More

    ಬೆಕ್ಕಿನ ಮರಿ ರಕ್ಷಿಸಲು ಮತ್ತೆ ಬಾವಿಗಿಳಿದ ರಜನಿ ಶೆಟ್ಟಿ

    ಮಂಗಳೂರು: ಪುಟ್ಟ ಬೆಕ್ಕೊಂದರ ಜೀವವುಳಿಸುವುದಕ್ಕಾಗಿ ಮಂಗಳೂರಿನ ಪ್ರಾಣಿಪ್ರಿಯ ಮಹಿಳೆ ರಜನಿ ಶೆಟ್ಟಿ ಮತ್ತೆ ಬಾವಿಗಿಳಿದಿದ್ದಾರೆ.
    ಮಂಗಳೂರಿನ ಕಾಸಿಯಾ ಹೈಸ್ಕೂಲ್‌ ಸಮೀಪ ಭಾನುವಾರ ಬೆಳಗ್ಗೆ ಬೆಕ್ಕಿನ ಮರಿಯೊಂದು ಬಾವಿಗೆ ಬಿದ್ದಿತ್ತು. ಬಾವಿಯೊಳಗೆ ಬೆಕ್ಕಿನ ಮರಿ ಕೂಗುವ ಸದ್ದು ಕೇಳಿದ್ದ ಸ್ಥಳೀಯರಾದ ಅತುಲ್‌ ಮತ್ತು ಸಂದೀಪ್‌ ಎಂಬವರು ಮಂಗಳೂರಿನಲ್ಲಿ ಪ್ರಾಣಿಗಳನ್ನು ರಕ್ಷಣೆ ಮಾಡುವ ಹಾಗೂ ಬೀದಿನಾಯಿಗಳನ್ನು ಸಲಹುವ ಮಹಿಳೆ ರಜನಿ ಶೆಟ್ಟಿ ಅವರಿಗೆ ತಿಳಿಸಿದ್ದಾರೆ.
    ತಮ್ಮ ಪತಿ ದಾಮೋದರ್‌ ಶೆಟ್ಟಿ ಅವರೊಂದಿಗೆ ಕೂಡಲೇ ಸ್ಥಳಕ್ಕೆ ತೆರಳಿದ ರಜನಿಶೆಟ್ಟಿ ಹಗ್ಗದ ಮೂಲಕ ಬಾವಿಗೆ ಇಳಿದು ಬೆಕ್ಕಿನ ಮರಿಯನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು.
    ಈ ಹಿಂದೆ ಕಳೆದ ಲಾಕ್‌ಡೌನ್‌ ವೇಳೆ ಬೃಹತ್‌ ಬಾವಿಯೊಂದಕ್ಕೆ ನಾಯಿ ಬಿದ್ದಾಗಲೂ ರಜನಿ ಶೆಟ್ಟಿ ಅದನ್ನು ಮೇಲಕ್ಕೆತ್ತುವ ಮೂಲಕ ಮಾನವೀಯತೆ ಮೆರೆದಿದ್ದರು. ಕಳೆದ ಹಲವು ವರ್ಷಗಳಿಂದ ರಜನಿ ಶೆಟ್ಟಿ ಹಾಗೂ ಅವರ ಕುಟುಂಬದವರು ಪ್ರತಿ ದಿನ ನೂರಾರು ನಾಯಿಗಳಿಗೆ ಅನ್ನ ಆಹಾರ ಹಾಕುತ್ತಾರೆ. ಪ್ರತಿದಿನ ೫೦ಕ್ಕೂ ಹೆಚ್ಚು ಕೆಜಿ ಅನ್ನವನ್ನು ನಾಯಿಗಳಿಗೆ ಉಣಬಡಿಸುವುದಕ್ಕೇ ಬಳಸುತ್ತಾರೆ. ಅಲ್ಲದೆ ವಾಹನಗಳಿಗೆ ಸಿಲುಕಿ ಅಥವಾ ಇನ್ನಾವುದೋ ಕಾರಣದಿಂದ ಗಾಯಗೊಂಡ ನಾಯಿ, ಬೆಕ್ಕು, ಹಕ್ಕಿ ಇತ್ಯಾದಿಗಳನ್ನು ತಮ್ಮ ಮನೆಯಲ್ಲಿ ಜಾಗ ಇಲ್ಲದಿದ್ದರೂ ಕಷ್ಟ ಪಟ್ಟು ಸಲಹುತ್ತಾರೆ. ನಗರದ ಹಲವೆಡೆಗಳಲ್ಲಿ ಪ್ರಾಣಿಗಳ ರಕ್ಷಣೆಗಾಗಿ ಮುನ್ನುಗ್ಗುವ ಮೂಲಕ ರಜನಿ ಶೆಟ್ಟಿ ಹೆಸರಾಗಿದ್ದಾರೆ.

    ಬೆಕ್ಕಿನ ಮರಿ ರಕ್ಷಿಸಲು ಮತ್ತೆ ಬಾವಿಗಿಳಿದ ರಜನಿ ಶೆಟ್ಟಿ
    ಬಾವಿಗಳಿದು ಬೆಕ್ಕಿನ ಮರಿ ಮೇಲೆತ್ತುತ್ತಿರುವುದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts