ಅವಳು ಓದಿದ್ದನ್ನೆಲ್ಲಾ ನಂಬುವುದಿಲ್ಲ..ಪೋಷಕರ ಡಿವೋರ್ಸ್ ರೂಮರ್ಸ್​ಗೆ​ ಪುತ್ರಿ ಆರಾಧ್ಯ ರಿಯಾಕ್ಷನ್​ ಹೀಗಿತ್ತಂತೆ.. Divorce rumors

Photo Instagram
Photo Instagram
Published on
Divorce  rumors: ಬಾಲಿವುಡ್‌ನ ಪವರ್ ಕಪಲ್ ಎಂದೇ ಪ್ರಸಿದ್ಧಿ ಪಡೆದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಆಗಾಗ್ಗೆ ಟ್ರೋಲ್​ಗಳಿಗೆ ಬಲಿಯಾಗುತ್ತಾರೆ. ಕೆಲವು ತಿಂಗಳ ಹಿಂದೆ ಈ ಸ್ಟಾರ್​ ಜೋಡಿ ವಿಚ್ಛೇಧನ ಪಡೆಯುತ್ತಿದ್ದಾರೆ ಎಂಬ ವದಂತಿಗಳು ಎಲ್ಲೆಡೆ ಹಬ್ಬುತ್ತಿಂದತೆಯೇ, ಈ ಊಹಾಪೋಹಗಳಿಗೆ ಫುಲ್​ಸ್ಟಾಪ್​ ಇಟ್ಟಿದ್ದಾರೆ.
ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ, ಅಭಿಷೇಕ್ ತಮ್ಮ ವಿಚ್ಛೇದನದ ವದಂತಿಗಳಿಗೆ ತಮ್ಮ ಮಗಳು ಆರಾಧ್ಯ ಅವರ ಪ್ರತಿಕ್ರಿಯೆ ಏನಾಗಿತ್ತು ಎಂಬುದನ್ನು ಬಹಿರಂಗಪಡಿಸಿದರು.
ಅಭಿಷೇಕ್ ಹಾಗೂ ಐಶ್ವರ್ಯ, ಆರಾಧ್ಯ ಅವರಲ್ಲಿ ಚಲನಚಿತ್ರೋದ್ಯಮದ ಬಗ್ಗೆ ಹೆಚ್ಚಿನ ಗೌರವವನ್ನು ತುಂಬಿದ್ದಾರೆ. ನಾವಿಬ್ಬರು ಏನು ಮಾಡುತ್ತೇವೆ ಎಂಬುದರ ಬಗ್ಗೆ ಆಕೆಗೆ ಸ್ಪಷ್ಟವಾಗಿ ತಿಳಿಸಿದ್ದೇವೆ. ನಾವು ಸಾಧಿಸಿದ ಎಲ್ಲಾವನ್ನು ಚಲನಚಿತ್ರ ಮತ್ತು ಪ್ರೇಕ್ಷಕರು ನಮಗೆ ನೀಡಿದ್ದಾರೆ.
ಆರಾಧ್ಯ ಆತ್ಮವಿಶ್ವಾಸದಿಂದ ಬೆಳೆಯುತ್ತಿರುವ ಹುಡುಗಿ. ಆಕೆಗೆ ತನ್ನದೇ ಆದ ಅನೇಕ ಅಭಿಪ್ರಾಯಗಳಿವೆ. ಆರಾಧ್ಯಳಿಗೆ ಯಾವುದೇ ವಿಚಾರದ ಬಗ್ಗೆ ವಿಭಿನ್ನ ಅಭಿಪ್ರಾಯವಿದ್ದರೆ ಅದನ್ನು ನಮ್ಮೊಂದಿಗೆ ಚರ್ಚಿಸುತ್ತಾಳೆ. ಹಾಗಾಗಿ ಆಕೆ ತನ್ನನ್ನು ತಾನು ತುಂಬಾ ಸ್ವಾಭಾವಿಕವಾಗಿ ವ್ಯಕ್ತಪಡಿಸಿಕೊಂಡಿದ್ದಾಳೆ ಎಂದು ತಿಳಿಸಿದರು.
