'ಧುರಂಧರ್ 2' ನೋಡಿ 1200 ರೂ. ಉಳಿಸಿದ ಯುವಕ! ಈತ ಮಾಡಿದ್ದೇನು ಅಂತ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ

ಪೋಸ್ಟ್​ ಹಂಚಿಕೊಂಡ ಯುವಕ
ಪೋಸ್ಟ್​ ಹಂಚಿಕೊಂಡ ಯುವಕ
Published on

ಪ್ರಮುಖ ಮುಖ್ಯಾಂಶಗಳು

  • ಟಾಕ್​ ಆಫ್​ ದಿ ಟೌನ್​ ಆದ 'ಧುರಂಧರ್ 2'
  • ಒಂದಲ್ಲ ಒಂದು ರೀತಿ ಜಾಲತಾಣಗಳಲ್ಲಿ ಸದ್ದು
  • ಯುವಕನೊಬ್ಬನ ಪೋಸ್ಟ್​ ಸಿಕ್ಕಾಪಟ್ಟೆ ವೈರಲ್
Viral Post: ಪ್ರಸ್ತುತ, ಟಾಕ್​ ಆಫ್​ ದಿ ಟೌನ್​ ಆಗಿರುವ ರಣವೀರ್ ಸಿಂಗ್ ಅಭಿನಯದ ಹಾಗೂ ಆದಿತ್ಯ ಧರ್ ನಿರ್ದೇಶನದ 'ಧುರಂಧರ್ 2' (Dhurandhar 2) ಸಿನಿಮಾ, ಬಾಲಿವುಡ್​ನಿಂದ ಸೌತ್​ ಸ್ಟಾರ್​ಗಳ ಮೆಚ್ಚುಗೆ, ಪ್ರಶಂಸೆಗೆ ಪಾತ್ರವಾಗಿದೆ. ಈಗಾಗಲೇ ಹಲವು ದಾಖಲೆಗಳನ್ನು ಉಡೀಸ್ ಮಾಡಿ, ಮುನ್ನುಗ್ಗುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಒಂದಲ್ಲ ಒಂದು ರೀತಿ ಸದ್ದು ಮಾಡುತ್ತಿದೆ.
ಪ್ರವಾಸಕ್ಕೆಂದು ಹೋದ ಯುವಕನೊಬ್ಬ ಸಿನಿಮಾ ಕುರಿತಂತೆ ಹಂಚಿಕೊಂಡ ಅನುಭವ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಹುಬ್ಬೇರಿಸಿದೆ. ದೇವರ ದರ್ಶನ ಪಡೆಯಲು ಜಮ್ಮ-ಕಾಶ್ಮೀಕರಕ್ಕೆ ಹೋದ ಯುವಕ, ದೇಗುಲ ಬಂದ್ ಆಗಿದೆ ಎಂದು ಹೋಗಿದ್ದು 'ದುರಂಧರ್ 2' ಸಿನಿಮಾ. ಈ ಸಣ್ಣ ಗ್ಯಾಪ್​ನಲ್ಲಿ ಆತ ಉಳಿಸಿದ್ದು 1200 ರೂ.! ಅದು ಹೇಗಪ್ಪಾ? ಎಂಬ ಅನೇಕರ ಪ್ರಶ್ನೆಗೆ ಹೀಗಿದೆ ಆತನ ಉತ್ತರ. 
ಸಾಮಾಜಿಕ ಜಾಲತಾಣದಲ್ಲಿ ತನ್ನ ಅನುಭವ ಹಂಚಿಕೊಂಡ ವ್ಯಕ್ತಿ ಮಾಧವ್​ ಯು.ಎಸ್​, ಜಮ್ಮು-ಕಾಶ್ಮೀರದ ಮಾತಾ ವೈಷ್ಣೋದೇವಿ ದೇವಸ್ಥಾನಕ್ಕೆ ತೆರಳಿದ್ದು ತಡರಾತ್ರಿ. ಹೀಗಾಗಿ, ದೇಗುಲ ಅದಾಗಲೇ ಬಂದ್​ ಆಗಿತ್ತು. ಮುಂದೇನು ಮಾಡೋದು ಎಂದು ಅತ್ತ-ಇತ್ತ ಕಣ್ಣಾಯಿಸಿದ ಯುವಕ, 4-5 ಗಂಟೆ ಕಳೆಯಲು ರೂಮ್​ ಬುಕ್​ ಮಾಡಲು ತಡಕಾಡಿದ. ಒಂದು ರಾತ್ರಿ ಉಳಿಯಲು ಬಾಡಿಗೆ​ 1,500 ರೂ. ತೋರಿಸಿದ ಕೂಡಲೇ ಈತನ ತಲೆಗೆ ಬಂದಿದ್ದು 'ಧುರಂಧರ್ 2​'. 
ರಣವೀರ್​ ಸಿಂಗ್ ಚಿತ್ರ ನೋಡಲು 300 ರೂ. ಕೊಟ್ಟು ಚಿತ್ರಮಂದಿರಕ್ಕೆ ಹೋದ ಮಾಧವ್​, ಸಿನಿಮಾ ಮುಗಿಯುತ್ತಿದ್ದಂತೆ 3 ಗಂಟೆಗೆ ದೇವರ ದರ್ಶನ ಪಡೆಯಲು ಕ್ಯೂನಲ್ಲಿ ನಿಂತಿದ್ದ. ಬರೋಬ್ಬರಿ 3 ಗಂಟೆ 49 ನಿಮಿಷಗಳಿರುವ ಧುರಂಧರ್​ ಸಿನಿಮಾ, ಈತನ 1200 ರೂ. ಉಳಿಸಿದ್ದೇ ರೋಚಕ. ಯುವಕನ ಪೋಸ್ಟ್​ ಸದ್ಯ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net