ಸರ್ಕಾರಿ ಶಾಲೆಗಳ ನಿರ್ಲಕ್ಷ ಮಾಡದಿರಿ: ಪುಸ್ತಕ ವಿತರಿಸಿ ಪುರುಷೋತ್ತಮ ರೈ ಸಲಹೆ

book
Published on

ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ

ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಗಳಲ್ಲಿ ಬಡವರ ಮಕ್ಕಳೇ ಕಲಿಯುತ್ತಿದ್ದು, ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಕಲಿತ ಅದೆಷ್ಟೋ ಮಂದಿ ದೊಡ್ಡ ಮಟ್ಟದ ಸಾಧನೆ ಮಾಡಿದ್ದಾರೆ. ಸರ್ಕಾರಿ ಶಾಲೆಗಳನ್ನು ನಿರ್ಲಕ್ಷೃ ಮಾಡಬಾರದು ಎಂದು ಆರ್ಯಾಪು ಗ್ರಾಪಂ ಸದಸ್ಯ ಬೂಡಿಯಾರು ಪುರುಷೋತ್ತಮ ರೈ ಹೇಳಿದರು.

ಸಹೋದರ ದಿ.ಮಾಧವ ರೈ ಅವರ 50ನೇ ಪುಣ್ಯಸ್ಮರಣೆ ಸ್ಮರಣಾರ್ಥ ಕುರಿಯ ಗ್ರಾಮದ ಇಡ್ಕೊಟ್ಟು ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಅದ್ರಾಮ ಶುಭಹಾರೈಸಿದರು. ಆರ್ಯಾಪು ಗ್ರಾಪಂ ಸದಸ್ಯೆಯರಾದ ರಕ್ಷಿತಾ, ರೇವತಿ, ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸುರೇಶ್ ಇಡಬೆಟ್ಟು, ಎಸ್‌ಡಿಎಂಸಿ ಸದಸ್ಯರಾದ ಕುಸುಮಾ, ಸುಂದರಿ, ಲಕ್ಷ್ಮಣ, ಕುಶಾಲ, ಪಾಲಕರಾದ ಹರಿಣಾಕ್ಷಿ, ಶ್ರೀಪತಿ ಹೆಬ್ಬಾರ್, ಅಬೀಬಾ, ಕೈರುನ್ನಿಸಾ, ಇಬ್ರಾಹಿಂ ಅಮ್ಮುಂಜ, ಗೋಪಾಲ ಅಮ್ಮುಂಜ, ಸುಂದರಿ ಅಮ್ಮುಂಜ, ಪತ್ರಕರ್ತ ಯೂಸುಫ್ ರೆಂಜಲಾಡಿ ಮತ್ತಿತರರು ಉಪಸ್ಥಿತರಿದ್ದರು.

ಪ್ರೇಮಾ ಸ್ವಾಗತಿಸಿದರು. ಆಶಾ ವಂದಿಸಿದರು. ದೇವಪ್ಪ ಕಾರ್ಯಕ್ರಮ ನಿರೂಪಿಸಿದರು. ಸಂಧ್ಯಾ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net