ಶೌಚಾಲಯಕ್ಕೆ ಹೋಗಿಬರುವುದಾಗಿ ಹೇಳಿದ ವಧು Cash, ಆಭರಣ ಸಮೇತ ಎಸ್ಕೇಪ್​; ಮುಂದೇನಾಯ್ತು ನೀವೇ ನೋಡಿ

Marriage Ceremony
Published on

ಲಖನೌ: ಇತ್ತೀಚಿನ ದಿನಗಳಲ್ಲಿ ಮದುವೆಗೆ ಸಂಬಂಧಿಸಿದ ಸುದ್ದಿಗಳು ವೈರಲ್​ ಆಗುವ ಮೂಲಕ ಚರ್ಚೆಗೆ ಆಸ್ಪದ ಮಾಡಿಕೊಡುತ್ತಿದ್ದಾವೆ. ಕ್ಷುಲಕ ಕಾರಣಕ್ಕೆ ಮದುವೆ ಮನೆಯಲ್ಲಿ ಕಿತ್ತಾಡಿಕೊಳ್ಳುವುದು, ಕಡೇ ಕ್ಷಣದಲ್ಲಿ ಮದುವೆಯನ್ನು ನಿಲ್ಲಿಸಿದಂತಹ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಸುದ್ದಿಯಾಗುತ್ತಲೇ ಇದೆ. ಇದೀಗ ವಧುವೊಬ್ಬಳು (Bride) ಮದುವೆ ಮನೆಯಿಂದ ನಗದು ಹಾಗೂ ಚಿನ್ನಾಭರಣದ (Cash, Jewellery) ಸಮೇತ ಎಸ್ಕೇಪ್​ ಆಗಿರುವ ಘಟನೆ ಉತ್ತರಪ್ರದೇಶದ ಗೋರಖ್​ಪುರದಲ್ಲಿ ನಡೆದಿದೆ.

ಗೋರಖ್​ಪುರದ ಭರೋಹಿಯಾದಲ್ಲಿ ಈ ಘಟನೆ ನಡೆದಿದ್ದು, ವಧು (Bride) ನಗದು ಹಾಗೂ ಚಿನ್ನಾಭರಣದೊಂದಿಗೆ (Cash, Jewellery) ಎಸ್ಕೇಪ್​ ಆಗಿರುವುದನ್ನು ಕಂಡು ವರ ಮಾಧ್ಯಮದವರ ಮುಂದೆ ನಡೆದ ಘಟನೆಯನ್ನು ವಿವರಿಸಿದ್ದು, ಪೊಲೀಸರು ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.

ಸೀತಾಪುರ ಮೂಲದ ಕಮಲೇಶ್​ (40) ಎಂಬುವವರು ತಮ್ಮ ಮೊದಲ ಪತ್ನಿ ನಿಧನರಾದ ನಂತರ ಎರಡನೇ ಮದುವೆ ಮಾಡಿಕೊಳ್ಳಲು ನಿರ್ಧರಿಸಿದರು. ಮದುವೆ ಬ್ರೋಕರ್​ ಒಬ್ಬರ ಮೂಲಕ ಗೋರಖ್​ಪುರ ಮೂಲದ ಯುವತಿ ಕುಟುಂಬಸ್ಥರನ್ನು ಸಂಪರ್ಕಿಸಿದ ಕಮಲೇಶ್​ ಅವರನ್ನು ಒಪ್ಪಿಸಿ ಮದುವೆಯ ಸಂಪೂರ್ಣ ಖರ್ಚು ವೆಚ್ಚ ತಾವೇ ಭರಿಸುವುದಾಗಿ ಹೇಳಿದ್ದರು.

Marriage

ಅದರಂತೆ ಜನವರಿ 03ರಂದು ಮದುವೆಯನ್ನು ಗೋರಖ್​ಪುರದ ಭರೋಹಿಯಾದಲ್ಲಿರುವ ಶಿವನ ದೇವಸ್ಥಾನದಲ್ಲಿ ಏರ್ಪಡಿಸಲಾಗಿತ್ತು. ಮದುವೆಯ ದಿನ ತನ್ನ ತಾಯಿಯೊಂದಿಗೆ ಆಗಮಿಸಿದ ವಧು ಸೀರೆ, ನಗದು ಹಾಗೂ ಚಿನ್ನಾಭರಣಗಳನ್ನು (Cash, Jewellery) ಪಡೆದು ಶಾಸ್ತ್ರಕ್ಕೆ ಕುಳಿತುಕೊಂಡಿದ್ದರು. ಈ ವೇಳೆ ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿದ ವಧು ತುಂಬಾ ಹೊತ್ತು ಬಾರದೆ ಇರುವುದನ್ನು ಗಮನಿಸಿದ ವರನ ಕುಟುಂಬಸ್ಥರು ತೆರಳಿ ಪರಿಶೀಲಿಸಿದಾಗ ಆಕೆ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ವಿಚಾರಿಸಲು ಮುಂದಾದಾಗ ಆಕೆ ತಾಯಿ ಕೂಡ ಮದುವೆ ಮನೆಯಿಂದ ಎಸ್ಕೇಪ್​ ಆಗಿರುವುದು ಬೆಳಕಿಗೆ ಬಂದಿದೆ. ವರ ಮಾಧ್ಯಮದವರ ಬಳಿ ನಡೆದ ಘಟನೆಯನ್ನು ವಿವರಿಸಿದ್ಧಾನೆ. ಘಟನೆ ಸಂಬಂಧ ಮಾತನಾಡಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್​ ಯಾವುದೇ ದೂರು ದಾಖಲಾಗಿಲ್ಲ. ದೂರು ದಾಖಲಾದರೆ ವಿಸ್ತೃತ ತನಿಖೆ ನಡೆಸಲಾಗುವದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net