ICC 2024ರ ಟೆಸ್ಟ್​ ಕ್ರಿಕೆಟ್​​ ಪ್ರಶಸ್ತಿಗೆ ಬೌಲರ್​ ಜಸ್ಪ್ರೀತ್​ ಬುಮ್ರಾ ಭಾಜನ | Test Cricketer of the Year

dk (16) (1)
Published on

ಟೀಮ್​ ಇಂಡಿಯಾ ಬೌಲರ್​ ಜಸ್ಪ್ರೀತ್​ ಬುಮ್ರಾರನ್ನು ಐಸಿಸಿ 2024ರ ವರ್ಷದ ಟೆಸ್ಟ್​ ಕ್ರಿಕೆಟ್​​ ಪ್ರಶಸ್ತಿ ವಿಜೇತರನ್ನಾಗಿ ಹೆಸರಿಸಿದೆ.

2024 ರಲ್ಲಿ 13 ಪಂದ್ಯಗಳಲ್ಲಿ 14.92 ಸರಾಸರಿಯಲ್ಲಿ 357 ಓವರ್‌ಗಳನ್ನು ಬೌಲಿಂಗ್ ಮಾಡಿ 71 ವಿಕೆಟ್‌ಗಳನ್ನು ಬುಮ್ರಾ ಕಬಳಿಸಿದ್ದಾರೆ. ಇನ್ನು ಬುಮ್ರಾ 71 ವಿಕೆಟ್‌ಗಳನ್ನು ಪಡೆಯುವ ಮೂಲಕ ರವಿಚಂದ್ರನ್ ಅಶ್ವಿನ್, ಅನಿಲ್ ಕುಂಬ್ಳೆ ಮತ್ತು ಕಪಿಲ್ ದೇವ್ ನಂತರ 2024ರಲ್ಲಿ 70 ಕ್ಕೂ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದ ಭಾರತದ ನಾಲ್ಕನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಶ್ರೀಲಂಕಾದ ಮೆಂಡಿಸ್ ಮತ್ತು ಇಂಗ್ಲೆಂಡ್ ಬ್ಯಾಟಿಂಗ್ ಜೋಡಿ ಹ್ಯಾರಿ ಬ್ರೂಕ್ ಮತ್ತು ಜೋ ರೂಟ್ ಅವರ ಸ್ಪರ್ಧೆಯನ್ನು ಹಿಂದಿಕ್ಕಿ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದಿದ್ದಾರೆ.

200 ವಿಕೆಟ್​​ ಪಡೆದ 12ನೇ ಭಾರತೀಯ

ಕಳೆದ 2024ರ ಆರಂಭದ ವರ್ಷದಲ್ಲಿ ದಕ್ಷಿಣ ಆಫ್ರಿಕಾದ ಕೆಪ್​ಟೌನ್​ನಲ್ಲಿ ಎಂಟು ವಿಕೆಟ್​ಗಳನ್ನು ಪಡೆಯುವ ಮೂಲಕ ಪಂದ್ಯ ಗೆಲುವು ಕಂಡಿತ್ತು. ಬಳಿಕ ಇಂಗ್ಲೆಂಡ್​ ವಿರುದ್ಧ 19 ವಿಕೆಟ್​ ಕಬಳಿಸಿ ತಮ್ಮ ಅವಿಸ್ಮರಣೀಯ ಆಟವನ್ನು ಆಡಿ ಪಂದ್ಯ 4-0 ಅಂತರದಲ್ಲಿ ಭರ್ಜರಿ ಗೆಲುವು ಕಂಡಿತ್ತು. ಈ ವರ್ಷದ (2025) ಆಸ್ಟ್ರೇಲಿಯಾದಲ್ಲಿ ನಡೆದ ಸರಣಿಯಲ್ಲಿ ಬುಮ್ರಾ ಅವರು 200 ಟೆಸ್ಟ್ ವಿಕೆಟ್‌ಗಳ ಮೈಲಿಗಲ್ಲು ದಾಟಿದ 12 ನೇ ಭಾರತೀಯ ಬೌಲರ್ ಎನಿಸಿಕೊಡಿದ್ದಾರೆ.

2025ರ ಬಾರ್ಡರ್​- ಗವಾಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯ ಆಸ್ಟ್ರೇಲಿಯಾ ವಿರುದ್ಧ ಬುಮ್ರಾ ಭಾರತವನ್ನು ಫೈನಲ್​ಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ, ಬ್ಯಾಟಿಂಗ್​​ ವೈಫಲ್ಯದಿಂದ ಪಂದ್ಯ ಸೋಲಬೇಕಾಯಿತು. (ಏಜೆನ್ಸೀಸ್​)​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net