ಪಕ್ಕದ ಗ್ರಾಮದ ಯುವಕನ ಜೊತೆ ಪ್ರೀತಿ, ರಕ್ಷ ಬಂಧನ ಆಚರಿಸಿದ ಬಳಿಕ ತಂಗಿ ಕೊಲೆಗೈದ ಅಣ್ಣ| Murder

Murder 1
Published on

Murder: 18 ವರ್ಷದ ತನ್ನ ಸಹೋದರಿ ಇನ್ನೊಬ್ಬ ಯುವಕನ ಪ್ರೀತಿಯಲ್ಲಿ ಬಿದ್ದಿದ್ದನ್ನು ಸಹಿಸದ ಅಣ್ಣ, ರಕ್ಷಾ ಬಂಧನ ಆಚರಿಸಿದ ಬಳಿಕ ಆಕೆಯನ್ನು ಕೊಲೆಗೈದ ಘಟನೆ ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಗರೌತ ಪ್ರದೇಶದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಂದ್ರಾಪುರ ಗ್ರಾಮದ ನಿರ್ಜನ ಪ್ರದೇಶ ದಾದಾ ಮಹಾರಾಜ್ ಪ್ಲಾಟ್​ಫಾರ್ಮ್​ ಬಳಿ ಕುಮಾರಿ ಸಹೋದರ್ ಅಲಿಯಾಸ್ ಪುಟ್ಟಿ ಶವ ಭಾನುವಾರ ತಲೆ ಬೊಳಿಸಿದ ರೀತಿಯಲ್ಲಿ ಪತ್ತೆಯಾಗಿದೆ. ಕೊಲೆಗೆ ಸಂಬಂಧಿಸಿದಂತೆ ಆಕೆಯ ಸಹೋದರ ಅರವಿಂದ್ ಮತ್ತು ಸ್ನೇಹಿತ ಪ್ರಕಾಶ್ ಪ್ರಜಾಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಂಗಿ ಕೊಲೆ ಮಾಡುವ 2 ದಿನಗಳ ಮುಂಚೆ ಆಕೆಯ ಸ್ನೇಹಿತ ಲಹ್ಚುರಾ ಮೂಲದ 19 ವರ್ಷದ ವಿಶಾಲ್ ಶವ ಗುಧಾ ಗ್ರಾಮದ ಬಳಿ ಆಗಸ್ಟ್ 7ರಂದು ಪತ್ತೆಯಾಗಿತ್ತು. ಮೊದಲು ಆರೋಪಿ ತನ್ನ ಸ್ನೇಹಿತನ ಸಹಾಯದಿಂದ ತಂಗಿಯ ಪ್ರಿಯಕರನನ್ನು ಕೊಂದು ಬಳಿಕ, ರಕ್ಷ ಬಂಧನದ ದಿನ ಆಕೆಯನ್ನು ಕೊಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಲೆಯ ಘಟನೆ ಹಿನ್ನೆಲೆ

4 ತಿಂಗಳ ಹಿಂದೆ ಪುಟ್ಟಿ ಮತ್ತು ವಿಶಾಲ್ ಮನೆಯಿಂದ ಓಡಿ ಹೋಗಿದ್ದರು. ಬಳಿಕ ಮನೆಯವರ ಮನವೊಲಿಕೆಯಿಂದ ವಾಪಸ್ ಆಗಿದ್ದರು. ಪರಸ್ಪರ ಎರಡು ಕುಟುಂಬಗಳ ನಡುವೆ ರಾಜಿ ನಡೆದು ಪರಿಸ್ಥಿತಿ ತಣ್ಣಗಾಗಿತ್ತು. ಅದ್ಯಾಗೂ ಇಬ್ಬರು ಪ್ರೇಮಿಗಳು ಪರಸ್ಪರ ಮತ್ತೆ ಸೇರಲು ಪ್ರಾರಂಭಿಸಿದ್ದಾರೆ. ಕೆಲ ದಿನಗಳ ಹಿಂದೆ ಅಷ್ಟೇ ಪುಣೆಯಿಂದ ವಾಪಸ್ ಆಗಿದ್ದ ಅಣ್ಣ ಅರವಿಂದ್​ಗೆ ಇದು ಇಷ್ಟವಾಗಿರಲಿಲ್ಲ. ಹೀಗಾಗಿ ತನ್ನ ಸ್ನೇಹಿತನನ್ನು ಜೊತೆಗೆ ಸೇರಿಸಿಕೊಂಡು ಕೊಲ್ಲಲು ನಿರ್ಧರಿಸಿದನು. ಆಗಸ್ಟ್ 7ರಂದು ಬೆಳಗ್ಗೆ ಕೆಲಸ ಕೊಡಿಸುವ ನೆಪದಲ್ಲಿ ವಿಶಾಲ್​ನನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ವಿಶಾಲ್ ತಂದೆ ಹಾಲ್ಕೆರಾಮ್ ನೀಡಿದ ದೂರಿನ ಮೇರೆಗೆ ಪೊಲೀಸರು ಇಬ್ಬರ ಮೇಲೂ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಆ ಪ್ರಕರಣದಲ್ಲಿ ತನಿಖೆ ಇನ್ನೂ ನಡೆಯುತ್ತಿದ್ದಾಗಲೇ ಶನಿವಾರ, ಅರವಿಂದ್ ತಂಗಿ ಪುಟ್ಟಿಗೆ ಔಷಧಿ ತರುವ ನೆಪದಲ್ಲಿ ಅವಳನ್ನು ಕರೆದುಕೊಂಡು ಹೋಗಿ ಕೊಂದಿದ್ದಾನೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net