ಮೈದಾನದಲ್ಲಿ ಆಡುವಾಗ 400 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಬಾಲಕ: ಬದುಕಿ ಬರಲೆಂದು ಜನರ ಪ್ರಾರ್ಥನೆ

Boy Borewell
Published on

ಬೆತುಲ್​: ಮೈದಾನದಲ್ಲಿ ಆಟವಾಡುತ್ತಿದ್ದ 8 ವರ್ಷದ ಬಾಲಕ ಆಕಸ್ಮಿಕವಾಗಿ 400 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿರುವ ಆತಂಕಕಾರಿ ಘಟನೆ ಮಧ್ಯ ಪ್ರದೇಶದ ಬೆತುಲ್​ ಜಿಲ್ಲೆಯ ಮಾಂಡವಿ ಗ್ರಾಮದಲ್ಲಿ ನಡೆದಿದೆ.

ಮಂಗಳವಾರ ಸಂಜೆ 5 ಗಂಟೆಗೆ ಅವಘಡ ಸಂಭವಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಬಾಲಕನ ಹೆಸರು ತನ್ಮಯ್​ ದಿಯಾವಾರ್​. ಗ್ರಾಮದ ಮೈದಾನದಲ್ಲಿ ಆಡುತ್ತಿದ್ದ ತನ್ಮಯ್​, ಇತ್ತೀಚೆಗಷ್ಟೇ ಅಗೆದಿದ್ದ ಕೊಳವೆ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದಾನೆ ಎಂದು ಆಥನರ್​ ಪೊಲೀಸ್​ ಠಾಣೆಯ ಅಧಿಕಾರಿ ಅನೊಲ್​ ಸೋನಿ ತಿಳಿಸಿದ್ದಾರೆ.

ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಕೊಳವೆ ಬಾವಿಯ ಸುತ್ತ ಮತ್ತ ಏರಿಯಾವನ್ನು ಅಗೆಯಲು ಅರ್ಥ್​ಮೂವಿಂಗ್​ ಯಂತ್ರವನ್ನು ತರಿಸಲಾಗಿದೆ. ಬಾಲಕನಿಗೆ ಆಕ್ಸಿಜನ್​ ಒದಗಿಸಲು ವ್ಯವಸ್ಥೆಯನ್ನು ಸಹ ಮಾಡಲಾಗಿದೆ.

ಕೊಳವೆ ಬಾವಿಯ ಸುಮಾರು 60 ಅಡಿ ಆಳದಲ್ಲಿ ಬಾಲಕ ಸಿಲುಕಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಬಾಲಕ ಬದುಕಿ ಬರಲೆಂದು ಮಧ್ಯ ಪ್ರದೇಶದ ಜನರು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net