ನನ್ನ ಮಗಳಿಗೆ 14 ವರ್ಷ ಆಕೆಗೆ ನಾವು ಮೊಬೈಲ್​ ಕೊಡಿಸಿಲ್ಲ. ಇದು ಗೂಗಲ್​ನಲ್ಲಿ ತನ್ನ ತಂದೆ ತಾಯಿ ಬಗ್ಗೆ ಮಾಹಿತಿಯನ್ನು ಹುಡುಕುವನ್ನು ನಿಲ್ಲಿಸಲು ಮಾತ್ರ. ಆರಾಧ್ಯ ಓದಿನ ಮೇಲೆ ಹೆಚ್ಚು ಗಮನ ಹರಿಸುತ್ತಾಳೆ. ಸ್ನೇಹಿತೆಯರು ಆಕೆಯೊಂದಿಗೆ ಮಾತನಾಡಬೇಕೆಂದರೆ,  ಐಶ್ವರ್ಯ ಅವರ ಫೋನ್‌ಗೆ ಕರೆ ಮಾಡುತ್ತಾರೆ. ನಾವಿಬ್ಬರೂ ಈ ನಿರ್ಧಾರದ ಬಗ್ಗೆ ಬಹಳ ಹಿಂದೆಯೇ ಚರ್ಚೆ ಮಾಡಿದ್ದೆವು.  ಆರಾಧ್ಯ ಇಂಟರ್ನೆಟ್‌ನಲ್ಲಿ ಸಾಕಷ್ಟು ಪ್ರವೇಶವನ್ನು ಪಡೆದಿದ್ದರೂ, ಹೆಚ್ಚಾಗಿ ಓದುವುದು, ತನ್ನ ಕೆಲಸವನ್ನು ಮಾಡಿಕೊಳ್ಳುವುದರಲ್ಲಿ ಕಾಲ ಕಳೆಯುತ್ತಾಳೆ. ಆಕೆ ಶಾಲೆಯನ್ನು ತುಂಬಾ ಪ್ರೀತಿಸುತ್ತಾಳೆ ಎಂದು ಹೇಳಿದರು.
ಅಭಿಷೇಕ್ ಮತ್ತು ಐಶ್ವರ್ಯಾ ಅವರ ವಿಚ್ಛೇದನದ ಸುದ್ದಿ ಸಾಕಷ್ಟು ಜನಪ್ರಿಯವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲೂ ಸುದ್ದಿಗಳು ಹರಿದಾಡುತ್ತಿದ್ದವು. ಈ ವಿಷಯ ಆರಾಧ್ಯಗೆ ತಿಳಿದಾಗ ಹೇಗೆ ಪ್ರತಿಕ್ರಿಯಿಸಿದರು ಎಂಬುದಕ್ಕೆ ಉತ್ತರಿಸಿದ ಅವರು ಇದು ನನ್ನ ಮಗಳ ಮೇಲೆ ಪರಿಣಾಮ ಬೀರಿದೆ ಎಂದು ನಾನು ಭಾವಿಸುವುದಿಲ್ಲ. ಏಕೆಂದರೆ, ಆಕೆಗೆ ಈ ವಿಷಯದ ಬಗ್ಗೆ ಆಸಕ್ತಿ ಇಲ್ಲ. ಕುಟುಂಬದ ವಿಚಾರದ ಬಗ್ಗೆ ಬರುಬವಂತಹ ಸುದ್ದಿಗಳು ಎಲ್ಲವೂ ನಿಜವಲ್ಲ ಎಂದು ನಾವು ಈಗಾಗಲೇ ಅರ್ಥ ಮಾಡಿಸಿದ್ದೇವೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net