Breaking News | ತಿರುಪತಿ ಲಡ್ಡುಗೆ ದನದ ಕೊಬ್ಬು, ಮೀನಿನ ಎಣ್ಣೆ ಬಳಸಿದ್ದು ಕನ್ಫರ್ಮ್! ಸಾಕ್ಷ್ಯ ಮುಂದಿಟ್ಟ ಟಿಡಿಪಿ!

ತಿರುಪತಿ:  ಕಲಿಯುಗದ ಪ್ರತ್ಯಕ್ಷ ದೈವಂ ಶ್ರೀ ವೆಂಕಟೇಶ್ವರಸ್ವಾಮಿ ನೆಲೆಸಿರುವ ಪವಿತ್ರ ಕ್ಷೇತ್ರ ತಿರುಮಲ. ಈ ವೈಕುಂಟ ವಾಸ ವೆಂಕಟೇಶ್ವರ ಸ್ವಾಮಿಯು ಅಲಂಕಾರಪ್ರಿಯನಷ್ಟೇ ಅಲ್ಲ, ನೈವೇದ್ಯಪ್ರಿಯನೂ ಹೌದು. ಆದ್ದರಿಂದಲೇ ಸ್ವಾಮಿಗೆ ನೈವೇದ್ಯವಾಗಿ ಅರ್ಪಿಸುವ ಲಡ್ಡುವನ್ನು ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ (ಟಿಟಿಡಿ) ಭಕ್ತರಿಗೆ ಪ್ರಸಾದವಾಗಿ ನೀಡುತ್ತದೆ.

ಇದನ್ನೂ ಓದಿ:  ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಪ್ರಣಾಳಿಕೆ ಕಂಡು ಪಾಕಿಸ್ತಾನ ಖುಷಿಪಡುತ್ತಿದೆ: ಪ್ರಧಾನಿ ಮೋದಿ ವಾಗ್ದಾಳಿ

ಇದೀಗ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರು ವೈಎಸ್‌ಆರ್‌ಸಿಪಿ ಅವಧಿಯಲ್ಲಿ ತಿರುಮಲ ಲಡ್ಡು ತಯಾರಿಕೆಯಲ್ಲಿ ಹಸುವಿನ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂದು ಹೇಳಿದ್ದಾರೆ. ಇದು ತಿರುಮಲ ಲಡ್ಡುವಿನ ಪಾವಿತ್ರ್ಯತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಆದರೆ ಈ ಆರೋಪವನ್ನು ವೈಎಸ್‌ಆರ್ ಕಾಂಗ್ರೆಸ್ ತಿರಸ್ಕರಿಸಿದೆ.

ಇದೀಗ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರು ವೈಎಸ್‌ಆರ್‌ಸಿಪಿ ಅವಧಿಯಲ್ಲಿ ತಿರುಮಲ ಲಡ್ಡು ತಯಾರಿಕೆಯಲ್ಲಿ ದನದ ಕೊಬ್ಬು ಮತ್ತು ಮೀನಿನ ಎಣ್ಣೆಯನ್ನು ಬೆರಸಲಾಗಿದೆ ಎಂಬ ವರದಿಗಳನ್ನು ತೆಲುಗು ದೇಶಂ ಪಕ್ಷ ಪುರಾವೆ ಸಹಿತ ಬಹಿರಂಗಪಡಿಸಿದೆ.

ಈ ಸಂಬಂಧ ತೆಲುಗು ದೇಶಂ ಪಕ್ಷದ ರಾಜ್ಯ ವಕ್ತಾರ ಆನಂ ವೆಂಕಟ ರಮಣ ರೆಡ್ಡಿ ಅವರು, ತುಪ್ಪವನ್ನು ಪರೀಕ್ಷಿಸಿದ ವಿವಿಧ ಪ್ರಯೋಗಾಲಯಗಳ ವರದಿಗಳನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ.

