರಿಹಾರ

Ull_Buddhadharma
Published on

ಉಳ್ಳಾಲ: ಬುದ್ಧ ಧರ್ಮ ತತ್ವಗಳು ಅಧುನಿಕ ಭಾರತದ ಸಮಸ್ಯೆಗಳಿಗೆ ಪರಿಹಾರ ಸೂಚಿಸಬಲ್ಲವು. ಆಧುನಿಕ ಜಗತ್ತಿಗೆ ಬುದ್ಧ ಧರ್ಮ ಉತ್ತಮ ಮಾರ್ಗದರ್ಶನ ನೀಡಬಲ್ಲದು ಎಂದು ಮನೋರಖಿತ ಬಂತೇಜಿ ಹೇಳಿದರು.

ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾಪರಿ ನಿಬ್ಬಾಣ ದಿನ ಪ್ರಯುಕ್ತ ಮಂಗಳೂರು ವಿಶ್ವವಿದ್ಯಾಲಯದ ವತಿಯಿಂದ ಮಂಗಳ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಮ್ರಾಟ್ ಅಶೋಕ್ ಚಕ್ರವರ್ತಿ ರಾಜಕೀಯ ತತ್ವ ಸಿದ್ಧಾಂತ, ಬುದ್ಧ ಧರ್ಮದ ಪಂಚ ಶೀಲತತ್ವಗಳನ್ನು ಭಾರತ ಸಂವಿಧಾನದಲ್ಲಿ ಅಳವಡಿಸಿ ವೆಲೇರ್ ಸ್ಟೇಟ್ ಆ್ ಇಂಡಿಯಾ ಪರಿಕಲ್ಪನೆ ನೀಡಿದ್ದರಿಂದ ಎಂದೆಂದಿಗೂ ಸದೃಢ ರಾಷ್ಟ್ರವಾಗಲಿ ಎಂಬುದು ಅಂಬೇಡ್ಕರ್ ಕನಸಾಗಿತ್ತು ಎಂದರು.

ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅಧ್ಯಕ್ಷತೆ ವಹಿಸಿ, ಬುದ್ಧನ ತತ್ವಗಳು ಭಾರತದಲ್ಲಿರುವ ಜಾತಿ ತಾರತಮ್ಯಕ್ಕೆ ಪರಿಹಾರ ಸೂಚಿಸಬಲ್ಲದು ಎಂದರು.

ಕಾರ್ಯಕ್ರಮ ಸಂಯೋಜಕ ಡಾ.ನರಸಿಂಹಯ್ಯ ಎನ್ ಸ್ವಾಗತಿಸಿದರು. ಕುಲಸಚಿವ ರಾಜು ಮೊಗವೀರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸವಿತಾ ವಂದಿಸಿದರು. ಡಾ.ಯಶು ಕುಮಾರ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net