ಅಮೃತಸರಕ್ಕೆ ಭೇಟಿ ನೀಡಿದ್ದ ಪ್ರಿಯಾಂಕಾ ಅಲ್ಲಿನ ರುಚಿಕರವಾದ ಉತ್ತರ ಭಾರತದ ಶೈಲಿಯ ಊಟವನ್ನು ಸವಿದಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಶೇಷ 'ಥಾಲಿ'ಯ ಫೋಟೋ ಹಂಚಿಕೊಂಡಿರುವ ಅವರು, "ಜಸ್ಟ್ ಅಮೃತಸರ ಥಿಂಗ್ಸ್..." (Just Amritsar things...) ಎಂದು ಬರೆದುಕೊಂಡಿದ್ದಾರೆ. ಈ ಥಾಲಿಯಲ್ಲಿ ಪಂಜಾಬ್‌ನ ಫೇಮಸ್ ಅಮೃತಸರಿ ಕುಲ್ಚಾ, ದಾಲ್ ಮಖನಿ, ಚೋಲೆ, ಮೊಸರು ಮತ್ತು ಉಪ್ಪಿನಕಾಯಿ ಇತ್ತು. ಈ ಸ್ಟೋರಿಗೆ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಅವರ 'ಸೋಹ್ನಿ ಲಗ್ದಿ' ಹಾಡನ್ನು ಹಿನ್ನೆಲೆಯಾಗಿ ಬಳಸುವ ಮೂಲಕ ಪಕ್ಕಾ ಪಂಜಾಬಿ ವೈಬ್ ಕ್ರಿಯೇಟ್ ಮಾಡಿದ್ದರು.