ತುಪ್ಪದಲ್ಲಿ ದನದ ಕೊಬ್ಬು ಬಳಕೆ ಕನ್ಫರ್ಮ್​: ತಿರುಪತಿ ತಿರುಮಲ ದೇವಸ್ಥಾನಕ್ಕೆ ಪೂರೈಕೆಯಾಗುವ ತುಪ್ಪವನ್ನು ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದಿರುವ, ದೇಶದಲ್ಲೇ ಪ್ರಸಿದ್ಧವಾಗಿರುವ ಎನ್‌ಡಿಡಿಬಿ ಕ್ಯಾಲ್ಫ್ ಲ್ಯಾಬ್‌ನಲ್ಲಿ ಪರೀಕ್ಷಿಸಲಾಗಿದೆ. ಸೋಯಾಬೀನ್, ಕುಸುಬೆ, ಆಲಿವ್, ಗೋಧಿ ಹುರುಳಿ, ಕಾರ್ನ್, ಹತ್ತಿ ಬೀಜಗಳ ಜೊತೆಗೆ ಮೀನಿನ ಎಣ್ಣೆ, ದನದ ಟ್ಯಾಲೋ, ತಾಳೆ ಎಣ್ಣೆ ಮತ್ತು ಹಂದಿಯ ಕೊಬ್ಬನ್ನು ಸಹ ಈ ತುಪ್ಪದಲ್ಲಿ ಬಳಸಲಾಗಿದೆ ಎಂದು ವರದಿಯಿಂದ ಸ್ಪಷ್ಟವಾಗಿದೆ. ತಿರುಪತಿ ತಿರುಮಲ ದೇವಸ್ಥಾನಕ್ಕೆ ಗುತ್ತಿಗೆದಾರರು ಪೂರೈಸಿದ ತುಪ್ಪದಲ್ಲಿ ಶೇ.19ರಷ್ಟು ಮಾತ್ರ ತುಪ್ಪ ಇರುವುದು ಪತ್ತೆಯಾಗಿದೆ. ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಜಗನ್ ಮೋಹನ್​ ರೆಡ್ಡಿ ಸರ್ಕಾರವು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಲಾಗಿದೆ.

Breaking News | ತಿರುಪತಿ ಲಡ್ಡುಗೆ ದನದ ಕೊಬ್ಬು, ಮೀನಿನ ಎಣ್ಣೆ ಬಳಸಿದ್ದು ಕನ್ಫರ್ಮ್! ಸಾಕ್ಷ್ಯ ಮುಂದಿಟ್ಟ ಟಿಡಿಪಿ!

ಕಠಿಣ ಕ್ರಮಕ್ಕೆ ಆಗ್ರಹ: ತಿರುಮಲದ ವೆಂಕಟೇಶ್ವರ ಸ್ವಾಮಿ ದೇವಸ್ಥಾನವು ನಮ್ಮ ಅತ್ಯಂತ ಪವಿತ್ರ ದೇವಾಲಯ. ವೈಎಸ್ ಜಗನ್ ಮೋಹನ್ ರೆಡ್ಡಿ ಸರ್ಕಾರವು ತಿರುಪತಿ ಪ್ರಸಾದದಲ್ಲಿ ತುಪ್ಪದ ಬದಲು ಪ್ರಾಣಿ ಕೊಬ್ಬನ್ನು ಬಳಸಿರುವುದನ್ನು ತಿಳಿದು ನನಗೆ ಆಘಾತವಾಗಿದೆ” ಎಂದು ಆಂಧ್ರ ಪ್ರದೇಶ ಐಟಿ ಸಚಿವ ನಾರಾ ಲೋಕೇಶ್ ಹೇಳಿದ್ದಾರೆ.

Breaking News | ತಿರುಪತಿ ಲಡ್ಡುಗೆ ದನದ ಕೊಬ್ಬು, ಮೀನಿನ ಎಣ್ಣೆ ಬಳಸಿದ್ದು ಕನ್ಫರ್ಮ್! ಸಾಕ್ಷ್ಯ ಮುಂದಿಟ್ಟ ಟಿಡಿಪಿ!

ಜಗನ್ ಅವಧಿಯಲ್ಲಿ ನಂದಿನಿ ತುಪ್ಪ ಸ್ಥಗಿತ: ತಿರುಪತಿಗೆ ಪ್ರಮುಖವಾಗಿ ಕರ್ನಾಟಕದಿಂದ ನಂದಿನಿ ತುಪ್ಪ ಸರಬರಾಜು ಮಾಡಲಾಗುತ್ತದೆ. ಆದರೆ 2020-24ರವರೆಗೆ ಟಿಟಿಡಿಯವರು ನಂದಿನಿ ತುಪ್ಪವನ್ನ ಸ್ಥಗಿತ ಮಾಡಿದ್ದರು. ಇಲ್ಲಿ ಹೊಸ ಸರ್ಕಾರ ಬಂದ ಮೇಲೆ ಟ್ರಸ್ಟ್ ನ ಅಧಿಕಾರಿಗಳು ನಂದಿನಿ ತುಪ್ಪವನ್ನು ಹೊರಗಿಟ್ಟು ಬೇರೆ ಬೇರೆ ಬ್ರ್ಯಾಂಡ್​ ತುಪ್ಪವನ್ನ ಖರೀದಿ ಮಾಡಿರುವ ಬಗ್ಗೆ ಕೆಎಮ್‌ಎಫ್ ಒಕ್ಕೂಟದ ಅಧ್ಯಕ್ಷ ಭೀಮಾ ನಾಯ್ಕ್ ಮಾಹಿತಿ ನೀಡಿದ್ದಾರೆ. ಇದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.

