ದಾಖಲೆ ಬರೆದ ಧುರಂಧರ್; ರಣವೀರ್ ಸಿಂಗ್ ತಂಡಕ್ಕೆ ಶಹಬ್ಬಾಸ್ ಎಂದ ಯಶ್ ರಾಜ್ ಫಿಲ್ಮ್ಸ್! Dhurandhar

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಧುರಂಧರ್ ಚಿತ್ರವು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾ
  • YRF ತನ್ನ ಸೋಶಿಯಲ್​ ಮೀಡಿಯಾದಲ್ಲಿ ನಿರ್ದೇಶಕ ಆದಿತ್ಯ ಧರ್ ಮತ್ತು ಸಿನಿಮಾ ತಂಡವನ್ನು ಅಭಿನಂದಿಸಿದೆ
  • YRF ಪೋಸ್ಟ್​ಗೆ ಚಿತ್ರದ ನಾಯಕ ರಣವೀರ್ ಸಿಂಗ್ ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ
  • ಈ ಚಿತ್ರವು ದೊಡ್ಡ ಪರದೆಯ ಮೇಲೆ ಸದ್ದು ಮಾಡಲು ನೀವುಗಳೇ ಕಾರಣ ಎಂದ YRF
Dhurandhar: ಆದಿತ್ಯ ಧರ್ ನಿರ್ದೇಶನದ ಧುರಂಧರ್ ಚಿತ್ರವು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಏಕ ಭಾಷೆಯ ಭಾರತೀಯ ಚಿತ್ರವಾಗಿ ಹೊರಹೊಮ್ಮಿದ ನಂತರ, ಯಶ್ ರಾಜ್ ಫಿಲ್ಮ್ಸ್ (YRF) ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ನಿರ್ದೇಶಕ ಆದಿತ್ಯ ಧರ್ ಮತ್ತು ಸಿನಿಮಾ ತಂಡವನ್ನು ಅಭಿನಂದಿಸಿದೆ. ಇದಕ್ಕೆ ಚಿತ್ರದ ನಾಯಕ ರಣವೀರ್ ಸಿಂಗ್ ಭಾವುಕವಾಗಿ ಪ್ರತಿಕ್ರಿಯಿಸಿದ್ದಾರೆ.

ಧುರಂಧರ ತಂಡವನ್ನು ಶ್ಲಾಘಿಸಿದ YRF 

ಆದಿತ್ಯ ಚೋಪ್ರಾ ಅವರ ಯಶ್ ರಾಜ್ ಫಿಲ್ಮ್ಸ್ ಧುರಂಧರ್​ ತಂಡವನ್ನು ಶ್ಲಾಘಿಸಿ, ಮುಕ್ತ ಟಿಪ್ಪಣಿಯೊಂದನ್ನು ಪೋಸ್ಟ್ ಮಾಡಿದೆ. ಆ ಟಿಪ್ಪಣಿಯಲ್ಲಿ ಧುರಂಧರ್ ಒಂದು ಚಿತ್ರವಲ್ಲ... ಇದು ಭಾರತೀಯ ಚಿತ್ರರಂಗದಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವ ಒಂದು ಮೈಲಿಗಲ್ಲು ಎಂದು ಬರೆದಿದೆ. 
ಆದಾಗ್ಯೂ, ಸಾರ್ವಕಾಲಿಕ ದಾಖಲೆಗಳನ್ನು ಮುರಿದು ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರ ಎನಿಸಿಕೊಂಡಿದ್ದಕ್ಕಾಗಿ ಧುರಂಧರ್ ಮತ್ತು ಜಿಯೋ ಸ್ಟುಡಿಯೋಸ್‌ಗೆ ಅಭಿನಂದನೆಗಳು ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಿದೆ.
ಈ ಅದ್ಭುತ ಚಿತ್ರದಲ್ಲಿ ಕಾರ್ಯ ನಿರ್ವಹಿಸಿದ ನಟರು ಹಾಗೂ ತಂತ್ರಜ್ಞರು ತಮ್ಮ ಶ್ರಮವನ್ನು ಸಿನಿಮಾಕ್ಕೆ ನೀಡಿದ್ದಕ್ಕಾಗಿ ನಾವು ಅಭಿನಂದಿಸುತ್ತಿದ್ದೇವೆ. ಈ ಚಿತ್ರವು ದೊಡ್ಡ ಪರದೆಯ ಮೇಲೆ ಸದ್ದು ಮಾಡಲು ನೀವುಗಳೇ ಕಾರಣ. ಆದಾಗ್ಯೂ, ಸೃಜನಶೀಲ ಶ್ರೇಷ್ಠತೆಯ ಅನ್ವೇಷಣೆಯಲ್ಲಿ ಮುಂದುವರಿಯಲು ನಮಗೆ ಸ್ಪೂರ್ತಿ ನೀಡಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು ಎಂದು ಸಂಸ್ಥೆಯು ಧುರಂಧರ್ ಚಿತ್ರದ ಪಾತ್ರವರ್ಗ ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದೆ. 

