More

    ಬಿಎಸ್​ಇ, ನಿಫ್ಟಿ ಸೆನ್ಸೆಕ್ಸ್​ ಅಲ್ಪ ಇಳಿಕೆ: 2003ರ ಕೊನೆಯ ವಹಿವಾಟಿನ ದಿನ ಸೂಚ್ಯಂಕ ಕುಸಿತ ಕಂಡಿದ್ದೇಕೆ?

    ಮುಂಬೈ: ಗರಿಷ್ಠ ಮಟ್ಟ ತಲುಪಿ ದಾಖಲೆ ಸೃಷ್ಟಿಸಿದ್ದ ಬಿಎಸ್​ಇ ಮತ್ತು ನಿಫ್ಟಿ ಸೂಚ್ಯಂಕಗಳು 2023ರ ಕೊನೆಯ ವಹಿವಾಟಿನ ದಿನದಂದು ಕುಸಿತ ಕಂಡವು. ಏಕೆಂದರೆ ಹೂಡಿಕೆದಾರರು ಇತ್ತೀಚಿನ ಏರಿಕೆಯ ನಂತರ ಲಾಭ ತೆಗೆದುಕೊಳ್ಳಲು ಆದ್ಯತೆ ನೀಡಿ ಮಾರಾಟಕ್ಕೆ ಮುಂದಾದರು. ಹೀಗಾಗಿ, ಶೇಕಡಾ 20ರಷ್ಟು ಏರುವ ಮೂಲಕ ದಾಖಲೆಯ ವರ್ಷವನ್ನು ಕಂಡ ಸೂಚ್ಯಂಕಗಳು ಕೊನೆಯ ದಿನದಂದು ಅಲ್ಪ ಕುಸಿತ ಅನುಭವಿಸಿದವು.

    ಹಿಂದಿ ಐದು ದಿನಗಳ ಏರಿಕೆಯ ಓಟದ ನಂತರ ಶುಕ್ರವಾರ ಇಂಧನ, ಬ್ಯಾಂಕಿಂಗ್ ಮತ್ತು ಐಟಿ ಷೇರುಗಳಲ್ಲಿ ಮಾರಾಟದ ಒತ್ತಡ ಉಂಟಾಯಿತು. ಇದು ಸೂಚ್ಯಂಕಗಳನ್ನು ಕೆಳಕ್ಕೆ ತಳ್ಳಿತು.

    30-ಷೇರುಗಳ ಬಿಎಸ್‌ಇ ಸೂಚ್ಯಂಕ 170.12 ಅಂಕ ಅಥವಾ ಶೇಕಡಾ 0.23 ರಷ್ಟು ಕುಸಿದು 72,240.26 ಕ್ಕೆ ಸ್ಥಿರಗೊಂಡಿತು. ದಿನದ ವಹಿವಾಟಿನ ನಡುವೆ, ಇದು 327.74 ಅಂಕ ಕುಸಿದು 72,082.64 ಕ್ಕೆ ತಲುಪಿತ್ತು.

    ನಿಫ್ಟಿ ಸೂಚ್ಯಂಕವು 47.30 ಅಂಕ ಅಥವಾ 0.22 ರಷ್ಟು ಕುಸಿದು 21,731.40 ಕ್ಕೆ ಸ್ಥಿರವಾಯಿತು. ದಿನದ ವಹಿವಾಟಿ ನಡುವೆ ಇದು 101.8 ಅಂಕ ಕುಸಿದು 21,676.90 ಕ್ಕೆ ತಲುಪಿತ್ತು.

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇನ್ಫೋಸಿಸ್, ಟೈಟಾನ್, ಟೆಕ್ ಮಹೀಂದ್ರಾ, ಇಂಡಸ್‌ಇಂಡ್ ಬ್ಯಾಂಕ್, ಎನ್‌ಟಿಪಿಸಿ, ಐಸಿಐಸಿಐ ಬ್ಯಾಂಕ್, ಪವರ್ ಗ್ರಿಡ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಷೇರುಗಳು ಪ್ರಮುಖವಾಗಿ ಹಿನ್ನಡೆ ಕಂಡವು.

    ಟಾಟಾ ಮೋಟಾರ್ಸ್, ನೆಸ್ಲೆ, ಹಿಂದೂಸ್ತಾನ್ ಯೂನಿಲಿವರ್, ಟಾಟಾ ಸ್ಟೀಲ್, ಬಜಾಜ್ ಫೈನಾನ್ಸ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ಲಾಭ ಗಳಿಸಿದವು.

