ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮ ಕಲಶೋತ್ಸವ

ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮ ಕಲಶೋತ್ಸವ
Published on

ವಿರಾಜಪೇಟೆ: ಸಮೀಪದ ಚಿಕ್ಕಪೇಟೆಯಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಹಾಗೂ ವಿಶೇಷ ಪೂಜಾ ಸೇವೆಗಳು ಶುಕ್ರವಾರ ಶ್ರದ್ಧಾ ಭಕ್ತಿಯಿಂದ ಜರುಗಿತು.

ಸಂಜೆಯಿಂದಲೇ ಧಾರ್ಮಿಕ ಕಾರ್ಯಗಳು ಆರಂಭಗೊಂಡು ತೋರಣ ಮುಹೂರ್ತ, ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ವಾಸ್ತು ಪೂಜೆ, ಹೋಮ, ಸುದರ್ಶನ ಹೋಮ, ಬಿಂಬ ಶುದ್ದಿ ಮೊದಲಾದ ಧಾರ್ಮಿಕ ಸೇವೆಗಳು ಶಾಸ್ತ್ರೋಕ್ತವಾಗಿ ಜರುಗಿತು.

ಶನಿವಾರ ಗಣಪತಿ ಹೋಮ, ನವಗ್ರಹ ಶಾಂತಿ, ವಾಯು ಸ್ತುತಿ ಹೋಮ, ವಿಷ್ಣು ಹೋಮ, ಪ್ರತಿಷ್ಠಾ ಹೋಮ, ಕಲಶ ಪ್ರತಿಷ್ಠೆ ಪೂಜೆ, ಮಹಾಪೂಜೆ ನೆರವೇರಿತು. ಮಂತ್ರಾಕ್ಷತೆ ಹಾಗೂ ಪ್ರಸಾದ ವಿತರಣೆಯನ್ನು ಮಾಡಲಾಯಿತು.

ಕಲ್ಪಡ ವೇದಮೂರ್ತಿ ಬ್ರಹ್ಮಶ್ರೀ ಸುಬ್ರಮಣ್ಯ ಉಪಾಧ್ಯಾಯರ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ಯು.ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು.

ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಮಾಳೇಟಿರ ಸನ್ನಿ ಕಾರ್ಯಪ್ಪ, ಕಾರ್ಯದರ್ಶಿ ಎಂ.ಎಸ್.ವಿಶ್ವನಾಥ್ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net