ಉಜ್ಜಯಿನಿ ಮಹಾಕಾಳ ದೇವಸ್ಥಾನ ಉಗ್ರರ ಕೇಂದ್ರಸ್ಥಾನ ಎಂದ ಬಿಎಸ್​ಪಿ ಕೌನ್ಸಿಲರ್​ ಬಂಧನ

Arrest Saddam
Published on

ಅಲಿಗಢ್​: ಮಧ್ಯಪ್ರದೇಶದ ಉಜ್ಜಯನಿ ಮಹಾಕಾಳೇಶ್ವರ ದೇವಸ್ಥಾನ ಉಗ್ರರ ಪಾಲಿಗೆ ಸ್ವರ್ಗವಾಗಿದೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ಉತ್ತರ ಪ್ರದೇಶ ಬಹುಜನ ಸಮಾಜ ಪಕ್ಷದ ಕೌನ್ಸಿಲರ್​ ಸದ್ದಾಂ ಹುಸೇನ್​ರನ್ನು ಪೊಲೀಸರು ಬಂಧಿಸಿದ್ದಾರೆ.

ಗ್ಯಾಂಗ್​ಸ್ಟರ್​ ವಿಕಾಸ್​ ದುಬೆಯನ್ನು ಮಧ್ಯಪ್ರದೇಶದ ಉಜ್ಜಯಿನಿ ಮಹಾಕಾಳ ದೇಗುಲದಲ್ಲಿ ಬಂಧಿಸಿದ ಬೆನ್ನಲ್ಲೇ ಸದ್ದಾಂ ಈ ಹೇಳಿಕೆಯನ್ನು ನೀಡಿದ್ದರು. ಅಂದೇ ಅವರ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು.

ಜುಲೈ 10ರಂದು ಹುಸೇನ್​ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಬಂಧಿಸಲಾಗಿದೆ ಎಂದು ಅಲಿಗಢ್​ ಎಸ್​ಪಿ ಅಭಿಷೇಕ್​ ತಿಳಿಸಿದ್ದಾರೆ. ಇದನ್ನೂ ಓದಿ: ಬೈರುತ್​ ಸ್ಫೋಟ: 30 ಗಂಟೆ ಬಳಿಕ ಬಂದರು ಕಾರ್ಮಿಕ ರಕ್ತಸಿಕ್ತ ಸ್ಥಿತಿಯಲ್ಲಿ ಜೀವಂತ ಪತ್ತೆ!

ಮಹಾಕಾಳ ದೇವಸ್ಥಾನ ಉಗ್ರರ ತಾಣ ಎಂದು ಹೇಳಿಕೆ ನೀಡಿದ್ದ ಬಿಎಸ್​ಪಿ ಕೌನ್ಸಿಲರ್​ ವಿರುದ್ಧ ಬಿಜೆಪಿ ಯುವ ಘಟಕದ ನಾಯಕ, ಅಲಿಗಢ್​ ಜಿಲ್ಲಾಧ್ಯಕ್ಷ ಮುಕೇಶ್​ ಲೋಧಿ ದೂರು ದಾಖಲು ಮಾಡಿದ್ದರು.

ಉಜ್ಜಯಿನಿ ದೇವಸ್ಥಾನ ಪ್ರಸಿದ್ಧ ದೇಗುಲ. ಆದರೆ ಸದ್ದಾಂ ಹುಸೇನ್​ ಅವರು ಇಂಥ ಹೇಳಿಕೆ ನೀಡುವ ಮೂಲಕ ಸಾಮರಸ್ಯವನ್ನು ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಹಾಗಾಗಿ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಮುಕೇಶ್​ ಲೋಧಿ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net