Breaking News | ತಿರುಪತಿ ಲಡ್ಡುಗೆ ದನದ ಕೊಬ್ಬು, ಮೀನಿನ ಎಣ್ಣೆ ಬಳಸಿದ್ದು ಕನ್ಫರ್ಮ್! ಸಾಕ್ಷ್ಯ ಮುಂದಿಟ್ಟ ಟಿಡಿಪಿ!

ಸಿಎಂ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್​: ಲಡ್ಡುವಿನಲ್ಲಿ ದನದ ಕೊಬ್ಬನ್ನು ಬೆರೆಸಲಾಗಿದೆ ಎಂದು ಮೈತ್ರಿಕೂಟದ ಶಾಸಕರ ಸಭೆಯಲ್ಲಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಆರೋಪ ಮಾಡಿದ್ದರು. ಈ ಆರೋಪ ಮಾಡಿರುವ ಸಿಎಂ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ ಘೋಷಿಸಿದ್ದಾರೆ. ಸಾಕ್ಷ್ಯಗಳನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದರು. ಇದಾದ ಬೆನ್ನಲ್ಲೇ ಟಿಡಿಪಿ ಸಾಕ್ಷ್ಯಾಧಾರಗಳನ್ನು ಬಹಿರಂಗಪಡಿಸಿರುವುದು ಸಂಚಲನ ಮೂಡಿಸಿದೆ. ಟಿಟಿಡಿ ಇಒ ಆಗಿ ಜವಾಬ್ದಾರಿ ವಹಿಸಿಕೊಂಡ ತಕ್ಷಣ ಹಾಲಿ ಇಒ ಶ್ಯಾಮಲಾ ರಾವ್ ಅವರು ತುಪ್ಪ ಪರೀಕ್ಷೆ ಮಾಡಿಸಿದ್ದಾರೆ.

ತಿರುಮಲದಲ್ಲಿ ತುಂಬಾ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಅಂತಿಮವಾಗಿ, ಆಹಾರದ ಗುಣಮಟ್ಟವೂ ಕಳಪೆಯಾಗಿತ್ತು. ವಾಸ್ತವವಾಗಿ ಸ್ವಾಮಿಯ ಮುಂದೆ ಇಟ್ಟಿದ್ದ ಪ್ರಸಾದವೂ ಅಪವಿತ್ರವಾಗಿತ್ತು. ಲಡ್ಡು ಪ್ರಸಾದ ತಯಾರಿಸಲು ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು. ಇಂದು ನಾವು ಶುದ್ಧ ತುಪ್ಪವನ್ನು ತರಿಸಿದ್ದೇವೆ. ಇದೀಗ ಲಡ್ಡುವಿನ ಗುಣಮಟ್ಟವನ್ನು ಹೆಚ್ಚಿಸುತ್ತೇವೆ. ನಮ್ಮ ರಾಜ್ಯದಲ್ಲಿ ವೆಂಕಟೇಶ್ವರ ಸ್ವಾಮಿ ಇರುವುದು ನಮ್ಮೆಲ್ಲರ ಅದೃಷ್ಟ. ಇಡೀ ಜಗತ್ತು ಸ್ವಾಮಿಯ ದರ್ಶನಕ್ಕಾಗಿ ಬರುತ್ತದೆ. ಹೀಗಿರುವಾಗ ತಿರುಮಲದ ಪಾವಿತ್ರ್ಯತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ,’’ ಎಂದು ಚಂದ್ರಬಾಬು ಹೇಳಿದರು.

ತಡವಾಗಿ ಬಂದಿದ್ದಕ್ಕೆ ಬಾಯಿಗೆ ಬಂದಂತೆ ಬೈದ ಮಹಿಳೆ; ಡೆತ್​ನೋಟ್ ಬರೆದಿಟ್ಟು ಡೆಲಿವೆರಿ ಬಾಯ್​ ಆತ್ಮಹತ್ಯೆಗೆ ಶರಣು!

Share This Article

Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…

ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…