More

  ‘ಅವರು ಚೌಟ, ಇವರು ಕೋಟಾ, ಕಾಂಗ್ರೆಸ್​​​ಗೆ ಗೂಟ’; ಬ್ರಿಜೇಶ್ ಚೌಟ ಮುನ್ನಡೆ ಬೆನ್ನಲ್ಲೇ ಯತ್ನಾಳ್​​ ನೀಡಿದ ಹೇಳಿಕೆ ವೈರಲ್​​ !

  ಬೆಂಗಳೂರು: ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಇನ್ನೇನೂ ಕೆಲವೇ ಗಂಟೆಗಳು ಉಳಿದಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಅಭ್ಯರ್ಥಿಗಳು ಟೆಂಪಲ್​ ರನ್​​ ಕೈಗೊಂಡಿದ್ದಾರೆ. ಮತ್ತೊಂದೆಡೆ ಬಿಜೆಪಿ ಹಾಗು ಕಾಂಗ್ರೆಸ್​​​ ಅಭ್ಯರ್ಥಿಗಳು ನೀಡಿದ್ದಂತಹ ಹೇಳಿಕೆಗಳು ಇದೀಗ ವೈರಲ್​ ಆಗ್ತಾ ಇದೆ.

  ಕಳೆದ ಎರಡು ತಿಂಗಳ ಹಿಂದೆ ಉಡುಪಿಗೆ ಭೇಟಿ ನೀಡಿದ್ದಂತಹ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕರಾವಳಿ ಹಿಂದುತ್ವ ನೋಡಲು ಬಂದಿದ್ದೇನೆ. ಉತ್ತರ ಕರ್ನಾಟಕದಲ್ಲಿ ಈಗ ಹಿಂದುತ್ವ ಉಗಮ ಆಗುತ್ತಿದೆ ಎಂದಿದ್ದರು.
  ಅಲ್ಲದೇ, ಅವರು ‘ಚೌಟ’ (ಬ್ರಿಜೇಶ್ ಚೌಟ) ಇವರು ‘ಕೋಟ’ (ಕೋಟಾ ಶ್ರೀನಿವಾಸ್ ಪೂಜಾರಿ) ಕಾಂಗ್ರೆಸ್ ನಾಯರಿಗೆ ‘ಗೂಟ’ ಗ್ಯಾರಂಟಿ ಎಂದು ಕುಟುಕಿದರು.

  ‘ಅವರು ಚೌಟ, ಇವರು ಕೋಟಾ, ಕಾಂಗ್ರೆಸ್​​​ಗೆ ಗೂಟ’; ಬ್ರಿಜೇಶ್ ಚೌಟ ಮುನ್ನಡೆ ಬೆನ್ನಲ್ಲೇ ಯತ್ನಾಳ್​​ ನೀಡಿದ ಹೇಳಿಕೆ ವೈರಲ್​​ !

  ಇದು 10 ವರ್ಷದ ಟ್ರೈಲರ್, ಮುಂದಿನ ಪಿಚ್ಚರ್ ಬಾಕಿ ಹೇ.. ಕೇಜ್ರಿವಾಲ್ ಇಲ್ಲ, ಡಿಂಗ್ರಿವಾಲನೂ.. ಎಲ್ಲರೂ ಜೈಲಿಗೆ ಹೋಗ್ತಾನೆ. ಮಗ, ತಂಗಿ, ಅಣ್ಣನ ಮಗನಿಗೆ ಟಿಕೆಟ್ ಅಂತ ಕಚ್ಚಾಡುತ್ತಿದ್ದಾರೆ. ಪರಿವಾರ ವಾದ 2024ಕ್ಕೆ ಮೋದಿ ಆಯ್ಕೆ ಆದ್ರೆ ಎಲ್ಲಾ ನಿರ್ನಾಮ ಆಗುತ್ತದೆ ಎಂದು ಹೇಳಿದರು

  ಇದೀಗ ದಕ್ಷಿಣ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಮುನ್ನಡೆ ಕಾಯ್ದುಕೊಂಡ ಹಿನ್ನಲೆ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಂದು ನೀಡಿದ ಹೇಳಿಕೆ ಇದೀಗ ಸೋಷಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗುತ್ತಲಿದೆ.

  See also  ಯತ್ನಾಳ್​ ಪ್ರತಿ ಮಾತಿಗೂ ಕೂಗಾಡಿದ ಜನರು…!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts