ವಿಶ್ವ ಸುಂದರಿಗೂ ಅನ್ವಯಿಸುತ್ತೆ ಈ ರೂಲ್ಸ್! ಅಭಿಷೇಕ್ ಜೊತೆಗಿನ ಜಗಳದ ಬಗ್ಗೆ ಐಶ್ವರ್ಯಾ ಹೇಳಿದ್ದೇನು? Aishwarya Rai

ಚಿತ್ರ Instagram
ಚಿತ್ರ Instagram
Published on
Aishwarya Rai: ಬಾಲಿವುಡ್‌ನ ಅತ್ಯಂತ ಸುಂದರ ಮತ್ತು ಜನಪ್ರಿಯ ಜೋಡಿಗಳಲ್ಲಿ ಒಬ್ಬರಾದ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಇಂದು ತಮ್ಮ 19ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಏಪ್ರಿಲ್​ 20, 2007 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ ಕಳೆದ ಎರಡು ದಶಕಗಳಿಂದ ಪವರ್ ಕಪಲ್​ ಎಂದೇ ಕರೆಸಿಕೊಂಡಿದ್ದಾರೆ.
ಆದಾಗ್ಯೂ, ಈ ಹಿಂದೆ ದಿ ಕಪಿಲ್ ಶರ್ಮಾ ಶೋನಲ್ಲಿ ಅಭಿಷೇಕ್ ಮತ್ತು ಐಶ್ವರ್ಯ ಕಾಣಿಸಿಕೊಂಡಿದ್ದು, ​ ತಮ್ಮ ಮದುವೆಯ ಬಗ್ಗೆ ಅನಿರೀಕ್ಷಿತ ವಿವರಗಳನ್ನು ಹಂಚಿಕೊಂಡಿದ್ದಾರೆ.
ಕಾರ್ಯಕ್ರಮದ ಮಧ್ಯೆ ನಿರೂಪಕ ಕಪಿಲ್ ಶರ್ಮಾ ನೀವಿಬ್ಬರು ಎಂದಾದರೂ ಜಗಳವಾಡುತ್ತೀರಾ ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜೋಡಿ ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ಸಾಮಾನ್ಯ. ಆದರೆ, ಜಗಳ ಯಾರೇ ಮಾಡಲಿ ಅಭಿಷೇಕ್​ ಮೊದಲು ಕ್ಷಮೆ ಕೇಳಬೇಕು ಎಂದು ಹೇಳಿದಾಗ ಅದು ಹಾಸ್ಯಮಯವಾಗಿ ತಿರುವು ಪಡೆದುಕೊಂಡಿತು.
ಏತನ್ಮಧ್ಯೆ ಐಶ್ವರ್ಯಾ ಮಾತನಾಡಿ, ಕೆಲವೊಮ್ಮೆ ನಾನು ಮೊದಲು ಕ್ಷಮೆಯಾಚಿಸುತ್ತೇನೆ ಆದರೆ, ಬೇಗನೆ ಕ್ಷಮಿಸಿ ಜಗಳವನ್ನು ಕೊನೆಗೊಳ್ಳುತ್ತೇನೆ ಎಂದು ಹೇಳಿದರು. ಈ ವೇಳೆ ಕಪಿಲ್​ ತಮಾಷೆಯಾಗಿ ಪ್ರತಿಕ್ರಿಯಿಸಿದ್ದು, ಕ್ಷಮಿಸಿ? ಇಷ್ಟು ಸುಂದರವಾಗಿರುವ ಪತ್ನಿ ಮೊದಲು ಕ್ಷಮಿಸಿ ಎಂದು ಕೇಳುತ್ತಾರಾ? ಎಂದು ಹೇಳಿದರು.

ಐಶ್ವರ್ಯಾ ವೃತ್ತಿ ಜೀವನ ತ್ಯಾಗ ಮಾಡೋದು ಇಷ್ಟವಿಲ್ಲ

ಈ ಹಿಂದೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಭಿಷೇಕ್​ ನನ್ನ ಯಶಸ್ಸಿಗಾಗಿ ನನ್ನ ಹೆಂಡತಿಗೆ ಕೆಲಸ ಮಾಡಬೇಡ ಎಂದು ಯಾವತ್ತೂ ಹೇಳಿಲ್ಲ. ಅದೃಷ್ಟವಶಾತ್​ ಐಶ್ವರ್ಯಾಳಿಗೂ ಈ ಮನಸ್ಥಿತಿ ಇಲ್ಲ ಎಂದು ಹೇಳಿದ್ದರು.

ಅಭಿಷೇಕ್ ಮತ್ತು ಐಶ್ವರ್ಯಾ ಬಗ್ಗೆ

ಅಭಿಷೇಕ್ ಮತ್ತು ಐಶ್ವರ್ಯಾ 2000ರ ದಶಕದಲ್ಲಿ ಭೇಟಿಯಾದರು. ನಂತರ ಇವರಿಬ್ಬರ ಸ್ನೇಹ ಪ್ರೀತಿಯಾಗಿ ತಿರುಗಿತು. 2007 ರಲ್ಲಿ ವಿವಾಹವಾದರು. ಈ ದಂಪತಿಗೆ ಆರಾಧ್ಯ ಬಚ್ಚನ್ ಎಂಬ ಮುದ್ದಾದ ಮಗಳಿದ್ದಾಳೆ.
ಅಭಿಷೇಕ್ ಬಚ್ಚನ್ ಕಳೆದ ಕೆಲವು ವರ್ಷಗಳಿಂದ ಡಿಜಿಟಲ್ ಪ್ಲಾಟ್‌ಫಾರ್ಮ್ ಮತ್ತು ಸಿನಿಮಾಗಳಲ್ಲಿ ಸವಾಲಿನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದಾಗ್ಯೂ, ಇವರು ಕಿಂಗ್​ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಜೊತೆಗೆ ಹೌಸ್‌ಫುಲ್ 5 ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net