Iconic Baggy Green Cap: 10 ನಿಮಿಷಗಳಲ್ಲಿ 2.63 ಕೋಟಿ ರೂ. ಹರಾಜು ಆಯ್ತು ಕ್ರಿಕೆಟ್ ದಿಗ್ಗಜ ಧರಿಸಿದ್ದ ಕ್ಯಾಪ್​​

Bradmans iconic baggy green cap sells for record
Published on

Iconic Baggy Green Cap: 1947-48ರ ಭಾರತ ವಿರುದ್ಧದ ಸರಣಿಯಲ್ಲಿ ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ( Don Bradman) ಡಾನ್ ಬ್ರಾಡ್ಮನ್ ಧರಿಸಿದ್ದ ಪ್ರಸಿದ್ಧ 'ಬ್ಯಾಗಿ ಗ್ರೀನ್' ಟೆಸ್ಟ್ ಕ್ಯಾಪ್ ಹರಾಜಿನಲ್ಲಿ 10 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ $ 479,700 (ರೂ 2.63 ಕೋಟಿ) ಗೆ ಮಾರಾಟವಾಗುವ ಮೂಲಕವಾಗಿ ದಾಖಲೆ ಸೃಷ್ಟಿ ಮಾಡಿದೆ.

ಬ್ರಾಡ್‌ಮನ್ ಅವರು ತಮ್ಮ ವೃತ್ತಿಜೀವನದ ಕೊನೆಯ ಟೆಸ್ಟ್ ಸರಣಿಯಲ್ಲಿ ಧರಿಸಿದ್ದ ಕ್ಯಾಪ್ ಅನ್ನು ಅತ್ಯಂತ ವಿಶೇಷವೆಂದು ಪರಿಗಣಿಸಲಾಗಿದೆ. ಬ್ರಾಡ್‌ಮನ್ ಕೇವಲ ಆರು ಇನ್ನಿಂಗ್ಸ್‌ಗಳಲ್ಲಿ 178.75 ಸರಾಸರಿಯಲ್ಲಿ 715 ರನ್‌ಗಳಿಗೆ ಆಸ್ಟ್ರೇಲಿಯಾವನ್ನು ಮುನ್ನಡೆಸಿದರು. ಇದರಲ್ಲಿ ಮೂರು ಶತಕ ಹಾಗೂ ಒಂದು ದ್ವಿಶತಕವೂ ಸೇರಿದೆ. ಅವರ ಸಾಧನೆ ದಾಖಲೆಗಳಲ್ಲಿ ಮಾತ್ರವಲ್ಲದೆ ಕ್ರಿಕೆಟ್ ಅಭಿಮಾನಿಗಳ ಹೃದಯದಲ್ಲೂ ಅಳಿಸಲಾಗದ ಛಾಪು ಮೂಡಿಸಿತು.

ಈ ವಿಶಿಷ್ಟ ಕ್ಯಾಪ್ ಅನ್ನು ಸ್ವತಃ ಬ್ರಾಡ್‌ಮನ್ ಅವರು ಭಾರತೀಯ ಪ್ರವಾಸ ವ್ಯವಸ್ಥಾಪಕ ಪಂಕಜ್ "ಪೀಟರ್" ಕುಮಾರ್ ಗುಪ್ತಾ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಬೊನ್ಹಾಮ್ಸ್ ಹರಾಜು ಈ ಟೋಪಿಯನ್ನು ಅಪರೂಪದ ಕಲಾಕೃತಿ ಎಂದು ಬಣ್ಣಿಸಿದೆ.

ಬ್ರಾಡ್ಮನ್ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿ ಉಳಿದಿದ್ದಾರೆ. ಬ್ರಾಡ್‌ಮನ್ 52 ಟೆಸ್ಟ್‌ಗಳಲ್ಲಿ 29 ಶತಕಗಳು ಮತ್ತು 13 ಅರ್ಧ ಶತಕಗಳೊಂದಿಗೆ 6996 ರನ್‌ಗಳನ್ನು ಗಳಿಸಿದ್ದಾರೆ, 99.94 ರ ಬ್ಯಾಟಿಂಗ್ ಸರಾಸರಿಯೊಂದಿಗೆ. ಅವರ 12 ದ್ವಿಶತಕ ಮತ್ತು 2 ತ್ರಿಶತಕಗಳು ಇಂದಿಗೂ ವಿಶಿಷ್ಟ ದಾಖಲೆಗಳಾಗಿ ಉಳಿದಿವೆ. "ದಿ ಡಾನ್" ಎಂದು ಕರೆಯಲ್ಪಡುವ ಬ್ರಾಡ್ಮನ್ ಕ್ರಿಕೆಟ್ ಜಗತ್ತಿಗೆ ಕ್ರೀಡಾ ಸ್ಫೂರ್ತಿಯಾಗಿದ್ದರು. ಬ್ರಾಡ್ಮನ್ 2001 ರಲ್ಲಿ 92 ನೇ ವಯಸ್ಸಿನಲ್ಲಿ ನಿಧನರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net