More

    ವರ ಕೊರಳಿಗೆ ಹಾರ ಹಾಕಲು ಬರುತ್ತಿದ್ದಂತೆ ಹೊಡೆಯಲು ಶುರು ಮಾಡಿದ ವಧು: ವಿಡಿಯೋ ವೈರಲ್

    ನವದೆಹಲಿ: ಜಗತ್ತಿನಲ್ಲಿ ಪ್ರತಿಯೊಬ್ಬ ಹುಡುಗಿಯೂ ಒಳ್ಳೆಯ ಸಂಗಾತಿ ಸಿಗಲೆಂದು ಬಯಸುತ್ತಾಳೆ. ಇದಕ್ಕಾಗಿ ಕೆಲವರು ಲೆಕ್ಕವಿಲ್ಲದಷ್ಟು ವ್ರತಗಳನ್ನು ಮಾಡುತ್ತಾರೆ, ದೇವರಿಗೆ ಬೇಡಿಕೊಳ್ಳುತ್ತಾರೆ. ಇಷ್ಟೆಲ್ಲಾ ಮಾಡಿಯೂ ತಾನಂದುಕೊಂಡಂತಹ ಹುಡುಗ ಸಿಗದಿದ್ದರೆ ಏನಾಗಬಹುದು ಗೊತ್ತಾ…? ಹೌದು, ಇಲ್ಲೊಬ್ಬ ವಧುವಿಗೆ ಮದುವೆಯಾಗುವ ದಿನವೇ ಗೊತ್ತಾಗಿದ್ದು, ತನ್ನ ಭಾವಿ ಪತಿ ಎಂಥವನೆಂದು. ಆಗ ವಧು ನಡೆದುಕೊಂಡ ರೀತಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಮದುವೆ ಸಮಾರಂಭದಲ್ಲಿ ವಧು ತನ್ನ ಭಾವಿ ಪತಿಯ ಮೇಲೆ ಕೋಪಗೊಂಡು ಎಲ್ಲಾ ಅತಿಥಿಗಳ ಮುಂದೆಯೇ ಕಪಾಳಮೋಕ್ಷ ಮಾಡಿದ್ದಾಳೆ.

    ಕೋಪಗೊಂಡು ವರನಿಗೆ ಹೊಡೆದ ವಧು
    ಅಂದಹಾಗೆ ವಿಡಿಯೋದಲ್ಲಿ ವಧು-ವರರು ವೇದಿಕೆಯ ಮೇಲೆ ನಿಂತಿರುವುದನ್ನು ಕಾಣಬಹುದು. ನಂತರ ವರನು ವಧುವಿನ ಕೊರಳಿಗೆ ಮಾಲೆ ಹಾಕಲು ಮುಂದಾದ ತಕ್ಷಣ ವರನ ಬಾಯಿಯಿಂದ ಮದ್ಯದ ದುರ್ವಾಸನೆ ಬರುವುದನ್ನು ವಧು ಗ್ರಹಿಸುತ್ತಾಳೆ, ನಂತರ ಕೋಪಗೊಂಡು ವಧು ವೇದಿಕೆಯ ಮೇಲೆಯೇ ವರನನ್ನು ಹೊಡೆಯಲು ಪ್ರಾರಂಭಿಸುತ್ತಾಳೆ. ಕೊರಳಿಗೆ ಹಾರವನ್ನು ಹಾಕದೆ, ವೇದಿಕೆಯಿಂದ ಹೊರ ನಡೆಯುತ್ತಾಳೆ. ವರ ಮತ್ತು ಉಳಿದ ಅತಿಥಿಗಳು ವೇದಿಕೆಯ ಮೇಲೆ ನಿಂತು ಇದೆಲ್ಲವನ್ನು ವೀಕ್ಷಿಸುತ್ತಿರುವಾಗಲೇ ವಧು ಕೋಪಗೊಂಡು ಅಲ್ಲಿಂದ ಹೊರಟು ಹೋಗುತ್ತಾಳೆ.

    ವಧುವನ್ನು ಬೆಂಬಲಿಸಿದ ಜನರು
    ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ X ನಲ್ಲಿ @gharkekalesh ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಜನರು ಈ ವಿಡಿಯೋವನ್ನು ಸಾಕಷ್ಟು ಶೇರ್ ಮಾಡುತ್ತಿದ್ದಾರೆ. ಸುದ್ದಿ ಬರೆಯುವವರೆಗೂ 4 ಲಕ್ಷ ಮಂದಿ ವಿಡಿಯೋ ವೀಕ್ಷಿಸಿದ್ದು, ಬಗೆ ಬಗೆಯ ಕಾಮೆಂಟ್ ಕೂಡ ಮಾಡಿದ್ದಾರೆ. ಅನೇಕ ಜನರು ವಧುವಿನ ಈ ನಡೆಯನ್ನು ಸರಿಯೆಂದು ಪರಿಗಣಿಸಿದ್ದಾರೆ. ಒರ್ವ ಬಳಕೆದಾರನು, ‘ವರನು ಮಾದಕ ವ್ಯಸನಿಯಾಗಿದ್ದಾನೆ ಎಂದು ವಧು ಮುಂಚಿತವಾಗಿಯೇ ತಿಳಿದುಕೊಂಡಿರುವುದು ಒಳ್ಳೆಯದು ಎಂದರೆ ಮತ್ತೆ ಕೆಲವರು ಮದುವೆಯಾಗಿದ್ದಾರೋ ಇಲ್ಲವೋ…’ಎಂದು ಪ್ರಶ್ನಿಸಿದ್ದಾರೆ.

    ‘ಮೈನೆ ಪ್ಯಾರ್ ಕಿಯಾ’ ಶೂಟಿಂಗ್ ವೇಳೆ 5 ತಿಂಗಳ ಗರ್ಭಿಣಿಯಾಗಿದ್ದರಂತೆ ಭಾಗ್ಯಶ್ರೀ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts