ಮದುವೆಯಾದ ಕೆಲವೇ ಘಂಟೆಗಳಲ್ಲಿ ದಾರುಣ ಅಂತ್ಯ ಕಂಡ ವಧು; ವರನ ಸ್ಥಿತಿ ಗಂಭೀರ

new wed
Published on

ನ್ಯೂಯಾರ್ಕ್​: ಕುಡಿದು ಅತಿ ವೇಗವಾಗಿ ಚಾಲನೆ ಮಾಡಿದ ಪರಿಣಾಮ ನವದಂಪತಿಗಳಿಬ್ಬರುಇ ದಾರುಣ ಅಂತ್ಯ ಕಂಡಿರುವ ಘಟನೆ ನ್ಯೂಯಾರ್ಕ್​ನ ಸೌತ್​ ಕೆರೋಲಿನಾದಲ್ಲಿ ನಡೆದಿದೆ.

ನವ ವಧು-ವರರಿಬ್ಬರು ಮದುವೆ ಆರತಕ್ಷತೆ ಮುಗಿಸಿಕೊಂಡು ವಾಪಸ್​ ಆಗುವ ವೇಳೆ ದುರ್ಘಟನೆ ಸಂಭವಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಜನ ಸಂತಾಪ ಸುಚಿಸಿದ್ದಾರೆ.

ಅತಿ ವೇಗ ಚಾಲನೆ

ಸಮಂತಾ ಹಚಿನ್​ಸನ್​(34) ಮೃತ ದುರ್ದೈವಿ ಎಂದು ತಿಳಿದು ಬಂದಿದ್ದು ಇವರ ಪತಿ ಆರಿಕ್​ ಹಚಿನ್​ಸನ್​ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರತಕ್ಷತೆ ಕಾರ್ಯಕ್ರಮವನ್ನು ಮುಗಿಸಿಕೊಂಡು ಗಾಲ್ಫ್​ ಕಾರ್ಟ್​ ವಾಹನದಲ್ಲಿ ವಾಪಸ್​ ಆಗುವ ವೇಳೆ ಹಿಂಬದಿಯಿಂದ ಅತಿ ವೇಗವಾಗಿ ಬಂದ ವಾಹನವೊಂದು ಮುಂಬದಿ ಇದ್ದ ಗಾಡಿಗೆ ಗುದ್ದಿದೆ.

accident groom

ಶಸ್ತ್ರಸಿಕಿತ್ಸೆ ಅಗತ್ಯ

ಗುದ್ದಿದ ರಭಸಕ್ಕೆ ಗಾಲ್ಫ್​ ಕಾರ್ಟ್​ ವಾಹನವು ಅನೇಕ ಬಾರಿ ಪಲ್ಟಿ ಹೊಡೆದು 100 ಯಾರ್ಡ್​ಗಿಂತ ಮುಂಬದಿ ಬಿದ್ದಿದೆ ಎಂದು ವರನ ತಾಯಿ ಹೇಳಿದ್ದಾರೆ.

ಅಪಘಾತದ ಗಂಭೀರತೆಗೆ ವಧು ಸ್ಥಳದಲ್ಲೇ ಸಾವನಪ್ಪಿದ್ದು ವರನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರಿಕ್​ಗೆ ಎರಡರಿಂದ ಮುರು ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಹೇಳಿರುವುದಾಗಿ ಅವರ ತಾಯಿ ತಿಳಿಸಿದ್ದಾರೆ.

ಮದುವೆಯಾಗಿ ಕೆಲ ಘಂಟೆಗಳಲ್ಲಿ ಅವಘಡ

ಇನ್ನು ಸಮಂತಾ ಹಾಗೂ ಆರಿಕ್​ ಮದುವೆಯಾದ ಕೆಲವೇ ಘಂಟೆಗಳಲ್ಲಿ ಘಟನೆ ಸಂಭವಿಸಿದ್ದು ಅತ್ಯಂತ ದುರದೃಷ್ಟಕರವಾಗಿದೆ.

ದುರಂತಕ್ಕೆ ಕಾರಣವಾದ ಪ್ರಮುಖ ಆರೋಪಿ ಜೇಮೀ ಕೊಮೊರೊಸ್ಕಿ(25)ಯನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net