VIDEO| ಹೆಲ್ಮೆಟ್ ಇಲ್ಲದೆ ಸ್ಕೂಟರ್ ಓಡಿಸಿದ ವಧು; ಖಡಕ್​ ಎಚ್ಚರಿಕೆ ಕೊಟ್ಟ ಪೊಲೀಸರು

Bride rides a scooter without helmet in viral video Delhi Police reacts
Published on

ನವದೆಹಲಿ: ವಧು ಹೆಲ್ಮೆಟ್ ಇಲ್ಲದೆ ಸ್ಕೂಟರ್ ಓಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ನೆನಪಿದೆಯೇ? ಈ ವಿಡಿಯೋ ಮತ್ತೆ ಇದೀಗ ಸುದ್ದಿಯಾಗುತ್ತಿದೆ.

ಹೆಲ್ಮೆಟ್ ಇಲ್ಲದೆ ಸ್ಕೂಟರ್ ಸವಾರಿ ಮಾಡುವುದು ಶಿಕ್ಷಾರ್ಹ ಅಪರಾಧ ಎಂಬ ವಿಷಯದಲ್ಲಿ ಹೊಸದೇನೂ ಇಲ್ಲ. ಆದರೆ, ನಿಯಮ-ನಿಯಮಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಈ ವಧು ಮದುವೆಯ ಬಟ್ಟೆ ಮತ್ತು ಆಭರಣಗಳನ್ನು ಧರಿಸಿ ಹೆಲ್ಮೆಟ್ ಧರಿಸದೇ ಸ್ಕೂಟರ್ ಓಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದೆಹಲಿ ಪೊಲೀಸರ ಗಮನವನ್ನೂ ಸೆಳೆದಿದೆ.

ಸಾರ್ವಜನಿಕ ಪ್ರದೇಶದಲ್ಲಿ ಹೋಗುವಾಗ ಅಥವಾ ರಸ್ತೆಯಲ್ಲಿ ಪ್ರಯಾಣಿಸುವಾಗ ರಿಲ್ಸ್​​ ಮಾಡಲು ಪ್ರಯತ್ನಿಸಬೇಡಿ. ರಸ್ತೆಯ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಅಗತ್ಯವಾಗಿದೆ. ಬೇಜವಾಬ್ದಾರಿತನ ಮಾಡಬೇಡಿ ಎಂದು ಖಡಕ್​​ ಎಚ್ಚರಿಕೆ ಕೊಟ್ಟು ವಿಡಿಯೋವನ್ನು ಪೊಲೀಸ್​ ಇಲಾಖೆ ಸೋಶಿಯಲ್​​ ಮೀಡಿಯಾದಲ್ಲಿ ಶೇರ್​​ ಮಾಡಿಕೊಂಡಿದೆ.

ದೆಹಲಿ ಪೊಲೀಸ್ ಇಲಾಖೆಯು ನಾಗರಿಕರಿಗೆ ಕೆಲವು ಮೂಲಭೂತ ಸಂಚಾರ ನಿಯಮಗಳನ್ನು ನೆನಪಿಸಲು ವಿಡಿಯೋವನ್ನು ಹಂಚಿಕೊಂಡಿದೆ ಮತ್ತು ಅವುಗಳನ್ನು ಅನುಸರಿಸದಿದ್ದರೆ ಪರಿಣಾಮಗಳ ಬಗ್ಗೆ ಅವರಿಗೆ ಅರಿವು ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net