YRF ಪೋಸ್ಟ್‌ಗೆ ಪ್ರತಿಕ್ರಿಯಿಸಿದ ರಣವೀರ್ ಸಿಂಗ್ 

YRF ನ ಪೋಸ್ಟ್‌ಗೆ ರಣವೀರ್ ಸಿಂಗ್ ಪ್ರತಿಕ್ರಿಯಿಸಿದ್ದು, ನನ್ನ ಪ್ರೀತಿಯ ಅಲ್ಮಾ ಮೇಟರ್... ನಿನ್ನನ್ನು ಎಂದಿಗೂ ಹೆಮ್ಮೆಪಡಿಸಲು ಮಾತ್ರ ಬಯಸಿದ್ದೆ ಎಂದು ಬರೆದಿದ್ದಾರೆ.

YRF ನ ಮುಂದಿನ ನಡೆ ಏನು?

ಯಶ್ ರಾಜ್ ಫಿಲ್ಮ್ಸ್, ಭಾರತೀಯ ಚಿತ್ರರಂಗದ ಅತಿದೊಡ್ಡ ಪ್ರೊಡಕ್ಷನ್ ಹೌಸ್ ಆಗಿದ್ದು, 'ಧುರಂಧರ್' ಯಶಸ್ಸಿನ ನಂತರ ತನ್ನ ಮುಂದಿನ ಯೋಜನೆಗಳ ಬಗ್ಗೆ ಭಾರಿ ನಿರೀಕ್ಷೆ ಮೂಡಿಸಿದೆ. ಮುಖ್ಯವಾಗಿ ತನ್ನದೇ ಆದ 'ಸ್ಪೈ ಯೂನಿವರ್ಸ್'  ಅನ್ನು ವಿಸ್ತರಿಸಲು ಮತ್ತು ದೊಡ್ಡ ಮಟ್ಟದ ಸಾಹಸ ಚಿತ್ರಗಳನ್ನು ನೀಡಲು YRF ಸಜ್ಜಾಗಿದೆ.
YRF ಕೇವಲ ಚಿತ್ರಮಂದಿರಗಳಿಗೆ ಸೀಮಿತವಾಗಿದ್ದು,  OTT ಪ್ಲಾಟ್‌ಫಾರ್ಮ್‌ಗಳಿಗಾಗಿಯೇ ವಿಶೇಷ ವೆಬ್ ಸರಣಿಗಳನ್ನು ನಿರ್ಮಿಸುತ್ತಿದೆ. 'ದಿ ರೈಲ್ವೇ ಮೆನ್' ಯಶಸ್ಸಿನ ನಂತರ, ನೈಜ ಘಟನೆಗಳ ಆಧಾರಿತ ಇನ್ನೂ ಕೆಲವು ಸರಣಿಗಳು ಸಿದ್ಧವಾಗುತ್ತಿವೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net