ಏನು ಬೊಗಳುತ್ತಿದ್ದೀರಿ? ನಾನ್ಯಾರಿಗೆ ಮಮ್ಮಾ? ನಡುರಸ್ತೆಯಲ್ಲಿ ಪಾಪಾರಾಜಿಗಳ ಚಳಿ ಬಿಡಿಸಿದ ಶ್ರುತಿ ಹಾಸನ್​! Shruti Haasan on Paparazzi

ಶ್ರುತಿ ಹಾಸನನ್ನು ಮಮ್ಮಾ ಎಂದ ಪಾಪಾರಾಜಿಗಳು
ಶ್ರುತಿ ಹಾಸನನ್ನು ಮಮ್ಮಾ ಎಂದ ಪಾಪಾರಾಜಿಗಳು
Published on

ಪ್ರಮುಖ ಮುಖ್ಯಾಂಶಗಳು

  • ಶ್ರುತಿ ಹಾಸನನ್ನು ಮಮ್ಮಾ ಎಂದ ಪಾಪಾರಾಜಿಗಳು
  • ನನ್ಯಾರಿಗೆ ಮಮ್ಮಾ? ಏನು ಬೊಗಳುತ್ತಿದ್ದಿರಿ? ಎಂದ ನಟಿ
  • ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ಫುಲ್​ ವೈರಲ್​
ಮುಂಬೈ: ಬಾಲಿವುಡ್​ನಲ್ಲಿ ಇತ್ತೀಚೆಗೆ ಈ ಪಾಪಾರಾಜಿಗಳ ಹಾವಳಿ ಅತಿರೇಕವಾಗಿದೆ ಎಂದರೆ ಸುಳ್ಳಲ್ಲ. ನಟ-ನಟಿಯರು ಏರ್​ಪೋರ್ಟ್​, ಜಿಮ್​, ಮನೆ, ಶೂಟಿಂಗ್​ ಎಲ್ಲಿಂದಲೇ ಆಚೆ ಬಂದರೂ ಅವರ ಹಿಂದೆ ಓಡಾಡುತ್ತಾ, ಚಿತ್ರ-ವಿಚಿತ್ರ ಭಂಗಿಯಲ್ಲಿ ಅವರ ಫೋಟೊ, ವಿಡಿಯೋವನ್ನು ಸೆರೆಹಿಡಿಯುವುದೇ ಇವರ ಕೆಲಸವಾಗಿದೆ.
ಇವರ ಈ ಅತಿರೇಕದ ವರ್ತನೆಯಿಂದ ಅನೇಕ ನಟ-ನಟಿಯರು ಬೇಸತ್ತು, ಇವರ ಮೇಲೆ ಕೂಗಾಡಿರುವ ಘಟನೆ ಸಹ ನಡೆದಿದೆ. ಹಾಗೆಯೇ ಇತ್ತೀಚೆಗೆ ಬಹುಭಾಷಾ ನಟಿ ಶ್ರುತಿ ಹಾಸನ್​ (Shruti Haasan on Paparazzi) ಈ ಪಾಪಾರಾಜಿಗಳನ್ನು ಕೈ ತೆಗೆದುಕೊಂಡಿರುವ ವಿಡಿಯೋ ಇದೀಗ ವೈರಲ್​ ಆಗುತ್ತಿದೆ.

ನಾನು ಯಾರಿಗೆ ಅಮ್ಮ?

ವೈರಲ್​ ಆಗುತ್ತಿರುವ ವಿಡಿಯೋನಲ್ಲಿ ನಟಿ ಶ್ರುತಿ ಹಾಸನ್​, ಯಾವುದೋ ಮಾರುಕಟ್ಟೆ (Market) ಯಿಂದ ಹೊರಬರುತ್ತಿದ್ದಂತೆ, ಪಾಪಾರಾಜಿಗಳು ನಟಿಯನ್ನು ಸುತ್ತುವರೆದಿದ್ದಾರೆ. ತಮ್ಮ ಕ್ಯಾಮಾರಾಗಳತ್ತ ನೋಡುವಂತೆ ಮಾಡಲು ಕೆಲವರು ಶ್ರುತಿ ಅವರಿಗೆ ಮಮ್ಮಾ.. ಮಮ್ಮಾ.. ಎಂದು ಕರೆದಿದ್ದಾರೆ.
ಈ ಮಾತನ್ನು ಕೇಳಿಸಿಕೊಂಡು ರೇಗಿ ಹೋದ ಶ್ರುತಿ, ಏನದು ಮಮ್ಮಾ, ಮಮ್ಮಾ, ನಾನ್ಯಾರಿಗೆ ಮಮ್ಮಾ? ನಿಮ್ಮ ಮಮ್ಮಾನಾ? ಏನು ಬೊಗಳುತ್ತಿದ್ದಿರಿ? ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ವಿಡಿಯೋ ಇದೀಗ ಎಲ್ಲಡೆ ವೈರಲ್ ಆಗುತ್ತಿದ್ದು, ಜನ ಶ್ರುತಿ ಅವರ ಈ ನಡೆಗೆ ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಶ್ರುತಿ ಬೈದಿರುವುದು ಸರಿಯಾಗಿಯೇ ಇದೆ. ಈ ಪಾಪಾರಾಜಿಗಳನ್ನು ಬಹಳ ಅತಿಯಾಯಿತು ಎಂದು ಒಬ್ಬ ಬಳಕೆದಾರರು ಹೇಳಿದ್ದಾರೆ. ಇಷ್ಟೇ ಅಲ್ಲ ತೆಗೆದು ನಾಲ್ಕು ಬಿಡಬೇಕಿತ್ತೆಂದು ಇನ್ನೊಬ್ಬರು ಬರೆದಿದ್ದಾರೆ. ಅವನು ಮಮ್ಮಾ ಅಂದೇ ಕರೆದಿದ್ದ, ಅವಾಚ್ಯ ಪದವನ್ನೇನು ಬಳಸಿರಲಿಲ್ಲ, ಕೋಪಗೊಳ್ಳುವ ಅಗತ್ಯವಿರಲಿಲ್ಲ ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯವನ್ನು ಕಮೆಂಟ್​ನಲ್ಲಿ ತಿಳಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net