ತುಳು ಮೂಲಜನಾಂಗದಲ್ಲಿತ್ತು ಸತ್ಯ, ಧರ್ಮ -  ಎವಿಜಿ ಆಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ ಅನಿಸಿಕೆ

PTR_30 MAY_5
Published on

ಪುತ್ತೂರು: ತುಳು ಮೂಲಜನಾಂಗದಲ್ಲಿ ಸತ್ಯ, ಧರ್ಮ ಮತ್ತು ನಿಷ್ಠೆಯಿದ್ದು, ಸದ್ಯ ನಡೆಯುತ್ತಿರುವ ಅತ್ಯಾಚಾರ, ಕೊಲೆ, ಹಿಂಸೆಗಳು ತುಳು ಸಂಸ್ಕೃತಿಯಲ್ಲ ಎಂದು ಎವಿಜಿ ಆಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ ಹೇಳಿದರು.

ಪುತ್ತೂರು ಪತ್ರಿಕಾ ಭವನದಲ್ಲಿ ಸಿರಿಗಂಗೆ ಪ್ರಕಾಶ ತುಳುನಾಡು ವತಿಯಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸಹಕಾರದಲ್ಲಿ ಶ್ರೀಶಾವಾಸವಿ ತುಳುನಾಡ್(ವಿದ್ಯಾಶ್ರೀ) ಬರೆದ ‘ಗೇನೊದ ಬುಲೆ’ ತುಳು ಬರವುದ ಮುಡಿ ಲೇಖನ ಮಾಲೆ ಬಿಡುಗಡೆಗೊಳಿಸಿ ಮಾತನಾಡಿದರು.

‘ಹರನೂರ ದಾರಿ’ ಶಿವ ದೇವೆರೆ ಪದೊತ್ತ ಲಿರಿಕಲ್ ವಿಡಿಯೋವನ್ನು ನಿವೃತ್ತ ಶಿಕ್ಷಕಿ ಶಂಕರಿ ಪಟ್ಟೆ ಬಿಡುಗಡೆಗೊಳಿಸಿ, ಹಿಂದೆ ಶಾಲೆಗಳಲ್ಲಿ ತುಳು ಮಾತನಾಡುವುದು ತಪ್ಪಾಗುತ್ತಿತ್ತು. ಈಗ ಶಾಲೆಗಳಲ್ಲಿ ತುಳು ಪಠ್ಯ ವ್ಯವಸ್ಥೆ ಆರಂಭಗೊಂಡಿದ್ದು, ಇದು ತುಳು ಭಾಷಾ ಬೆಳವಣಿಗೆಗೆ ಪೂರಕವಾಗಿದೆ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕ ಅಧ್ಯಕ್ಷ ಸಿದ್ದೀಕ್ ನಿರಾಜೆ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತ ವಿಲ್ರೆಡ್ ಡಿಸೋಜ ಮಾತನಾಡಿದರು. ಪತ್ರಕರ್ತ ವಿಜಯಕುಮಾರ್ ಹೆಬ್ಬಾರಬೈಲು ಕೃತಿ ಪರಿಚಯ ಮಾಡಿದರು. ವಕೀಲೆ ಹರೀಣಾಕ್ಷಿ ಜೆ. ಶೆಟ್ಟಿ ಕೃತಿಕಾರರ ಪರಿಚಯ ಮಾಡಿದರು. ಶ್ರೀವಿದ್ಯಾ ಅನುಭವ ಹಂಚಿಕೊಂಡರು. ಸುಧಾಕರ ಸುವರ್ಣ ತಿಂಗಳಾಡಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net