ಬೆಂಗಳೂರು: ಮೋಟಾರ್ ಕಾರ್ ರೇಸ್‌ಗೆ ವಿಶ್ವಾದ್ಯಂತ ಕ್ರೇಜ್ ಇದೆ. ಭಾರತವೂ ಅದರಿಂದ ಹೊರತಾಗಿಲ್ಲ. ಈ ಕ್ರೀಡೆಯಿಂದ ಹಲವು ಪ್ರತಿಭಾನ್ವಿತರು ಹೊರಹೊಮ್ಮಿದ್ದಾರೆ. ಈ ಹಿನ್ನೆಲೆಯಲ್ಲಿ ಮೋಟಾರ್ ಸ್ಪೋರ್ಟ್ಸ್ ವಿಭಾಗದಲ್ಲಿ ಭಾರತೀಯರ ಸಾಧನೆ ಸೇರಿ ಅನೇಕ ಸಂಗತಿಗಳನ್ನು ಆಧರಿಸಿ ಡಾಕ್ಯುಮೆಂಟರಿ ಸರಣಿ ಸಿದ್ಧವಾಗಿದೆ. ಸುಜಿತ್ ಆರಾಧ್ಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಡಾಕ್ಯುಮೆಂಟರಿಗೆ ‘ಬ್ರೇಕಿಂಗ್ ದ ಬ್ಯಾರಿಯರ್ಸ್: ಇಂಡಿಯಾಸ್ ರೇಸ್ ಟು ಗ್ಲೋರಿ’ ಎಂದು ಹೆಸರಿಡಲಾಗಿದೆ.
ಇದು ಮೋಟಾರ್ ಸ್ಪೋರ್ಟ್ಸ್ ಜಗತ್ತಿನ ಮೊದಲ ಡಾಕ್ಯುಮೆಂಟರಿ ಎಂಬುದು ವಿಶೇಷ. ನಿರ್ದೇಶಕ ಸುಜಿತ್ ಆರಾಧ್ಯ ಪುತ್ರ ಯಶ್ ಆರಾಧ್ಯ ಸ್ವತಃ ಕಾರ್ ರೇಸರ್ ಆಗಿದ್ದಾರೆ. ‘ಈ ಡಾಕ್ಯುಮೆಂಟರಿ ಮೂಲಕ ಭಾರತೀಯ ಮೋಟಾರ್ ರೇಸ್ ಇತಿಹಾಸವನ್ನು ಹಂತ ಹಂತವಾಗಿ ಜನರಿಗೆ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಜತೆಗೆ ಒಂದಷ್ಟು ಸ್ಫೂರ್ತಿದಾಯಕ ಕಥೆಗಳನ್ನು ಇಂದಿನ ಯುವಜನತೆಗೆ ಆದರ್ಶವಾಗುವ ರೀತಿಯಲ್ಲಿ ತೋರಿಸಲಾಗುತ್ತಿದೆ’ ಎನ್ನುತ್ತಾರೆ ಸುಜಿತ್.
ಈ ಡಾಕ್ಯುಮೆಂಟರಿ ನಾಲ್ಕು ಸೀಸನ್‌ಗಳಲ್ಲಿ ಮೂಡಿಬರಲಿದೆ. ಮೊದಲ ಸರಣಿಯಲ್ಲಿ ತಲಾ 30 ನಿಮಿಷದ 8 ಎಪಿಸೋಡ್‌ಗಳಿರಲಿವೆ. ಒಟಿಟಿಯನ್ನೇ ಮುಖ್ಯ ವೇದಿಕೆಯಾಗಿಸಿಕೊಂಡಿದ್ದ ತಂಡವು ಇದೀಗ ಥಿಯೇಟರ್ ಪ್ರದರ್ಶನಕ್ಕೆ ಮುಂದಾಗಿದೆ. ಈಗಾಗಲೇ ಇಂಟರ್‌ನ್ಯಾಷನಲ್ ಫಿಲಂ ೆಸ್ಟಿವಲ್ ಆ್ ಇಂಡಿಯಾ, ಎ್ಐಸಿಸಿಐ ್ರೇಮ್ಸ್, ಮುಂಬೈ ಇಂಟರ್‌ನ್ಯಾಷನಲ್ ಫಿಲಂ ೆಸ್ಟಿವಲ್‌ಗಳಲ್ಲಿ ಪ್ರದರ್ಶನಗೊಂಡಿದ್ದು, ಇತ್ತೀಚೆಗೆ ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಕೂಡ ಯಶಸ್ವಿಯಾಗಿ ಥಿಯೇಟರ್ ಪ್ರದರ್ಶನ ಕಂಡಿದೆ. ನವೆಂಬರ್‌ನಲ್ಲಿ ನಡೆಯಲಿರುವ ನೆದರ್‌ಲ್ಯಾಂಡ್‌ನ ಇಂಟರ್‌ನ್ಯಾಷನಲ್ ಡಾಕ್ಯುಮೆಂಟರಿ ೆಸ್ಟ್‌ನಲ್ಲಿ ಪ್ರದರ್ಶನಕ್ಕೆ ಸಿದ್ಧತೆ ನಡೆಸುತ್ತಿದೆ. ಘನಶ್ಯಾಮ್ ತಿವಾರಿ ಛಾಯಾಗ್ರಹಣ, ಬುಡ್‌ಬುಡ್ಕೆ ಮ್ಯೂಸಿಕ್ ಸ್ಟೂಡಿಯೋ ಸಂಗೀತ ಈ ಸರಣಿಗೆ ಇರಲಿದೆ.