    ವರ್ಷದ ಕೊನೆಯ ವಹಿವಾಟಿನ ದಿನದಂದು ಮಾರುಕಟ್ಟೆಯು ಸೌಮ್ಯವಾದ ಲಾಭದ ಬುಕಿಂಗ್‌ಗೆ ಸಾಕ್ಷಿಯಾಯಿತು. ಅಮೆರಿಕ ಬ್ಯಾಂಕ್​ ಬಡ್ಡಿ ದರ ಕಡಿತ ಮತ್ತು ಬಾಂಡ್ ಇಳುವರಿಗಳಲ್ಲಿನ ಕುಸಿತದ ಕಾರಣದಿಂದಾಗಿ ಮುಂದಿನ ವರ್ಷದ ಆರಂಭದಲ್ಲಿಯೂ ಷೇರು ಮಾರುಕಟ್ಟೆಯಲ್ಲಿ ಸಂಭ್ರಮವು ಮುಂದುವರಿಯುವ ನಿರೀಕ್ಷೆಯಿದೆ.

    ಏಷ್ಯನ್ ಮಾರುಕಟ್ಟೆಗಳಲ್ಲಿ, ಟೋಕಿಯೊ ಕುಸಿತ ಕಂಡರೆ, ಶಾಂಘೈ ಮತ್ತು ಹಾಂಗ್ ಕಾಂಗ್ ಲಾಭ ಗಳಿಸಿದವು. ದಕ್ಷಿಣ ಕೊರಿಯಾದಲ್ಲಿ ಮಾರುಕಟ್ಟೆಗಳನ್ನು ಮುಚ್ಚಲಾಗಿತ್ತು.

    ಐರೋಪ್ಯ ಮಾರುಕಟ್ಟೆಗಳು ಲಾಭದಲ್ಲಿ ವಹಿವಾಟು ನಡೆಸಿದವು. ಅಮೆರಿಕದ ಮಾರುಕಟ್ಟೆಗಳಲ್ಲಿ ಗುರುವಾರ ಮಿಶ್ರ ಪ್ರತಿಕ್ರಿಯೆ ಕಂಡುಬಂದಿತು.

    ಬಿಎಸ್‌ಇ ಸೂಚ್ಯಂಕವು ಗುರುವಾರ 371.95 ಅಂಕ ಏರಿ 72,410.38 ರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತ್ತು.

    ನಿಫ್ಟಿ ಸೂಚ್ಯಂಕವು 123.95 ಅಂಕ ಏರಿಕೆಯಾಗಿ 21,778.70 ರ ಹೊಸ ದಾಖಲೆ ಬರೆದಿತ್ತು.

    ಕಳೆದ ಐದು ವಹಿವಾಟು ಅವಧಿಗಳಲ್ಲಿ, ಬಿಎಸ್‌ಇ ಬೆಂಚ್‌ಮಾರ್ಕ್ 1,904.07 ಪಾಯಿಂಟ್‌ಗಳು ಅಥವಾ 2.70 ಶೇಕಡಾವನ್ನು ಹೆಚ್ಚಿಸಿತು ಮತ್ತು ನಿಫ್ಟಿ 628.55 ಪಾಯಿಂಟ್‌ಗಳು ಅಥವಾ ಶೇಕಡಾ 2.97 ರಷ್ಟು ಏರಿತು.

    ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ 0.86 ಶೇಕಡಾ ಏರಿಕೆಯಾಗಿ $ 77.81 ಕ್ಕೆ ತಲುಪಿದೆ.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಗುರುವಾರ 4,358.99 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.

    ಪತಿ, ತಾಯಿಗೆ ಗನ್​ ತೋರಿಸಿ ಮಣಿಪುರ ಗಾಯಕ ಅಪಹರಣ

    ಇಂಡಿಯಾ ಮೈತ್ರಿಕೂಟದಲ್ಲಿ ಕಾಣಿಸಿಕೊಳ್ಳುತ್ತಿದೆ ಬಿರುಕು: 23 ಸ್ಥಾನಗಳಲ್ಲಿ ಸ್ಪಧಿಸಲು ಶಿವಸೇನೆ (ಯುಬಿಟಿ) ಪಟ್ಟು

    ಪ್ರಧಾನಿ ಮೋದಿಯವರಿಂದ ಡಿ.30ರಂದು ಉದ್ಘಾಟನೆ: ಅಮೃತ ಭಾರತ ಎಕ್ಸ್​ಪ್ರೆಸ್​ ವೈಶಿಷ್ಟ್ಯಗಳೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts