ಸಾವಿನ ಭಯವಿಲ್ಲದೆ ಬೈಕ್ ಮೇಲೆ ಡೇಂಜರಸ್ ಸ್ಟಂಟ್ ಮಾಡಿದ; ದಯವಿಟ್ಟು ಹೀಗೆ ಮಾಡಬೇಡಿ ಎಂದ್ರು ನೆಟ್ಟಿಗರು

stuntswhile
Published on: 

ನವದೆಹಲಿ: ಪ್ರತಿದಿನ, ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಕೆಲವು ವಿಡಿಯೋಗಳು ಮನರಂಜನೆ ಜತೆ ಆಶ್ಚರ್ಯಗೊಳಿಸುತ್ತವೆ. ಇತ್ತೀಚೆಗಷ್ಟೇ ಸ್ಕೂಟರ್‌ನ ಹಿಂಬದಿಯ ಸೀಟಿನಲ್ಲಿ ನಿಂತು ಬಣ್ಣ ಹಚ್ಚುತ್ತಿದ್ದ ಹುಡುಗಿಯ ಅಪಾಯಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಯುವಕನೊಬ್ಬ ಬೈಕ್‌ನಲ್ಲಿ ಅಪಾಯಕಾರಿ ಸ್ಟಂಟ್‌ಗಳನ್ನು ಮಾಡಿದ್ದು,ನೆಟ್ಟಿಗರ ಕೆಂಗಣ್ಣೀಗೆ ಗುರಿಯಾಗಿದೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬೈಕ್ ಸೀಟ್ ಮೇಲೆ ನಿಂತು ಬೈಕ್ ಚಲಾಯಿಸುತ್ತಿರುವುದು ಕಂಡು ಬಂದಿದೆ. ಇವರು ಬೈಕ್ ಓಡಿಸುವ ರಸ್ತೆಯಲ್ಲಿ ಅತ್ತ ಕಡೆಯಿಂದ ಹಲವು ವಾಹನಗಳು ಬರುತ್ತಿರುವುದು ಕಂಡು ಬರುತ್ತಿದೆ. ಒಬ್ಬ ವ್ಯಕ್ತಿಯ  ಸ್ವಲ್ಪವೂ ಬ್ಯಾಲೆನ್ಸ್​ ತಪ್ಪದೆ ಬೈಕ್​ ಸವಾರಿ ಮಾಡುತ್ತಾನೆ.

ಈ ವೀಡಿಯೊವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಳ್ಳುವಾಗ, ಖಾತೆಯ ಬಳಕೆದಾರರು, 'ಯಮರಾಜ ಈಗ ನಿದ್ರಿಸುತ್ತಿದ್ದಾನೆ, ಆದ್ದರಿಂದ ಅವರನ್ನು ಉಳಿಸಲಾಗಿದೆ' ಎಂಬ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಈ ಸುದ್ದಿ ಬರೆಯುವವರೆಗೂ 1 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಿಸಿದ್ದಾರೆ. ವೀಡಿಯೊವನ್ನು ವೀಕ್ಷಿಸಿದ ನೆಟ್ಟಿಗರು ಯಮರಾಜ ಪ್ರಸ್ತುತ ಹೋಳಿ ರಜೆಯಲ್ಲಿದ್ದಾರೆ ಎಂದು ಕಾಮೆಂಟ್​​ ಮಾಡಿದ್ದಾರೆ.

ಕೆಲವು ಜನರು ಅಪಾಯಕಾರಿ ಸಾಹಸಗಳನ್ನು ಮಾಡಿದರೆ ಪ್ರೇಕ್ಷಕರು ಅವರನ್ನು ಕೂಲ್ ಮತ್ತು ಧೈರ್ಯಶಾಲಿ ಎಂದು ಪರಿಗಣಿಸುತ್ತಾರೆ ಎಂದು ಭಾವಿಸಲು ಪ್ರಾರಂಭಿಸಿದ್ದಾರೆ. ಇಂತಹ ಆಲೋಚನೆಯಿಂದಾಗಿ, ಅನೇಕ ಜನರು ಅಪಾಯಕಾರಿ ಸಾಹಸಗಳನ್ನು ಮಾಡುವ ವೀಡಿಯೊಗಳನ್ನು ಮಾಡುತ್ತಾರೆ ಮತ್ತು ಅವರ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ.