ಕ್ರಿಕೆಟ್​ ಆಡುವಾಗ ಔಟ್​​ ಮಾಡಿದ್ದಕ್ಕೆ ಬಾಲಕನನ್ನು ಕೊಂದ ಸಹೋದರರು!

bowled
ಸಾಂದರ್ಭಿಕ ಚಿತ್ರ
Published on

ಕಾನ್ಫುರ: ಕ್ರಿಕೆಟ್​ ಆಡುವ ವೇಳೆ ತನ್ನನ್ನು ಔಟ್​ ಮಾಡಿದ ಎಂಬ ಕಾರಣಕ್ಕೆ ಸಹೋದರರಿಬ್ಬರು 14 ವರ್ಷದ ಬಾಲಕನನ್ನು ಹೊಡೆದು ಕೊಂದಿರುವ ಘಟನೆ ಉತ್ತರಪ್ರದೇಶದ ಕಾನ್ಫುರದಲ್ಲಿ ನಡೆದಿದೆ.

ಘಟನೆಯೂ ಕಾನ್ಫುರ ಜಿಲ್ಲೆಯ ಘಟಂಪುರದ ರಹತಿಡೇರಾ ಗ್ರಾಮದಲ್ಲಿ ನಡೆದಿದ್ದು, ಪ್ರಕರಣದ ಪ್ರಮುಖ ಆರೋಪಿ ಹಾಗೂ ಆತನ ಸಹೋದರ ಪರಾರಿಯಾಗಿದ್ಧಾರೆ. ‘

ಪ್ರಕರಣದ ಹಿನ್ನಲೆ?

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಪೊಲಿಸ್​ ಅಧಿಕಾರಿಯೊಬ್ಬರು ಮೃತ ಬಾಲಕ ಹಾಗೂ ಆರೋಪಿಗಳು ಕ್ರಿಕೆಟ್​ ಆಡುವ ಸಮಯದಲ್ಲಿ ಔಟ್​ ಮಾಡಿದ ಎಂಬ ಕಾರಣಕ್ಕೆ ಮೊದಲಿಗೆ ಜಗಳ ಶುರುವಾಗಿದೆ. ಈ ವೇಳೆ ಆರೋಪಿಯೂ ತಾನು ಬೇರೆ ಬ್ಯಾಟ್ಸ್​ಮನ್​ಗೆ ಕ್ರೀಸ್​ ಬಿಟ್ಟುಕೊಡುವುದಿಲ್ಲ ಎಂದು ಹಠ ಹಿಡಿದಿದ್ಧಾನೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಈ ವೇಳೆ ಔಟ್​ ಆದ 17 ವರ್ಷದವನಿಗೂ ಹಾಗೂ 14ರ ಬಾಲಕನ ನಡುವೆ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಎದುರಾಳಿಯ ಮೇಲೆ ಹಲ್ಲೆ ನಡೆಸಲಾಗಿದೆ. 17 ವರ್ಷದವ ಹಲ್ಲೆ ನಡೆಸುವ ವೇಳೆ ಆತನ ಸಹೋದರನು ಕೂಡಿಕೊಂಡಿದ್ದು, ಇಬ್ಬರು ಸೇರಿಕೊಂಡು 14ರ ಬಾಲಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ಧಾನೆ.

ಕುಟುಂಬಸ್ಥರ ಪ್ರತಿಭಟನೆ

ಗಾಯಾಳು ಬಾಲಕನನ್ನು ಕಂಡ ಸ್ಥಳೀಯರು ಕೂಡಲೇ ಆತನನ್ನು ಆಸ್ಪತ್ರೆಗೆ ಸೇರಿಸಿ ಪೋಷಕರಿಗೆ ಮಾಹಿತಿ ಮುಟ್ಟಿಸಿದ್ದಾರೆ. ತೀವ್ರ ರಕ್ತಸ್ರಾವ ಆಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಹಲ್ಲೆಗೊಳಗಾಗಿದ್ದ, ಬಾಲಕ ಮೃತಪಟ್ಟಿದ್ದಾನೆ. ವಿಚಾರ ತಿಳದು ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನು ಮರಣೊತ್ತರ ಪರೀಕ್ಷೆಗೆ ಕಳುಹಿಸಲು ಮುಂದಾಗಿದ್ದಾರೆ.

ಇದಕ್ಕೊಪ್ಪದ ಬಾಲಕನ ಪೋಷಕರು ಹಾಗೂ ಸಂಬಂಧಿಕರು ಆರೋಪಿಗಳನ್ನು ಬಂಧಿಸುವವರೆಗೂ ಮರಣೊತ್ತರ ಪರೀಕ್ಷೆ ನಡೆಸುವಂತಿಲ್ಲ ಮತ್ತು ಅಂತ್ಯೆಕ್ರಿಯೆ ಮಾಡುವುದಿಲ್ಲ ಎಂದು ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಕುಟುಂಬಸ್ಥರ ಮನವೊಲಿಸಿದ ಬಳಿಕ ಬಾಲಕನ ಮೃತದೇಹವನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net