

ಮಂಗಳೂರು : ಕರಾವಳಿ ಕೊಂಕಣಿ ಸಂಗೀತ ಕ್ಷೇತ್ರದ ಪ್ರಸಿದ್ದ ವಾದ್ಯ ಸಂಗೀತ ಬ್ರಾಸ್ ಬ್ಯಾಂಡ್ನ ಪ್ರಚಾರ ಮತ್ತು ಉತ್ತೇಜನಕ್ಕಾಗಿ ಅಮಿ ಅನಿ ಅಮ್ಚಿಂ ಸಂಘಟನೆಯ ವತಿಯಿಂದ ಬ್ರಾಸ್ ಬ್ಯಾಂಡ್ ಸಂಗೀತ ಸ್ಪರ್ಧೆ ಪೆಪೆರೆ ಪೆಪೆ ಢುಂ ಅ.10ರಂದು ಮಸ್ಕತ್ನ ರುವಿಯ ಅಲ್ -ಲಾಜ್ ಹೊಟೇಲ್ನಲ್ಲಿ ನಡೆಯಲಿದೆ.
ಸ್ಪರ್ಧೆಯಲ್ಲಿ ಮಸ್ಕತ್ ಚಿಂ ನಕ್ತಿರಾಂ, ದಬಕ್ ದಬಾ ಕಲಾಕಾರ್, ಗಾಂವ್ಚಿಂ ಮೊತಿಯಾಂ ಮತ್ತು ತೆನ್ಕಾಂತ್ಲಿಂ ತಾಲೆಂತಾಂ ತಂಡಗಳು
ಭಾಗವಹಿಸಲಿವೆ. ಕೊಂಕಣಿ ಹಾಡುಗಳು, ಬಾಯ್ಲ ನೃತ್ಯ, ಜೈವ್ ನೃತ್ಯ, ಹುಲಿ ನೃತ್ಯ ಮುಂತಾದ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ವಿಜೇತ ತಂಡಕ್ಕೆ 2.30 ಲಕ್ಷ ರೂ, ಉಳಿದ ತಂಡಗಳಿಗೆ 1.15 ಲಕ್ಷ ರೂ. ಮೊತ್ತದ ಪ್ರಶಸ್ತಿ ಲಭಿಸಲಿದೆ. ಸ್ಪರ್ಧೆಗೆ ಸಂಗೀತ ನೀಡುವುದಕ್ಕಾಗಿ ಬೆಳ್ತಂಗಡಿ ತಾಲೂಕಿನ ಬದ್ಯಾರ್ನ ಅರುಣ್ ಸೆರಾವೊ ನೇತೃತ್ವದ 10 ಜನರ ಬ್ರಾಸ್ ಬ್ಯಾಂಡ್ ವಾದಕರ ತಂಡ ಮಸ್ಕತ್ಗೆ ತೆರಳಲಿದೆ ಎಂದು ಅಮಿ ಅನಿ ಅಮ್ಚಿಂ ಸಂಘಟನೆಯ ಅಧ್ಯಕ್ಷ ಡೆನಿಸ್ ಡಿಸಿಲ್ವ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯದರ್ಶಿ ಸಂತೋಷ್ ಡಿಕೊಸ್ತಾ ನೀರುಮಾರ್ಗ, ಸದಸ್ಯರಾದ ಲೊಯ್ಡ್ ರೇಗೊ, ಮೆಲ್ವಿನ್ ಡೆಸಾ ಉಪಸ್ಥಿತರಿದ್ದರು.
..................................